Sunday, January 19, 2025
Homeರಾಜ್ಯಉಳ್ಳಾಲ ಕೋಟೆಕಾರ್ ಬ್ಯಾಂಕ್ ದರೋಡೆಗೆ ಸ್ಥಳೀಯ ವ್ಯಕ್ತಿಗಳಿಂದ ನೆರವು..?

ಉಳ್ಳಾಲ ಕೋಟೆಕಾರ್ ಬ್ಯಾಂಕ್ ದರೋಡೆಗೆ ಸ್ಥಳೀಯ ವ್ಯಕ್ತಿಗಳಿಂದ ನೆರವು..?

Locals helped in Ullal Kotekar Bank robbery.. ?

ಮಂಗಳೂರು,ಜ.19– ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಸ್ಶಳೀಯರ ಸಹಕಾರ ನೀಡಿದ್ದಾರೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪೂರ್ವನಿಯೋಜಿತದಂತೆ ಕೇವಲ 5 ನಿಮಿಷದಲ್ಲಿ ಸುಮಾರು 10 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಗೋಣಿಚೀಲದಲ್ಲಿ ತುಂಬಿಕೊಂಡು ಕಾರಿನಲ್ಲಿ ಪರಾರಿಯಾಗಿರುವ ದುಷ್ಕರ್ಮಿಗಳ ಜಾಡು ಹಿಡಿದು ಪೊಲೀಸರ ತಂಡ ಶೋಧ ಕಾರ್ಯ ನಡೆಸಿರುವ ನಡುವೆಯೇ ರಾಜ್ಯದ ಅತಿ ದೊಡ್ಡ ದರೋಡೆ ಪ್ರಕರಣವೆಂದು ಬಿಂಬಿತವಾಗಿರುವ ಈ ಕೃತ್ಯಕ್ಕೆ ಸ್ಥಳೀಯರು ಮತ್ತು ಬ್ಯಾಂಕ್ನ ಬಗ್ಗೆ ಸಂಪೂರ್ಣ ತಿಳಿದಿರುವವರು ಸಹಕಾರ ನೀಡಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ದರೋಡೆಗೆ ನಿಗದಿಪಡಿಸಿದ್ದ ಸಮಯ ಮತ್ತು ಪರಾರಿಯಾಗಲು ಬಳಸಿದ್ದ ತಂತ್ರಗಾರಿಕೆ ಪತ್ತೆಹಚ್ಚುವುದು ಪೊಲೀಸರಿಗೆ ಈಗ ದೊಡ್ಡ ಸವಾಲಾಗಿದೆ. ದರೋಡೆ ಕೋರರು ಕೇರಳ ಪ್ರವೇಶಿಸಿ ನಂತರ ನಾಪತ್ತೆಯಾಗಿದ್ದು, ಅವರು ಜಲಮಾರ್ಗದ ಮೂಲಕ ತಮಿಳುನಾಡಿಗೆ ಹೋಗಿರಬಹುದೆಂದು ಶಂಕೆ ವ್ಯಕ್ತಪಡಿಸಿ ಪೊಲೀಸರ ಒಂದು ತಂಡ ಅಲ್ಲಿ ಕಾರ್ಯಾಚರಣೆ ಆರಂಭಿಸಿದೆ.

ಸಂಪೂರ್ಣ ಘಟನೆ ಹಿಂದೆ ವ್ಯಕ್ತಿಯೊಬ್ಬನ ಪಾತ್ರವಿದ್ದು ಆತನ ಮಾಹಿತಿ ಪಡೆದು ಸೆರೆಗೆ ಬಲೆ ಬೀಸಲಾಗಿದೆ. ಮುಖ್ಯಮಂತ್ರಿ ಮಂಗಳೂರಿಗೆ ಬರುವ ದಿನವನ್ನು ನಿಗದಿಪಡಿಸಿ ಪೊಲೀಸರ ಗಮನವನ್ನು ಬೇರೆಡೆಗೆ ಸೆಳೆದು ಕೇವಲ 5 ನಿಮಿಷದಲ್ಲಿ ಈ ದೊಡ್ಡ ದರೋಡೆ ನಡೆದಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆಯೆಂಬ ಆರೋಪಗಳ ನಡುವೆಯೇ ನಡುವೆ ನಡೆದ ಈ ಘಟನೆ ಬೆಚ್ಚಿ ಬೀಳಿಸಿದೆ. ಬೀದರ್ನಲ್ಲಿ ಎಟಿಎಂ ಸಿಬ್ಬಂದಿಯ ಕೊಂದು ಒಂದು ಕೋಟಿ ರೂ. ದೋಚಿದ್ದ ಘಟನೆ ಹಾಗೂ ಮಂಗಳೂರಿನ ಬ್ಯಾಂಕ್ ದರೋಡೆ ಪ್ರಕರಣದ ಬಗ್ಗೆ ಪೊಲೀಸರಿಗೆ ಪತ್ತೆ ಹಚ್ಚುವ ಕಾರ್ಯ ದೊಡ್ಡ ಸವಲಾಗಿದೆ.

RELATED ARTICLES

Latest News