ನವದೆಹಲಿ,ಮೇ.20- ಆರು ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿನ 49 ಕ್ಷೇತ್ರಗಳ ಚುನಾವಣೆಗೆ ಮತದಾರರು ಅಭೂತಪೂರ್ವ ಬೆಂಬಲ ನೀಡಿದ್ದು, ಜನ ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ತಮ್ಮ ತಮ್ಮ ಚಲಾಯಿಸಿದರು.
ಬಿಹಾರ, ಜಾರ್ಖಂಡ್ (3), ಮಹಾರಾಷ್ಟ್ರ (13), ಒಡಿಶಾ (5), ಉತ್ತರ ಪ್ರದೇಶ (14), ಪಶ್ಚಿಮ ಬಂಗಾಳ (7) ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ (1) ಮತ್ತು ಲಡಾಖ್‌ನಲ್ಲಿ ಐದು ಸಂಸದೀಯ ಸ್ಥಾನಗಳಿಗೆ ಇಂದು ಮತದಾನ ನಡೆಯಿತು.
ಐದನೆ ಹಂತದಲ್ಲಿ ಚುನಾವಣೆ ನಡೆಯುತ್ತಿರುವ 49 ಕ್ಷೇತ್ರಗಳೂ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ಪ್ರಮುಖವಾಗಿದ್ದು, ಕಳೆದ ಚುನಾವಣೆಯಲ್ಲಿ ಬಿಜೆಪಿ 49 ಕ್ಷೇತ್ರಗಳಲ್ಲಿ 32 ಕ್ಷೇತ್ರಗಳನ್ನು ಗೆದ್ದುಬೀಗಿತ್ತು. ಈ ಬಾರಿ 32ಕ್ಕಿಂತ ಹೆಚ್ಚು ಸ್ಥಾನ ಗಳಿಸುವತ್ತ ಆ ಪಕ್ಷ ಗಮನಹರಿಸಿದ್ದಾರೆ. ಇಂಡಿ ಒಕ್ಕೂಟದವರು ಈ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಮುರಿಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವುದರಿಂದ ಈ ಬಾರಿಯ ಚುನಾವಣೆ ತೀವ್ರ ಕೂತುಹಲ ಕೆರಳಿಸಿದೆ.
ಐದನೇ ಹಂತದಲ್ಲಿ ಸ್ಪರ್ಧಿಸುವ ಪ್ರಮುಖ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ (ಮುಂಬೈ ಉತ್ತರ), ಸ್ಮೃತಿ ಇರಾನಿ (ಅಮೇಥಿ), ಮತ್ತು ರಾಜನಾಥ್ ಸಿಂಗ್ (ಲಖನೌ) ಹಾಗೂ ರಾಯ್‌ಬರೇಲಿಯಿಂದ ರಾಹುಲ್‌ಗಾಂಧಿ ತಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಜಮ್ಮು ಮತ್ತು ಕಾಶ್ಮೀರ ದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಬಾರಾಮುಲ್ಲಾದಿಂದ ಸ್ಪರ್ಧಿಸುತ್ತಿದ್ದಾರೆ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಸರಣ್‌ನಿಂದ ಸ್ಪರ್ಧಿಸುತ್ತಿದ್ದಾರೆ, ಶಿವಸೇನಾ-ಯುಬಿಟಿ ನಾಯಕ ಅರವಿಂದ್ ಸಾವಂತ್ ಮುಂಬೈ ದಕ್ಷಿಣದಿಂದ ಸ್ಪರ್ಧಿಸಿದ್ದಾರೆ.
ಮುಂಬೈನಲ್ಲಿ ಖ್ಯಾತ ನಟ ಅಕ್ಷಯ್‌ಕುಮಾರ್ ಕುಟುಂಬ ಸಮೇತ ಮತಕೇಂದ್ರಕ್ಕೆ ಆಗಮಿಸಿ ತಮ ಹಕ್ಕು ಚಲಾಯಿಸಿದರು.5 ನೇ ಹಂತದ ಮತದಾನ ಬಿರುಸು ಪಡೆದುಕೊಂಡಿದ್ದು ಎಲ್ಲ 49 ಲೋಕಸಭಾ ಸ್ಥಾನಗಳಲ್ಲಿ 9 ಗಂಟೆಯ ವೇಳೆಗೆ ಶೇ.10 ರಷ್ಟು ಮತದಾನ ದಾಖಲಾಗಿದೆಐದನೆ ಹಂತದಲ್ಲಿ ಮಹಾರಾಷ್ಟ್ರ ಮತ್ತು ಲಡಾಖ್‌ನಲ್ಲಿ ಚುನಾವಣೆ ಮುಗಿಯಲಿದೆ.
ಒಡಿಶಾ ವಿಧಾನಸಭೆಯ 35 ಸ್ಥಾನಗಳು ಮತ್ತು 21 ಲೋಕಸಭೆ ಸ್ಥಾನಗಳಿಗೆ ರಾಜ್ಯದಲ್ಲಿ ಏಕಕಾಲಕ್ಕೆ ಮತದಾನದ ಭಾಗವಾಗಿ ಮತದಾನ ನಡೆಯುತ್ತಿದೆ.ಈ ಹಂತವು ಕಡಿಮೆ ಸಂಖ್ಯೆಯ ಸ್ಥಾನಗಳನ್ನು ಹೊಂದಿದ್ದರೂ, ಹೆಚ್ಚಿನವು ಕೇಂದ್ರ ಮಂತ್ರಿಗಳು ಮತ್ತು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರು ಸ್ಪರ್ಧಿಸುವ ಉನ್ನತ ಕ್ಷೇತ್ರಗಳಾಗಿವೆ. 2019 ರಲ್ಲಿ ಬಿಜೆಪಿ ಈ 49 ಸ್ಥಾನಗಳಲ್ಲಿ 32 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು.
ಬಂಗಾಳದ ಏಳು ಸ್ಥಾನಗಳು ಮತ್ತು ಮಹಾರಾಷ್ಟ್ರದ 13 ಸ್ಥಾನಗಳಲ್ಲಿ ಬಿಗ್ ಫೈಟ್ ನಿರೀಕ್ಷಿಸಲಾಗಿದೆ. 13 ಸ್ಥಾನಗಳಲ್ಲಿ ಹತ್ತು ಶಿವಸೇನೆಯ ಭದ್ರಕೋಟೆಯಾಗಿದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ನೇತತ್ವದ ಪಕ್ಷದ ಎರಡು ಬಣಗಳ ನಡುವೆ ಘರ್ಷಣೆ ನಡೆಯಲಿದೆ.
ಬಂಗಾಳದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ತಣಮೂಲ ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇರಬಹುದೆಂದು ನಿರೀಕ್ಷಿಸಲಾಗಿದ್ದು, ಕಾಂಗ್ರೆಸ್ ಮತ್ತು ಸಿಪಿಎಂನೊಂದಿಗೆ ಹಲವು ಸ್ಥಾನಗಳಲ್ಲಿ ಕಠಿಣ ಹೋರಾಟ ಏರ್ಪಟ್ಟಿದೆ.ಉತ್ತರ ಪ್ರದೇಶದಲ್ಲಿ ಇಂದು ಚುನಾವಣೆ ನಡೆಯಲಿರುವ 14 ಸ್ಥಾನಗಳಲ್ಲಿ ಸೋನಿಯಾಗಾಂಧಿ ಗೆದ್ದಿದ್ದ ರಾಯ್‌ಬರೇಲಿ ಹೊರತುಪಡಸಿದರೆ ಉಳಿದ 13 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು.
ಬಿಜೆಪಿ ಮಿತ್ರಪಕ್ಷಗಳಲ್ಲಿ ಲೋಕ ಜನಶಕ್ತಿ ಪಕ್ಷದ ರಾಮ್ ವಿಲಾಸ್ ಮುಖ್ಯಸ್ಥ ಚಿರಾಗ್ ಪಾಸ್ವಾನ್ (ಹಾಜಿಪುರ), ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (ಕಲ್ಯಾಣ್) ಅವರ ಪುತ್ರ ಶ್ರೀಕಾಂತ್ ಶಿಂಧೆ ಸ್ಪರ್ಧಿಸುತ್ತಿದ್ದಾರೆ.
ಜಮು ಮತ್ತು ಕಾಶೀರದ ಬಾರಾಮುಲ್ಲಾದಲ್ಲಿ, ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್‌್ಸ ಮುಖ್ಯಸ್ಥ ಒಮರ್ ಅಬ್ದುಲ್ಲಾ ಅವರು ಪಿಡಿಪಿಯ ಫೈಯಾಜ್, ಪೀಪಲ್ಸ್ ಕಾನ್ಫರೆನ್‌್ಸ ಮುಖ್ಯಸ್ಥ ಸಜದ್ ಘನಿ ಲೋನ್ ಮತ್ತು ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ, ಜೈಲಿನಲ್ಲಿರುವ ಇಂಜಿನಿಯರ್ ರಶೀದ್ ಅವರನ್ನು ಎದುರಿಸುತ್ತಾರೆ. 58 ಸ್ಥಾನಗಳನ್ನು ಒಳಗೊಂಡ ಮುಂದಿನ ಹಂತವು ಮೇ 25 ರಂದು ನಡೆಯಲಿದೆ. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ನೆರೆಯ ಹರಿಯಾಣ ಒಂದೇ ಹಂತದ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.