ಮಹಾರಾಜ್‍ಗಂಜ್, ಫೆ.17 (ಪಿಟಿಐ) ಹನ್ನೆರಡು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೈದ ಪ್ರಕರಣದಲ್ಲಿ ಅಪರಾಗಳೆಂದು ತೀರ್ಪು ನೀಡಿದ ಇಲ್ಲಿನ ನ್ಯಾಯಾಲಯವು ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿನೋದ್ ಸಿಂಗ್ ಅವರು ಹೆಚ್ಚುವರಿ ಸೆಷನ್ಸ್ ನ್ಯಾಯಾೀಧಿಶ ವಿನಯ್ ಕುಮಾರ್ ಸಿಂಗ್ ಅವರ ನ್ಯಾಯಾಲಯವು ಐವರು ಪುರುಷರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ತಿಳಿಸಿದ್ದಾರೆ.
ಪಂಕಜ್ ಸಾಹ್ನಿ, ವಿವೇಕ್, ಗೋವಿಂದ್ ಚೌಹಾಣ್, ಸೋನು ಮತ್ತು ರಾಮ್ ನಾರಾಯಣ್ ರಾಜ್ಭರ್ ಅವರು ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿಗಳು ಎಂದು ಗುರುತಿಸಲಾಗಿದೆ. 2021 ರಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ತೀರ್ಪು ನೀಡಿದೆ. ಇದರ ಜತೆಗೆ ನ್ಯಾಯಾಲಯವು ಪ್ರತಿ ಅಪರಾಧಿಗಳಿಗೆ 90,000 ರೂ.ಗಳ ದಂಡ ವಿಧಿಸಿದೆ.
ಹೂಡಿಕೆದಾರರ ದಾರಿದೀಪವಾಗುತ್ತಿದೆ ಭಾರತ
2021 ರ ಜ.18ರಂದು ಉತ್ತರಪ್ರದೇಶದ ಮಹಾರಾಜ್‍ಗಂಜ್ ಜಿಲ್ಲೆಯ ಪುರೇಂದರ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಖಾಲಿಕ್‍ಗರ್ ಗ್ರಾಮದಲ್ಲಿ ಆರೋಪಿಗಳು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು.