Tuesday, July 29, 2025
Homeಜಿಲ್ಲಾ ಸುದ್ದಿಗಳು | District Newsನಾಯಿಗಳ ಆರ್ಭಟಕ್ಕೆ ಹೆದರಿ ಚಿರತೆ ಪರಾರಿ..!

ನಾಯಿಗಳ ಆರ್ಭಟಕ್ಕೆ ಹೆದರಿ ಚಿರತೆ ಪರಾರಿ..!

Leopard flees after being scared by the of dogs..!

ದೊಡ್ಡಬಳ್ಳಾಪುರ,ಜು.29- ದಾಳಿಗೆ ಬಂದ ಚಿರತೆ ಸಾಕು ನಾಯಿಗಳ ಆರ್ಭಟಕ್ಕೆ ಬೆದರಿ ಪರಾರಿಯಾಗಿರುವ ಘಟನೆ ತಾಲೂಕಿನ ಮಾಕಳಿ ಬಳಿ ನಡೆದಿದೆ.ಬೆಂಗಳೂರು ಮೂಲದ ಸುರೇಂದ್ರ ಎನ್ನುವವರಿಗೆ ಸೇರಿದ ತೋಟದಲ್ಲಿರುವ ಸಾಕು ನಾಯಿಗಳ ಮೇಲೆ ಚಿರತೆ ದಾಳಿ ನಡೆಸಲು ಪದೇ ಪದೇ ಪ್ರಯತ್ನ ನಡೆಸಿದೆ. ಆದರೆ ನಾಯಿಗಳ ಆರ್ಭಟಕ್ಕೆ ಚಿರತೆಯ ದಾಳಿ ಯತ್ನ ವಿಫಲವಾಗಿದೆ.

ಈ ದೃಶ್ಯ ತೋಟದಲ್ಲಿ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ದೊಡ್ಡಬಳ್ಳಾಪುರ ತಾಲೂಕಿನ ಘಾಟಿ, ಮಾಕಳಿ, ಉಜ್ಜನಿ, ಹುಲುಕುಡಿ ಬೆಟ್ಟದ ಸಾಲಿನಲ್ಲಿ ವನ್ಯಜೀವಿಗಳು ಹೆಚ್ಚಾಗಿದ್ದು, ಇತ್ತೀಚಿಗೆ ಬೆಟ್ಟಕ್ಕೆ ಸಮೀಪದ ತೋಟಗಳಿಗೆ ನುಗ್ಗಿ ಹಾವಳಿ ಸೃಷ್ಟಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

RELATED ARTICLES

Latest News