Saturday, January 11, 2025
Homeರಾಜ್ಯನಿಮ್ಮ ಜೊತೆಗೆ ನಿಮ್ಮ ಪುತ್ರನನ್ನು ಕೊಲೆ ಮಾಡುತ್ತೇವೆ; ಸಿ ಟಿ ರವಿಗೆ ಬೆದರಿಕೆ ಪತ್ರ

ನಿಮ್ಮ ಜೊತೆಗೆ ನಿಮ್ಮ ಪುತ್ರನನ್ನು ಕೊಲೆ ಮಾಡುತ್ತೇವೆ; ಸಿ ಟಿ ರವಿಗೆ ಬೆದರಿಕೆ ಪತ್ರ

ಬೆಂಗಳೂರು,ಜ.11- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಬೆಳಗಾವಿ ಸುವರ್ಣ ಸೌಧದಲ್ಲೇ ಅಶ್ಲೀಲ ಪದ ಬಳಸಿದ ಆರೋಪದಲ್ಲಿ ಪೊಲೀಸರಿಜಕಂದ ಬಂಧನಕ್ಕೊಳಪಟ್ಟು ಸಿಐಡಿ ತನಿಖೆ ಎದುರಿಸುತ್ತಿರುವ ಬಿಜೆಪಿ ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಹಾಗೂ ಅವರ ಪುತ್ರನಿಗೆ ಅನಾಮಧೇಯ ವ್ಯಕ್ತಿಗಳಿಂದ ಬೆದರಿಕೆಯ ಪತ್ರ ಬಂದಿದೆ. ಅನಾಮಧೇಯ ಪತ್ರದಲ್ಲಿ 15 ದಿನದೊಳಗೆ ಚಿಕ್ಕಮಗಳೂರಿನಿಂದ ಬೆಳಗಾವಿಗೆ ಬಂದು ಅಭಿನೇತ್ರಿಯ ಕೈಕಾಲು ಹಿಡಿದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಚಿಕ್ಕಮಗಳೂರಿನಲ್ಲಿರುವ ನಿಮ ಮನೆಗೆ ನುಗ್ಗಿ ನಿಮ ಕೈಕಾಲು ಮುರಿದು ಸಾಯಿಸುತ್ತೇನೆ. ನಿಮ್ಮ ಜೊತೆಗೆ ನಿಮ್ಮ ಪುತ್ರನನ್ನು ಕೊಲೆ ಮಾಡುತ್ತೇವೆ ಹುಷಾರಾಗಿರಿ ಎಂದು ಬೆದರಿಕೆ ಹಾಕಿದ್ದಾನೆ.

ಇನ್ನು ಪ್ರಕರಣ ಕುರಿತಂತೆ ಸಿ.ಟಿ.ರವಿ ಅವರ ಆಪ್ತ ಕಾರ್ಯದರ್ಶಿ ಚೇತನ್‌ ಬಸವನಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಎಸ್ಪಿ ವಿಕ್ರಮ್‌ ಅಮ್ಟೆ , ತತ್‌ಕ್ಷಣವೇ ಜಾರಿಯಾಗುವಂತೆ ಸಿ.ಟಿ.ರವಿ, ಪುತ್ರ ಸೂರ್ಯ ಸೇರಿದಂತೆ ಅವರ ಕುಟುಂಬದವರಿಗೆ ಹೆಚ್ಚಿನ ಭದ್ರತೆ ಒದಗಿಸುತ್ತೇವೆ ಎಂದು ಹೇಳಿದ್ದಾರೆ. ಬೆಳಗಾವಿಯ ಸುವರ್ಣಸೌಧದ ಕಲಾಪ ನಡೆಯುತ್ತಿದ್ದ ವೇಳೆ, ಸಿ.ಟಿ.ರವಿ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ನಡುವೆ ಮಾತಿನ ಚಕಮಕಿ ನಡೆದಿತ್ತು. ರವಿ ಅವರನ್ನು ನೀವೊಬ್ಬ ಕೊಲೆಗಾರ. ಇಬ್ಬರನ್ನು ಅಪಘಾತದಲ್ಲಿ ಸಾಯಿಸಿದ್ದೀಯ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಗಂಭೀರ ಆರೋಪ ಮಾಡಿದ್ದರು.

ಈ ಸಂದರ್ಭದಲ್ಲಿ ಸಹನೆ ಕಳೆದುಕೊಂಡ ರವಿ, ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ದ ಅಶ್ಲೀಲ ಪದ ಬಳಸಿದ್ದು ದೊಡ್ಡ ವಿವಾದ ಸೃಷ್ಟಿಸಿತ್ತು. ಸಚಿವೆ ಲಕ್ಷೀ ಹೆಬ್ಬಾಳ್ಕರ್‌ ಅವರ ವಿರುದ್ಧ ಪರಿಷತ್‌ನಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಆಕ್ರೋಶಗೊಂಡ ಜನರ ಗುಂಪೊಂದು ಸಿಟಿ ರವಿ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು. ಅವಳಹೇಳನಕಾರಿ ಪದ ಬಳಕೆ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ. ಸಿಟಿ ರವಿ ಅವರು ಶುಕ್ರವಾರ ಸಿಐಡಿ ವಿಚಾರಣೆಗೆ ಹಾಜರಾಗಿದ್ದರು.

RELATED ARTICLES

Latest News