Friday, September 20, 2024
Homeರಾಜ್ಯಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು

ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು

ಬೆಂಗಳೂರು,ಆ.20- ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸುತ್ತಮುತ್ತ ಕಳೆದ ಹಲವು ತಿಂಗಳಿನಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆಬಿದ್ದಿದೆ. ಕಳೆದ ರಾತ್ರಿ ಅರಕೆರೆ ಗ್ರಾಮ ಸಮೀಪದ ಜಮೀನಿನಲ್ಲಿ ಅಡಗಿ ಕುಳಿತಿದ್ದ ಚಿರತೆಯನ್ನು ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಬೋನ್‍ಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡಿ.ಎಚ್.ಮಂಜುನಾಥ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಚಿರತೆ ಎರಡು ದಿನಗಳ ಹಿಂದೆ ದಾಳಿ ನಡೆಸಿ ಹಸುವನ್ನು ತಿಂದುಹಾಕಿತ್ತು. ಇದರಿಂದ ಈ ಭಾಗದ ರೈತರು ಹಗಲಿನಲ್ಲೇ ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಹಸುವನ್ನು ಕೊಂದಿದ್ದ ಚಿರತೆ ಪುನಃ ಸೋಮವಾರ ರಾತ್ರಿ ಅದೇ ಜಮೀನಿಗೆ ಆಗಮಿಸಿತ್ತು. ಇದರ ಸುಳಿವು ಅರಿತ ಅರಣ್ಯಾ„ಕಾರಿಗಳ ನುರಿತ ತಂಡ ಅದೇ ಜಾಗದಲ್ಲಿ ಬೋನ್ ಇರಿಸಿದ್ದರು.

ಹಸುವನ್ನು ಹುಡುಕಿಕೊಂಡು ಬಂದ ಚಿರತೆ ಕೊನೆಗೂ ಬೋನ್‍ಗೆ ಸಿಲುಕಿದ್ದು, ಅರಣ್ಯಾಧಿಕಾರಿಗಳ ಕಾರ್ಯಾಚರಣೆ ಯಶಸ್ವಿಯಾಗಿದೆ.
ಅರಕೆರೆ, ನರಸಗೊಂಡನಹಳ್ಳಿ, ಎ.ಕೆ.ಕಾಲೋನಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆ, ಕರಡಿ, ಹಂದಿಗಳ ಕಾಟದಿಂದ ರೈತರು ಬೇಸತ್ತು ಹೋಗಿದ್ದರು. ಅದರಲ್ಲೂ ಸಂಜೆ 5 ಗಂಟೆಯ ನಂತರ ಈ ಕಾಡು ಪ್ರಾಣಿಗಳು ಆಹಾರ ಹುಡುಕಿಕೊಂಡು ಗ್ರಾಮಗಳಿಗೆ ಆಗಮಿಸುತ್ತಿದುದು ಜನರಲ್ಲಿ ಆತಂಕ ಹುಟ್ಟಿಸಿತ್ತು.

ಜಾನುವಾರುಗಳ ಮೇಲೆ ದಾಳಿ, ನಾಯಿಗಳನ್ನು ಹೊತ್ತುಕೊಂಡು ಹೋದರೆ, ಹಂದಿಗಳು ಬೆಳೆದು ನಿಂತ ಫಸಲಿಗೆ ಹಾನಿ ಮಾಡುತ್ತಿದ್ದವು. ಬಾಳೆ, ಮೆಕ್ಕೆಜೋಳ, ರಾಗಿ ಸೇರಿದಂತೆ ಮತ್ತಿತರ ಬೆಳೆಗಳನ್ನು ಹಾಳು ಮಾಡುತ್ತಿದ್ದವು.

ಇದರಿಂದ ಕಾಡುಪ್ರಾಣಿಗಳನ್ನು ಸೆರೆ ಹಿಡಿಯಬೇಕೆಂದು ಅನೇಕ ಬಾರಿ ರೈತರು ಪ್ರತಿಭಟನೆ ನಡೆಸಿ ಅರಣ್ಯಾ„ಕಾರಿಗಳಿಗೆ ದೂರುಗಳನ್ನು ಕೊಟ್ಟಿದ್ದರು. ಚಿರತೆ ಹಾವಳಿ ಹೆಚ್ಚಾದ ಹಿನ್ನಲೆಯಲ್ಲಿ ಅರಣ್ಯಾ„ಕಾರಿಗಳ ತಜ್ಞರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಹಿಡಿದಿರುವುದು ಸಾರ್ವಜನಿಕರಲ್ಲಿ ನೆಮ್ಮದಿಯ ನಿಟ್ಟುಸಿರು ತಂದಿದೆ. ಸೆರೆ ಹಿಡಿದಿರುವ ಚಿರತೆಯನ್ನು ಅರಣ್ಯಾ„ಕಾರಿಗಳು ದೂರದ ಅರಣ್ಯ ಪ್ರದೇಶಕ್ಕೆ ಬಿಡಲು ತೀರ್ಮಾನಿಸಿದ್ದಾರೆ.

RELATED ARTICLES

Latest News