Tuesday, May 20, 2025
Homeರಾಜ್ಯರಾಜ್ಯದ ಹಲವೆಡೆ ಆರ್‌ಟಿಓ ಚೆಕ್‌ ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ

ರಾಜ್ಯದ ಹಲವೆಡೆ ಆರ್‌ಟಿಓ ಚೆಕ್‌ ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ದಾಳಿ

Lokayukta Raids on RTO check posts

ಬೆಂಗಳೂರು,ಅ.8-ರಾಜ್ಯದ ಹೆದ್ದಾರಿಗಳಲ್ಲಿನ ಚೆಕ್‌ ಪೋಸ್ಟ್‌ಗಳಲ್ಲಿ ಲಂಚ ದಂಧೆಯನ್ನು ಬಯಲಿಗೆಳೆಯಲು ಬೀದರ್‌, ಕೋಲಾರ, ಬಳ್ಳಾರಿ, ಚಿಕ್ಕೋಡಿ ಹಾಗೂ ವಿಜಯಪುರ ಆರ್‌ಟಿಓ ಚೆಕ್‌ ಪೋಸ್ಟ್‌ ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಾಹನಗಳ ಸವಾರರಿಂದ ಹಣ ವಸೂಲಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತಾ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಬೀದರ್‌ನ ಆರ್‌ಟಿಒ ಕಚೇರಿ ಸಿಬ್ಬಂಧಿಗಳಿಗೂ ಶಾಕ್‌ ನೀಡಿದ್ದಾರೆ.

ಇದಲ್ಲದೆ ತಾಲೂಕಿನ ಮೊಳಕೇರಾ ಬಳಿ ಇರುವ ಆರ್‌ಟಿಒ ಚೆಕ್‌ ಪೋಸ್ಟ್‌ ಮೇಲೆ ಮುಂಜಾನೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೂಡ್‌್ಸ ವಾಹನಗಳಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಲೋಕಾಯುಕ್ತ ಎಸ್‌‍ಪಿ ಬಿ.ಕೆ.ಉಮೇಶ್‌ ನೇತೃತ್ವದಲ್ಲಿ ದಾಳಿ ನಡೆಸಿ ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.

ಇನ್ನು ಬಳ್ಳಾರಿ ತಾಲೂಕಿನ ಪಿಡಿ ಹಳ್ಳಿ ಆರ್‌ ಟಿಓ ಚೆಕ್‌ಪೋಸ್ಟ್‌ ಮೇಲೆ ಮಧ್ಯರಾತ್ರಿ 2 ಗಂಟೆಗೆ ಸಂದರ್ಭದಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿ. ಲಕ್ಷಾಂತರ ರೂ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಪರಿಶೀಲನಾ ಕಾರ್ಯ ಮುಂದುವರೆದಿದೆ.

ಕೋಲಾರ ಚೆಕ್‌ ಪೋಸ್ಟ್‌ಗಳ ಮೇಲೆ ಲೋಕಾಯುಕ್ತ ಎಸ್ಪಿ ಧನಂಜಯ ನೇತೃತ್ವದಲ್ಲಿ ದಾಳಿ ನಡೆದಿದೆ.ಶ್ರೀನಿವಾಸಪುರ ತಾಲೂಕಿನ ತಾಡಿಗೋಳ ಕ್ರಾಸ್‌‍ ಬಳಿ ಇರುವ ಚೆಕ್‌ ಪೋಸ್ಟ್‌ ಮೇಲೆ ದಾಳಿ ಮಾಡಲಾಗಿದೆ, ಅಲ್ಲದೆ ಮುಳಬಾಗಿಲು ತಾಲೂಕಿನ ನಂಗಲಿ ಚೆಕ್‌ ಪೋಸ್ಟ್‌ ಮೇಲೂ ದಾಳಿ ನಡೆದಿದೆ. ಈ ಎರಡು ಚೆಕ್‌ ಪೋಸ್ಟ್‌ ಗಳಲ್ಲಿ ದಾಖಲೆಗಿಂತ ಅಧಿಕ ಹಣ ಪತ್ತೆಯಾಗಿದ್ದು, ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 4 ಬಳಿಯ ಚೆಕ್‌ ಪೋಸ್ಟ್‌ ಮೇಲೆ ಲೋಕಾಯುಕ್ತ ಎಸ್‌‍ಪಿ ಹನುಮಂತರಾಯ ನೇತೃತ್ವದಲ್ಲಿ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಸುಮಾರು ಆರು ಜನ ಅಧಿಕಾರಿಗಳ ತಂಡದಿಂದ ಪರಿಶೀಲನೆ ನಡೆಸಲಾಗುತ್ತಿದೆ. ಲಾರಿ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ವಿಜಯಪುರ: ಜಿಲ್ಲೆಯ ಚಡಚಣ ತಾಲೂಕಿನ ಧೂಳಖೇಡ್‌ ಬಳಿ ಇರುವ ಆರ್‌ ಟಿ ಓ ಚೆಕ್‌ ಪೋಸ್ಟ್‌ ಮೇಲೆ ಲೋಕಾಯುಕ್ತ ಎಸ್ಪಿ ಮಲ್ಲೇಶ ನೇತೃತ್ವದಲ್ಲಿ ದಾಳಿ ಮಾಡಿದ್ದಾರೆ, ಇನ್ನೂ ಕೆಲವೆಡೆ ಮಾರುವೇಶದಲ್ಲಿ ಕಾರ್ಯಾಚರಣೆ ನಡೆಸಿದ್ದು ಹಲವು ಅಕ್ರಮವನ್ನು ಪತ್ತೆಹಚ್ಚಿದ್ದಾರೆ.

RELATED ARTICLES

Latest News