ಲಂಡನ್,ಸೆ.29- ಥೇಮ್ಸ್ ನದಿಯ ದಾಟಲು ನಿರ್ಮಿಸಿರುವ ಐತಿಹಾಸಿಕ ಸೇತುವೆಯು(ಲಂಡನ್ ಬ್ರಿಜ್)ತಂತ್ರಿಕ ದೋಷದಿಂದ ತೆರೆದ ಸ್ಥಿತಿಯಲ್ಲಿ ಸಿಲುಕಿಕೊಂಡು , ವಾಹನ ಸಂಚಾರ ಸ್ಥಗಿತಗೊಂಡ ಘಟನೆ ನಡೆದಿದೆ.
ಮಧ್ಯಾಹ್ನ ಥೇಮ್ಸ್ ನದಿಯ ಕೆಳಗೆ ದೋಣಿ ಹಾದುಹೋಗಲು ಅವಕಾಶ ಮಾಡಿಕೊಟ್ಟ ನಂತರ ತೆರೆದ ಸ್ಥಿತಿಯಲ್ಲಿ ಸಿಲುಕಿಕೊಂಡಿತು, ಇದರಿಂದಾಗಿ ಸಂಚಾರ ಸ್ಥಗಿತಗೊಂಡಿತು ಎಂದು ವರದಿಯಾಗಿದೆ.
ಸೇತುವೆ ಮುಚ್ಚಲು ತಾಂತ್ರಿಕ ಸಿಬ್ಬಂದಿ ಹೆಣಗಾಡಿದರು ಲಂಡನ್‍ನ ರಸ್ತೆಗಳಲ್ಲಿ ವಾಹನಗಳು ನಿಂತಲ್ಲೇ ನಿಂತು ಅವ್ಯವಸ್ಥೆ ಉಂಟಾಯಿತು ಸುಮಾರು ಅರ್ಧ ಗಂಟೆಗೂ ಹೆಚ್ಚು ಪ್ರಯಾಸದ ನಂತರ ಸೇತುವೆಯನ್ನು ಅಂತಿಮವಾಗಿ ಮುಚ್ಚಲಾಯಿತು.
ಮೋದಿಜಿಯವರೇ, ಕರ್ನಾಟಕ ಇರೋದು ರೋಡ್ ಶೋ ನಡೆಸಲು ಮಾತ್ರನಾ..?
ಸೇತುವೆ ಮುಚ್ಚಿದಾಗ ಜನರು ಹರ್ಷೋದ್ಗಾರ ಮಾಡಲು ಪ್ರಾರಂಭಿಸಿದರು ಸೇತುವೆಯು ಹೈಡ್ರಾಲಿಕ್ ಚಾಲಿತವಾಗಿದ್ದು ಕೆಲವೊಮ್ಮೆ ಹೀಗಾಗುತ್ತದೆ 1894 ನಿರ್ಮಿಸಿರುವ 76 ಮೀಟರ್ (250 ಅಡಿ) ಅಗಲ ಮತ್ತು 240 ಮೀಟರ್ (800 ಅಡಿ) ಉದ್ದದ ಪ್ರವೇಶದ್ವಾರವನ್ನು ಹೊಂದಿದ್ದು ಅವಳಿ ಗೋಪುರಗಳು 61 ಮೀಟರ್ (200 ಅಡಿ) ಎತ್ತರದಲ್ಲಿದೆ.
ಪ್ರವಾಸಿಗರು ಇಷ್ಟಪಡುವ ಎರಡು ಗೋಪುರಗಳ ನಡುವೆ ಗಾಜಿನಿಂದ ಆವೃತವಾದ ಕಾಲುದಾರಿಗಳು ಸಹ ಇವೆ.ದೋಣಿ ಬಂದಾಗ ತೆರೆದುಕೊಂಡು ನಂತರ ಮುಚ್ಚಿಕೊಳ್ಳುತ್ತದೆ ಇದರ ನಡುವೆ ವಾಹನಗಳು ಸಂಚರಿಸುತ್ತದೆ.