ರಾಯ್‌ಪುರ, ಸೆ19- ಛತ್ತೀಸ್‌ಗಢ ಭ್ರಷ್ಟಾಚಾರ ನಿಗ್ರಹ ದಳದ ಆರ್ಥಿಕ ಅಪರಾಧಗಳ ವಿಭಾಗ ಮದ್ಯ ಹಗರಣವೊಂದರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ನಿರಂಜನ್ ದಾಸ್ ಅವರನ್ನು ಬಂಧಿಸಿದೆ. ರಾಜ್ಯ ಅಬಕಾರಿ ಇಲಾಖೆಯಲ್ಲಿ ಈ ಹಿಂದೆ ಆಯುಕ್ತರಾಗಿದ್ದ ನಿರಂಜನ್ ದಾಸ್ ಅವರು ಮದ್ಯ ಹಗರಣವನ್ನು ನಿರ್ವಹಿಸಿದ ಮತ್ತು ವಂಚಕರ ಸಿಂಡಿಕೇಟ್‌ಗೆ ಸಹಾಯ ಮಾಡಿ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಸ್ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿ ಹೇಳಿದರು.ರಾಜ್ಯ ಸ್ವಾಮ್ಯದ ಮದ್ಯದ ಅಂಗಡಿಗಳಲ್ಲಿ ಲೆಕ್ಕವಿಲ್ಲದ ಮದ್ಯ ಮಾರಾಟ, ಅಧಿಕಾರಿಗಳ ವರ್ಗಾವಣೆ, ಟೆಂಡರ್ ಪ್ರಕ್ರಿಯೆಯಲ್ಲಿ ಕುಶಲತೆ, ದೋಷಪೂರಿತ ಮದ್ಯ ನೀತಿಯನ್ನು ತರುವಲ್ಲಿ ಲಾಭ ಸೇರಿ ವಂಚನೆಯ ಸಿಂಡಿಕೇಟ್‌ಗೆ ಲಾಭವಾಗುವ ಇತರ ಮಾರ್ಗಗಳಿಗಾಗಿ ಕೋಟ್ಯಂತರ ರೂಪಾಯಿಗಳ ಅನುಚಿತ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.
ದಾಸ್ ಛತ್ತೀಸ್‌ಗಢ ರಾಜ್ಯ ಕೇಡರ್ ಅಧಿಕಾರಿಯಾಗಿದ್ದು, ಅವರನ್ನು ಭಾರತೀಯ ಆಡಳಿತ ಸೇವೆಗೆ ಬಡ್ತಿ ನೀಡಲಾಯಿತು. ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಎರಡನೇ ಮಾಜಿ ಐಎಎಸ್ ಅಧಿಕಾರಿ ಎಂದು ತಿಳಿಸಿದ್ದಾರೆ.
ಛತ್ತೀಸ್‌ಗಢದಲ್ಲಿ ಭೂಪೇಶ್ ಬಾಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ 2019 ಮತ್ತು 2022 ರ ನಡುವೆ 2,500 ಕೋಟಿ ರೂ.ಗಳಿಗೂ ಹೆಚ್ಚಿನ ಹಗರಣ ನಡೆದಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.ಈ ಹಗರಣದ ಹಣ ವರ್ಗಾವಣೆಯ ಭಾಗವನ್ನು ಇಡಿ ತನಿಖೆ ನಡೆಸುತ್ತಿದೆ.
ಎಸಿಬಿ/ಇಒಡಬ್ಲ್ಯೂ ಕಳೆದ ವರ್ಷ ಜ 17 ರಂದು ಮದ್ಯ ಹಗರಣದಲ್ಲಿ ಎಫ್‌ಐರ್ಆ ದಾಖಲಿಸಿ, ಮಾಜಿ ಅಬಕಾರಿ ಸಚಿವ ಕವಾಸಿ ಲಖಾ ಮತ್ತು ಮಾಜಿ ಮುಖ್ಯ ಕಾರ್ಯದರ್ಶಿ ವಿವೇಕ್ ಧಂಡ್ ಸೇರಿದಂತೆ 70 ವ್ಯಕ್ತಿಗಳು ಮತ್ತು ಕಂಪನಿಗಳನ್ನು ಹೆಸರಿಸಿತ್ತು. ಇದುವರೆಗೆ ಒಂದು ಚಾರ್ಜ್‌ಶೀಟ್ ಮತ್ತು ನಾಲ್ಕು ಪೂರಕ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ ಮತ್ತು 12ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.