Friday, October 3, 2025
Homeರಾಜ್ಯಲೋಕಾಯುಕ್ತ ದಾಳಿ : ಅಧಿಕಾರ ದುರ್ಬಳಕೆ ಮಾಡಿಲ್ಲ, ತನಿಖೆಗೆ ನಾನು ಬದ್ಧ ಎಂದ ಶೃಂಗೇರಿ ಶಾಸಕ...

ಲೋಕಾಯುಕ್ತ ದಾಳಿ : ಅಧಿಕಾರ ದುರ್ಬಳಕೆ ಮಾಡಿಲ್ಲ, ತನಿಖೆಗೆ ನಾನು ಬದ್ಧ ಎಂದ ಶೃಂಗೇರಿ ಶಾಸಕ ರಾಜೇಗೌಡ

Lokayukta raids Sringeri MLA Rajegowda's house

ಚಿಕ್ಕಮಗಳೂರು,ಸೆ.30- ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಶೃಂಗೇರಿಯ ಕಾಂಗ್ರೆಸ್‌‍ ಶಾಸಕ ಟಿ.ಡಿ.ರಾಜೇಗೌಡ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬ್ಯಾಯಾಲಯದ ನಿರ್ದೇಶನದಂತೆ ಶಾಸಕ ರಾಜೇಗೌಡ ವಿರುದ್ಧ ಲೋಕಾಯುಕ್ತದಲ್ಲಿ ಎಫ್‌ಐಆರ್‌ ದಾಖಲಾಗಿತ್ತು ಇದರ ಬೆನ್ನಲ್ಲೇ ದಾಳಿ ನಡೆದಿದೆ.ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡೆವಿಟ್‌ನಲ್ಲಿ ಆಸ್ತಿ ಘೋಷಣೆ ಮಾಡಿರುವುದರಲ್ಲಿ ಲೋಪವಿದೆ ಎಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿತ್ತು.

ನ್ಯಾಯಾಲಯದ ಸೂಚನೆ ಮೇರೆಗೆ ಚಿಕ್ಕಮಗಳೂರು ಲೋಕಾಯುಕ್ತ ಕಚೇರಿಯಲ್ಲಿ ಪ್ರಕರಣ ದಾಖಲಾಗಿತ್ತು ರಾಜೇಗೌಡರ ಬಸಾಪುರದ ಮನೆ ಸೇರಿದಂತೆ ಹಲವೆಡೆ ಲೋಕಾಯುಕ್ತ ಪೊಲೀಸರು ತಪಾಸಣೆ ನಡೆಸಿ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

ಅಧಿಕಾರ ದುರ್ಬಳಕೆ ಮಾಡಿಲ್ಲ : ತನಿಖೆಗೆ ನಾನು ಬದ್ಧ
ಬೆಂಗಳೂರು,ಸೆ.30- ನನ್ನ ವಿರುದ್ಧ ವಿಶೇಷ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾಖಲಾಗಿರುವ ಖಾಸಗಿ ಪ್ರಕರಣದಲ್ಲಿ ಕಾಣಿಸಿದ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ ನಾನು ಯಾವುದೇ ಕಾರಣಕ್ಕೂ ಎಂತಹದ್ದೇ ಸಂದರ್ಭದಲ್ಲಿಯೂ ನನಗಿರುವ ಅಧಿಕಾರದ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌‍ ಶಾಸಕ ಟಿ.ಡಿ.ರಾಜೇಗೌಡ ಸ್ಪಷ್ಟಪಡಿಸಿದ್ದಾರೆ.

ಲೋಕಾಯುಕ್ತ ಪೋಲೀಸರು ಕೈಗೊಳ್ಳುವ ಯಾವುದೇ ತನಿಖೆಗೆ ನಾನು ಸಂಪೂರ್ಣ ಸಹಕಾರ ನೀಡಲು ಯಾವುದೇ ಸಂದರ್ಭದಲ್ಲಿಯೂ ಬದ್ದನಾಗಿದ್ದೇನೆ. ದೂರಿನಲ್ಲಿ ಆಪಾದಿಸಿದಂತೆ ನಾನು ನನ್ನ ಕುಟುಂಬ ಯಾವುದೇ ತಪ್ಪನ್ನು ಎಸಗಿರುವುದಿಲ್ಲ. ಪೂರ್ಣ ತನಿಖೆಯಾಗಿ ಸತ್ಯ ಹೊರಗೆ ಬರಲಿ ಎಂದು ಆಶಿಸಿಸುವುದಾಗಿ ಹೇಳಿದ್ದಾರೆ.

ನಾನು ಎಲ್ಲಿಯೂ ಕಾನೂನಿಗೆ ವಿರುದ್ದವಾಗಿ ನಡೆದುಕೊಂಡಿಲ್ಲ ಎಂದು ಪರೋಕ್ಷವಾಗಿ ತಮ ಹಾಗೂ ತಮ ಕುಟುಂಬದ ವಿರುದ್ದ ದಾಖಲಾಗಿರುವ ಆರೋಪವನ್ನು ಅಲ್ಲಗಳಿದಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನನ್ನ ಮೇಲೆ ನನ್ನ ಪತ್ನಿ ಹಾಗೂ ಮಗನ ಮೇಲೆ ಕೊಪ್ಪದ ಬಿಜೆಪಿಯ ನಾಯಕರಾದ ಹೆಚ್‌.ಕೆ.ದಿನೇಶ್‌ ಎಂಬುವವರು ಒಂದು ಖಾಸಗಿ ದೂರನ್ನು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಮಾನ್ಯ ನ್ಯಾಯಲಯವು ಲೋಕಾಯುಕ್ತ ಎಸ್‌‍ ಪಿ ಅವರಿಗೆ ನಿರ್ದೇಶನವನ್ನು ನೀಡಿ ನನ್ನ ವಿರುದ್ದ ತನಿಖೆ ಕೈಗೊಳ್ಳಲು ಆದೇಶ ನೀಡಿದೆ.ಎಲ್ಲಾ ಸಂಗತಿಗಳ ಹಿಂದೆ ಮಾಜಿ ಶಾಸಕ.ಡಿ.ಎನ್‌.ಜೀವರಾಜ್‌ ಅವರು ರಾಜಕೀಯ ದುರುದ್ದೇಶದಿಂದ ತನ್ನ ಹಿಂಬಾಲಕನಾದ ದೂರುದಾರನನ್ನು ಪ್ರಚೋದಿಸಿರುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಒಬ್ಬ ಜನಪ್ರಿನಿಧಿಯಾಗಿ ಜವಾಬ್ದಾರಿಯುತ ನಾಗರಿಕನಾಗಿ ಲೋಕಾಯುಕ್ತ ತನಿಖೆಗೆ ಪೂರ್ಣ ಸಹಕಾರ ನೀಡುವುದು ನನ್ನ ಕರ್ತವ್ಯವೆಂದು ತಿಳಿದಿರುತ್ತೇನೆ. ನನ್ನ ಕುಟುಂಬ ಹಾಗೂ ದಿವಂಗತ ಸಿದ್ದಾರ್ಥ ಹೆಗ್ಡೆ ಕುಟುಂಬದ ನಡುವಿನ ವ್ಯವಹಾರವನ್ನು .ಡಿ.ಎನ್‌.ಜೀವರಾಜ್‌ ಹಾಗೂ ಹೆಚ್‌.ಕೆ.ದಿನೇಶ್‌ ಅವರು ತಮ ದ್ವೇಷ ರಾಜಕಾರಣಕ್ಕಾಗಿ ಬಳಸಿಕೊಳ್ಳುತ್ತಿರುವುದು ನನ್ನ ಮನಸ್ಸಿಗೆ ನೋವುಂಟುಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ನನ್ನ ಮಗನ ಮೇಲೂ ಆಪಾದನೆ ಇರುವುದರಿಂದ ನನ್ನ ಮಗನನ್ನೂ ಸಹಿತ ತುರ್ತಾಗಿ ವಿದೇಶದಿಂದ ಹಿಂದಿರುಗಲು ಸೂಚಿಸಿರುತ್ತೇನೆ ಎಂದು ತಿಳಿಸಿದ್ದಾರೆ. ವಿದೇಶದಲ್ಲಿ ಆಯೋಜನೆಗೊಂಡಿರುವ ಕಾರ್ಯಕ್ರಮಕ್ಕೂ ಸಹಿತ ನಾನು ಹಾಜರಾಗದೆ ತನಿಖೆಗೆ ಸಹಕರಿಸಲು ಕರ್ನಾಟಕದಲ್ಲಿಯೇ ಉಳಿದುಕೊಳ್ಳಲು ತೀರ್ಮಾನಿಸಿದ್ದೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News