ಚಿಕ್ಕಬಳಾಪುರ,ಏ.20-ಕಾಂಗೇಸ್‍ನ ಯುಪಿಎ ಸರ್ಕಾರದ 10 ವರ್ಷದ ಅವಧಿಯಲ್ಲಿ ಭ್ರಷ್ಟಾಚಾರ,ಹಗರಣದ ಮೂಲಕ ದೇಶದ ಸಂಪತ್ತು ಲೋಟಿ ಹೊಡೆದು ದೇಶದ ಜನತೆಗೆ ಖಾಲಿ ಚಂಬು ಕೊಟ್ಟಿದ್ದನ್ನು ಪ್ರಚಾರ ಮಾಡಿದ್ದಾರೆ ಅದನ್ನು ಮೋದಿ ಅಕ್ಷಯ ಪಾತ್ರೆಯನ್ನು ಮಾಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್,ಡಿ.ದೇವೇಗೌಡ ಟೀಕಿಸಿದ್ದಾರೆ.
ಇಲ್ಲಿ ನಡೆದ ಎನ್‍ಡಿಎ ಸಮಾವೇಶದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ 10 ವರ್ಷದಲ್ಲಿ ದೀನ ದಲಿತರ ,ಹರಿಜನರ ಅಭಿವೃದ್ದಿಗೆ ಶ್ರಮಿಸಿದ್ದಾರೆ ಅಂತಹ ವ್ಯಕ್ತಿಯ ಮೇಲೆ ಕ್ಷುಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು.
5 ಗ್ಯಾರಂಟಿ ಕೊಟ್ಟ ಕಾಂಗ್ರೇಸ್ ಈಗ 25 ಗ್ಯಾರಂಟಿ ಮುಂದಿಟ್ಟಿದ್ದಾರೆ ಕಳೆದ 10 ವರ್ಷದಲ್ಲಿ ಒಬ್ಬ ವಿರೋಧ ಪಕ್ಷದ ನಾಯಕನನ್ನು ನೀಡದ ಕಾಂಗ್ರೇಸ್ ಅಕಾರದ ಬಯಕೆಯಿಂದಾಗಿ ನಮ್ಮ 400 ಕ್ಷೇತ್ರ ಗೆಲುವ ನಮ್ಮ ಗಾಡಿಗೆ ಅಡ್ಡ ಬರಲು ಸಾಧ್ಯವೇ ಎಂದರು. ಕೋಲಾರ ಚಿಕ್ಕಬಳ್ಳಾಪುರದ ನೀರಿನ ಸಮಸ್ಯೆಬಗೆಹರಿಸಲು ಕೃಷ್ಣ ಅಥವಾ ಕಾವೇರಿ ನೀರು ತರಲು ಪ್ರಯತ್ನ ಮಾಡಬೇಕು .ಬೆಂಗಳೂರು ಸೇರಿದಂತೆ ರಾಜ್ಯದ 10 ಜಿಲ್ಲೆಗಳ ನೀರಿನ ಸಮಸ್ಯೆ ನೀಗಿಸಲು ಕೋಲಾರ ,ಚಿಕ್ಕಬಳ್ಳಾಪುರದ ಸೇರಿ ರಾಜ್ಯದ 28 ಕ್ಷೇತ್ರದಲ್ಲಿ ಗೆದ್ದರೆ ಮಾತ್ತ ಪ್ರಧಾನಿ ಬಳಿ ನೈತಿಕತೆಯಿಂದ ಮಾತನಾಡಬಹುದು ಎಂದು ಹೇಳಿದರು.
ನಿನ್ನೆ ಈ ರಾಜ್ಯದ ಮುಖ್ಯಮಂತ್ರಿ ಜಾಹೀರಾತು ಕೊಟ್ಟಿದ್ದಾರೆ. ಆದರೆ, ಈ ಚೆಂಬನ್ನು ಯಾರು ಕೊಟ್ಟರು. ಡಾ. ಮನಮೋಹನ್ ಸಿಂಗ್ ಅವರು ಈ ರಾಷ್ಟ್ರವನ್ನು ಆಳ್ವಿಕೆ ಮಾಡಿದರು. ಸೋನಿಯಾ ಗಾಂಧಿ ಅವರು ಯುಪಿಎ ಅಧ್ಯಕ್ಷರಾಗಿದ್ದರು. ಆಗ ದೇಶದಲ್ಲಿ ಕೋಲ್‌ಗೇಟ್, 2ಜಿ ಸ್ಪೆಕ್ಟ್ರಂ, ರೈಲ್‌ಗೇಟ್, ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಮ್ಮ ದೇಶದ ಸಂಪತ್ತು ಲೂಟಿ ಮಾಡಿದರು. ಆಗ ದೇಶದ ಆರ್ಥಿಕತೆ ಚೆಂಬು ಬರಿದಾಗಿತ್ತು. ಈ ಕಾಂಗ್ರೆಸ್ ನಾಯಕರು ಬರಿದಾದ ಚೆಂಬನ್ನು 2014ರಲ್ಲಿ ಕಾಂಗ್ರೆಸ್ ನಾಯಕರು ನರೇಂದ್ರ ಮೋದಿಗೆ ಕೊಟ್ಟಿದ್ದಾರೆ. ಆದರೆ, ಕಳೆದ 10 ವರ್ಷದಲ್ಲಿ ನರೇಂದ್ರ ಮೋದಿ ಅವರು ಇದನ್ನು ಅಕ್ಷಯ ಪಾತ್ರೆಯನ್ನಾಗಿ ಮಾಡಿದ್ದಾರೆ ಎಂದರು.
ನನಗೆ 90 ಮುಗೀತು, ಇನ್ನು 20 ಇದೆ. ಬ್ಲಡ್ ಬಾಯಿಯಲ್ಲಿ ಬರುತ್ತದೆ. ಮೊನ್ನೆ ಕೋಲಾರದಲ್ಲಿ ರಾಹುಲ್ ಗಾಂಧಿ ಅವರ ಭಾಷಣದ ಬಗ್ಗೆ ವ್ಯಾಖ್ಯಾನ ಮಾಡಲು ಹೋಗುವುದೇ ಇಲ್ಲ. ನಮ್ಮ ಅಭ್ಯರ್ಥಿ ಮಹೇಶ್ ಬಾಬು ಅವರಿಗೆ ಸಂಬಂಧಪಟ್ಟಂತೆ ಎರಡು ಸಭೆ ಮಾಡಿದ್ದೇವೆ. ಇಂದು ಡಾ. ಸುಧಾಕರ್ ದೊಡ್ಡವರು ಬಂದಿದ್ದಾರೆ. ನಮ್ಮ ಪಕ್ಷದ ಒಬ್ಬ ಶಾಸಕರು, ನಾನು ಬಿಜೆಪಿಗೆ ನೀವು ಹೇಳಿದರೂ ಮಾಡೊಲ್ಲ ಎಂದು ಹೇಳಿದರು. ಆ ಶಾಸಕನ ತಂದೆ ಪಿಳ್ಳಪ್ಪ ಅವರನ್ನು ಒಂದು ರೂ. ಖರ್ಚು ಮಾಡಿಸದೇ ಹೆಗ್ಗಡೆ ವಿರುದ್ಧ ಗೆಲ್ಲಿಸಿದಂತಹ ದೇವೇಗೌಡ ನಿಮ್ಮ ಮುಂದೆ ಹೇಳ್ತಿದೀನಿ. ನಾನು ನನ್ನ ಪಕ್ಷದ ಕಾರ್ಯಕರ್ತರಿಗೆ ನಾನು ಹೇಳುತ್ತಿದ್ದೇನೆ. ನನ್ನ ಆದೇಶ ಡಾ. ಸುಧಾಕರ್ ಅವರಿಗೆ ಕೊಡಿ. ಈ ದೇಶವನ್ನು ಮುಂದಿನ 5 ವರ್ಷ ಆಡಳಿತ ಮಾಡಲು 400 ಸ್ಥಾನ ಗೆಲ್ಲುವ ಗುರಿ ಮುಟ್ಟಲು ನಾವು 28 ಸ್ಥಾನಗಳನ್ನು ಗೆಲ್ಲಿಸಿ ನಮ್ಮ ಕಾಣಿಕೆಯನ್ನು ನಿಮಗೆ ಒಪ್ಪಿಸುತ್ತೇವೆ ಎಂದರು.