Thursday, May 9, 2024
Homeರಾಷ್ಟ್ರೀಯರಾಹುಲ್‌ ಗಾಂಧಿ ವಿರುದ್ಧ ಟೀಕೆ : ಎಲ್‌ಡಿಎಫ್‌ ಶಾಸಕನ ವಿರುದ್ಧ ಪ್ರಕರಣ ದಾಖಲು

ರಾಹುಲ್‌ ಗಾಂಧಿ ವಿರುದ್ಧ ಟೀಕೆ : ಎಲ್‌ಡಿಎಫ್‌ ಶಾಸಕನ ವಿರುದ್ಧ ಪ್ರಕರಣ ದಾಖಲು

ಪಾಲಕ್ಕಾಡ್‌ (ಕೇರಳ), ಅ 27-ರಾಹುಲ್‌ ಗಾಂಧಿ ನಾಲ್ಕನೇ ದರ್ಜೆಯ ಪ್ರಜೆ ಮತ್ತು ಅವರು ಡಿಎನ್‌ಎ ಆಗಿರಬೇಕು ಟೀಕಿಸಿದ ಎಲ್‌ಡಿಎಫ್‌ ಶಾಸಕ ಪಿ ವಿ ಅನ್ವರ್‌ ವಿರುಧ್ಧ ಪ್ರಕರಣ ದಾಖಲಾಗಿದೆ.

ಕಳೆದ ಏ22 ರಂದು ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಶಾಸಕ ಅನ್ವರ್‌, ಕಾಂಗ್ರೆಸ್‌‍ ನಾಯಕನಿಗೆ ಗಾಂಧಿ ಎಂಬ ಉಪನಾಮದಿಂದ ಕರೆಯುವ ಅರ್ಹತೆ ಇಲ್ಲ ಆತ ನಾಲ್ಕನೇ ದರ್ಜೆಯ ಪ್ರಜೆ ಮತ್ತು ಅವರು ಡಿಎನ್‌ಎ ಆಗಿರಬೇಕು ಎಂದು ಹೇಳಿದ್ದರು.

ಘಟನೆಯ ನಂತರ ದ್ವೇಷ ಬಾಷಣ ಸಂಬಂಧ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನಿರ್ದೇಶನದ ಮೇರೆಗೆ ಶಾಸಕರ ವಿರುದ್ಧ ನಟ್ಟುಕಲ್‌ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅನ್ವರ್‌ ವಿರುದ್ಧ ಐಪಿಸಿಯ ಸೆಕ್ಷನ್‌ 153 ಎ (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 125 (ಚುನಾವಣೆಗೆ ಸಂಬಂಧಿಸಿದಂತೆ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಲಾಗಿದೆ.

ವಕೀಲ ಬೈಜು ನೋಯೆಲ್‌ ರೊಸಾರಿಯೊ ಸಲ್ಲಿಸಿದ ದೂರಿನ ಮೇರೆಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನಿರ್ದೇಶನ ಬಂದಿದೆ.ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರನ್ನು ಕೇಂದ್ರ ತನಿಖಾ ಸಂಸ್ಥೆ ಏಕೆ ವಿನಾಯಿತಿ ನೀಡಿದೆ ಎಂದು ಪ್ರಶ್ನಿಸಿದ ಕಾಂಗ್ರೆಸ್‌‍ ನಾಯಕರ ಹೇಳಿಕೆಗೆ ಹಿನ್ನೆಲೆಯಲ್ಲಿ ರಾಹುಲ್‌ ವಿರುದ್ಧ ಅನ್ವರ್‌ ಟೀಕೆಗಳ ಸುರಿಮಳೆ ಹರಿದಿತ್ತು. ಎಲ್‌ಡಿಎಫ್‌ ಶಾಸಕರ ಟೀಕೆಗಳನ್ನು ನಂತರ ವಿಜಯನ್‌ ಸಮರ್ಥಿಸಿಕೊಂಡರು, ಅವರು ಕಾಂಗ್ರೆಸ್‌‍ ನಾಯಕ ಟೀಕೆಗೆ ಮೀರಿದವರಲ್ಲ ಎಂದು ಹೇಳಿ

RELATED ARTICLES

Latest News