Friday, November 22, 2024
Homeರಾಷ್ಟ್ರೀಯ | Nationalಜೂ.26ರಂದು ಲೋಕಸಭಾ ಸ್ಪೀಕರ್‌ ಚುನಾವಣೆ

ಜೂ.26ರಂದು ಲೋಕಸಭಾ ಸ್ಪೀಕರ್‌ ಚುನಾವಣೆ

ನವದೆಹಲಿ,ಜೂ.14- ಲೋಕಸಭೆ ಚುನಾವಣೆಯ ನಂತರ ಮೊದಲ ಸಂಸತ್‌ ಅಧಿವೇಶನ ಪ್ರಾರಂಭವಾದ ಎರಡು ದಿನಗಳ ನಂತರ ಜೂ.26ರಂದು ಲೋಕಸಭಾ ಸ್ಪೀಕರ್‌ ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳನ್ನು ಬೆಂಬಲಿಸುವ ಪತ್ರವನ್ನು ಸದಸ್ಯರು ಒಂದು ದಿನ ಮುಂಚಿತವಾಗಿ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬಹುದು ಎಂದು ಲೋಕಸಭೆಯ ಸೆಕ್ರೆಟರಿಯೇಟ್‌ ತಿಳಿಸಿದೆ.

ಚುನಾವಣೆಗೆ ನಿಗದಿಪಡಿಸಿದ ದಿನಾಂಕದ ಹಿಂದಿನ ದಿನದಂದು ಮಧ್ಯಾಹ್ನ 12 ಗಂಟೆಯ ಮೊದಲು ಯಾವುದೇ ಸಮಯದಲ್ಲಿ, ಯಾವುದೇ ಸದಸ್ಯರು ಸ್ಪೀಕರ್‌ ಕಚೇರಿಗೆ ಇನ್ನೊಬ್ಬ ಸದಸ್ಯರನ್ನು ಬೆಂಬಲಿಸುವ ಪ್ರಸ್ತಾವನೆಯನ್ನು ಸಲ್ಲಿಸಬಹುದು. ಜೂ.25ರ ಮಧ್ಯಾಹ್ನ 12 ಗಂಟೆಯ ಮೊದಲು ಸ್ಪೀಕರ್‌ ಆಯ್ಕೆಗೆ ಸೂಚನೆಗಳನ್ನು ನೀಡಬಹುದು.

ನೂತನವಾಗಿ ಆಯ್ಕೆಯಾದ ಸದಸ್ಯರ ಪ್ರಮಾಣವಚನ ಸ್ವೀಕಾರಕ್ಕೆ ಮೊದಲ ಎರಡು ದಿನ ಮೀಸಲಾಗಿದ್ದರೆ, ಜೂ.26ಕ್ಕೆ ಸ್ಪೀಕರ್‌ ಆಯ್ಕೆಗೆ ದಿನಾಂಕ ನಿಗದಿ ಮಾಡಲಾಗಿದೆ.ಲೋಕಸಭೆ ಚುನಾವಣೆಯ ನಂತರ ಮೊದಲ ಸಂಸತ್‌ ಅಧಿವೇಶನ ಜೂನ್‌ 24 ರಿಂದ ಜುಲೈ 3ರವರೆಗೆ ನಡೆಯಲಿದೆ ಎಂದು ಹೊಸದಾಗಿ ಸೇರ್ಪಡೆಗೊಂಡ ಸಂಸದೀಯ ವ್ಯವಹಾಗಳ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.ಜೂ.27ರಂದು ರಾಷ್ಟ್ರಪತಿ ಭಾಷಣದ ನಂತರ ಪ್ರಧಾನಿ ಮೋದಿ ಅವರು ಸಂಸತ್ತಿಗೆ ತಮ ಮಂತ್ರಿಗಳನ್ನು ಪರಿಚಯಿಸುವ ನಿರೀಕ್ಷೆಯಿದೆ.

ಸ್ಪೀಕರ್‌ ಇತಿಹಾಸ:
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮಿತು, ಆದರೆ ಅದು ತನ್ನದೇ ಆದ ಮ್ಯಾಜಿಕ್‌ ನಂಬರ್‌ 272 ಅನ್ನು ಸಾಧಿಸಲು ವಿಫಲವಾಯಿತು. ಪಕ್ಷವು 240 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರಿಂದ, ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ), ನಿತೀಶ್‌ ಕುಮಾರ್‌ ಅವರ ಜನತಾ ದಳ-ಯುನೈಟೆಡ್‌ (ಜೆಡಿಯು), ಚಿರಾಗ್‌ ಪಾಸ್ವಾನ್‌ ಅವರ ಲೋಕ ಜನಶಕ್ತಿ ಪಕ್ಷ-ರಾಮ್‌ ವಿಲಾಸ್‌‍ (ಎಲ್‌‍ಜೆಪಿ)ಸೇರಿದಂತೆ ಮಿತ್ರಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತು. 17ನೇ ಲೋಕಸಭೆಯಲ್ಲಿ ಬಿಜೆಪಿ 303 ಸ್ಥಾನಗಳೊಂದಿಗೆ ಸಂಪೂರ್ಣ ಬಹುಮತವನ್ನು ಹೊಂದಿದ್ದು, ಓಂ ಬಿರ್ಲಾ ಅವರನ್ನು ಸ್ಪೀಕರ್‌ ಆಗಿ ಆಯ್ಕೆ ಮಾಡಿತ್ತು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ 12ನೇ ಲೋಕಸಭೆಯಲ್ಲಿ 1998 ಮಾರ್ಚ್‌10ರಿಂದ 1999 ಏಪ್ರಿಲ್‌ 26ರವರೆಗೆ 13 ತಿಂಗಳ ಕಾಲ ನಡೆಯಿತು.ತೆಲುಗು ದೇಶಂ ಪಕ್ಷದ ನಾಯಕ ಬಾಲಯೋಗಿ ಮಾರ್ಚ್‌ 1998ರಲ್ಲಿ ಸ್ಪೀಕರ್‌ ಆಗಿ ಆಯ್ಕೆಯಾದರು. 2002ರವರೆಗೆ ಹುದ್ದೆಯಲ್ಲಿದ್ದರು.

2002ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪೂರ್ಣ 5 ವರ್ಷಗಳ ಅವಧಿಯಲ್ಲಿ (1999-2004), 2002 ರಲ್ಲಿ ಬಾಲಯೋಗಿ ಅವರ ಮರಣದ ನಂತರ ಶಿವಸೇನೆಯ ಮನೋಹರ್‌ ಜೋಶಿ ಅವರು ಲೋಕಸಭೆಯ ಸ್ಪೀಕರ್‌ ಆಗಿ ಆಯ್ಕೆಮಾಡಿತು. 2014ರಲ್ಲಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಬಿಜೆಪಿ ಏಕಾಂಗಿಯಾಗಿ ಒಟ್ಟು 282 ಸ್ಥಾನಗಳನ್ನು ಗೆದ್ದುಕೊಂಡಿತು. ಮ್ಯಾಜಿಕ್‌ ನಂಬರ್‌ಗಿಂತ ಹೆಚ್ಚು, ಎನ್‌ಡಿಎ ಜೊತೆಯಲ್ಲಿ ಲೋಕಸಭೆಯಲ್ಲಿ ಅದರ ಒಟ್ಟು ಬಲ 336 ಆಗಿತ್ತು.

2019 ರಲ್ಲಿ, ಕೇಸರಿ ಪಕ್ಷವು ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿತು ಮತ್ತು ತನ್ನದೇ ಆದ ಮೇಲೆ 303 ಸ್ಥಾನಗಳನ್ನು ಗೆದ್ದುಕೊಂಡಿತು ಮತ್ತು ಎನ್‌‍ಡಿಎ ಜೊತೆಗೆ ಮೈತ್ರಿಕೂಟವು ಲೋಕಸಭೆಯಲ್ಲಿ 353 ಸ್ಥಾನಗಳಲ್ಲಿ ನಿಂತಿತು.

ವಾಜಪೇಯಿ ಅವರ ಕಾಲದಲ್ಲಿ, ಬಿಜೆಪಿಯು ತನ್ನದೇ ಆದ 200 ರ ಗಡಿಯನ್ನು ದಾಟಲು ಸಾಧ್ಯವಾಗಲಿಲ್ಲ, ಆದ್ದರಿಂದ, ಸರ್ಕಾರದ ಸ್ಥಿರತೆ ಹೆಚ್ಚಾಗಿ ಅದರ ಮಿತ್ರಪಕ್ಷಗಳ ಮೇಲೆ ಅವಲಂಬಿತವಾಗಿದೆ ಮತ್ತು ಸ್ಪೀಕರ್‌ ಸ್ಥಾನವನ್ನು ಮೈತ್ರಿ ಪಾಲುದಾರರಿಗೆ ಹಂಚಲಾಯಿತು.
2014 ಮತ್ತು 2019 ರಲ್ಲಿ ಪಿಎಂ ಮೋದಿ ನೇತೃತ್ವದಲ್ಲಿ ಬಿಜೆಪಿ ತನ್ನದೇ ಆದ ಬಹುಮತವನ್ನು ಪಡೆದುಕೊಂಡಿತು, ಆದರೂ ಅದು ಮೈತ್ರಿ ಪಾಲುದಾರರಿಗೆ ಸರ್ಕಾರದಲ್ಲಿ ಅವಕಾಶ ನೀಡಿತು ಆದರೆ ಸ್ಪೀಕರ್‌ ಹುದ್ದೆಯನ್ನು ಕೇಸರಿ ಪಕ್ಷವು ಹೊಂದಿತ್ತು.

ಈಗ 2024 ರ ಬಗ್ಗೆ ಮಾತನಾಡುವುದಾದರೆ, ಬಿಜೆಪಿ 240 ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿದೆ, ಮ್ಯಾಜಿಕ್‌ ನಂಬರ್‌ಗೆ ಹತ್ತಿರದಲ್ಲಿದೆ ಆದರೆ ಇನ್ನೂ 32 ಸ್ಥಾನಗಳ ಕೊರತೆಯಿದೆ. ಹೀಗಾಗಿ ಮಿತ್ರಪಕ್ಷಗಳ ಸಲಹೆಗನುಸಾರವಾಗಿ ಸ್ಪೀಕರ್‌ ಆಯ್ಕೆ ಮಾಡಬೇಕಿದೆ.

RELATED ARTICLES

Latest News