Sunday, November 24, 2024
Homeರಾಜ್ಯಬೆಚ್ಚಗೆ ಮಲಗಿದ್ದ ಭ್ರಷ್ಟರಿಗೆ ಲೋಕಾಯುಕ್ತ ಶಾಕ್, ರಾಜ್ಯದಲ್ಲಿ 55ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ

ಬೆಚ್ಚಗೆ ಮಲಗಿದ್ದ ಭ್ರಷ್ಟರಿಗೆ ಲೋಕಾಯುಕ್ತ ಶಾಕ್, ರಾಜ್ಯದಲ್ಲಿ 55ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ದಾಳಿ

ಬೆಂಗಳೂರು, ಜುಲೈ 19: ಜಿಟಿ ಜಿಟಿ ಮಳೆಯಿಂದ ಬೆಚ್ಚಗೆ ಮಲಗಿದ್ದ ಭ್ರಷ್ಟಾಚಾರಿ ಅಧಿಕಾರಿಗಳ ಮೆನೆ ಕದ ತಟ್ಟಿದ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.ರಾಜ್ಯದ 55ಕ್ಕೂ ಹೆಚ್ಚು ಕಡೆ ಏಕಕಾಲದಲ್ಲಿ ಬರ್ಜರಿ ದಾಳಿ ನಡೆಸಿದ್ದಾರೆ.

ಬಂದ ದೂರಿನ ಆಧಾರದ ಮೇಲೆ 12 ಅಧಿಕಾರಿಗಳಿಗೆ ಮನೆ,ಕಚೇರಿ ಸೇರಿ ಅವರ ಇತರೆ ವ್ಯವಹಾರ ಕೇಂದ್ರದ ಮೇಲೆ ದಾಳಿ ನಡೆಸಿದ್ದಾರೆ .ಬೆಂಗಳುರು,ಯದಗಿರಿ,ಬೆಂಗಳೂರು ಗ್ರಾಮಾಂತರ,ಶಿವಮೊಗ್ಗ ,ತುಮಕೂರು ಜಿಲ್ಲೆಯಲ್ಲಿ ವಿವಿಧೆಡೆ ಕಾರ್ಯಾಚರಣೆ ನಡೆದಿದೆ.
ತುಮಕೂರಿನ ಕೆಐಎಡಿಬಿ ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್‌ಗೆ ಲೋಕಾಯುಕ್ತ ಪೊಲೀಸರು ಶಾಕ್‌ ನೀಡಿದ್ದಾರೆ.

ಬೆಂಗಳೂರಿನ ನಾಗರಭಾವಿಯ ಎರಡನೇ ಹಂತದಲ್ಲಿರುವ ನಿವಾಸ,ರೇಸ್‌‍ ಕೋರ್ಸ್‌ ರಸ್ತೆಯ ಖನಿಜ ಭವನದ ಕಚೇರಿ ಸೇರಿ ಇವರಿಗೆ ಸೇರಿದ ಒಟ್ಟು ಏಳು ಕಡೆಗಳಲ್ಲಿ ದಾಳಿ ನಡೆದಿದೆ.

ಇವರು ತುಮಕೂರು ನಗರದ ಬನಶಂಕರಿ ನಗರದಲ್ಲಿ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಮನೆ ಹೊಂದಿದ್ದು ,ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿ ರಂಗನಾಥಪುರದಲ್ಲಿ ಫಾರಂಹೌಸ್‌‍ ಇದೆ.

ಅಲ್ಲದೆ ತುಮಕೂರಿನ ಅಂತರಸನಹಳ್ಳಿಯ ಇಂಡಸ್ಟ್ರಿಯಲ್‌ ಏರಿಯಾದಲ್ಲಿ ಪ್ಲಾಸ್ಟಿಕ್‌ ಬಾಟಲ್‌ ತಯಾರಿಕಾ ಘಟಕವಿದೆ ದಾಳಿ ಸಂದರ್ಭದಲ್ಲಿ ನಗದು .ಚಿನ್ನಾಭರಣ,ಕೆಲವು ಆಸ್ತಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಆನಂದ್‌ ಸಿಎಲ್‌‍ ಅವರಿಗೂ ಬಿಸಿ ತಟ್ಟಿದೆ .ಬೆಮಗಲುರಿನಲ್ಲಿರುವ ಮನೆ ,ಮಂಗಳುರಿನ ಕಚೇರಿ ಸೇರಿ ವಿವಿಧೆಡೆ ಕಾರ್ಯಾಚರಣೆ ನಡೆದಿದೆ.ಹಲವೆಡೆ ನಿವೇಶನ,ಫ್ಲಾಟ್‌ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ .ಬ್ಯಾಂಕ್‌ನಲ್ಲಿರುವ ಲಾಕರ್‌,ಮತ್ತುಬೇನಮಿ ಆಸ್ತಿ ಬಗ್ಗೆ ಪರಿಶೀಲನೆ ನಡೆದಿದೆ.

RELATED ARTICLES

Latest News