Wednesday, July 30, 2025
Homeರಾಷ್ಟ್ರೀಯ | Nationalಭಗವಾನ್ ರಾಮನೇ ನಮ್ಮ ಅಭ್ಯರ್ಥಿ ಎನ್ನುವುದೊಂದೇ ಬಾಕಿ : ರಾವತ್ ಲೇವಡಿ

ಭಗವಾನ್ ರಾಮನೇ ನಮ್ಮ ಅಭ್ಯರ್ಥಿ ಎನ್ನುವುದೊಂದೇ ಬಾಕಿ : ರಾವತ್ ಲೇವಡಿ

ಮುಂಬೈ,ಡಿ.30- ಚುನಾವಣೆಗೆ ಭಗವಾನ್ ರಾಮನೇ ನಮ್ಮ ಅಭ್ಯರ್ಥಿ ಎಂದು ಬಿಜೆಪಿಯಿಂದ ಘೋಷಿಸುವುದೊಂದೇ ಬಾಕಿ ಉಳಿದಿದೆ ಎಂದು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವತ್ ಟೀಕಿಸಿದ್ದಾರೆ. ಅಯೋಧ್ಯೆಯ ರಾಮಜನ್ಮಭೂಮಿ ದೇಗುಲದ ಉದ್ಘಾಟನಾ ಸಮಾರಂಭದ ಆಹ್ವಾನದ ಕುರಿತು ಪ್ರತಿಕ್ರಿಯಿಸಿದ ಅವರು, ರಾಮನ ಹೆಸರಿನಲ್ಲಿ ರಾಜಕೀಯ ಮಾಡಲಾಗುತ್ತಿದೆ. ಸದ್ಯ ಬಿಜೆಪಿಯವರು ರಾಮನೇ ನಮ್ಮ ಚುನಾವಣೆಯ ಅಭ್ಯರ್ಥಿ ಎಂದು ಹೇಳುವುದೊಂದೆ ಬಾಕಿಯಿರುವುದು ಎಂದು ಲೇವಡಿ ಮಾಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಝೀರೋದಿಂದ ಆರಂಭವಾಗಬೇಕು ಎಂಬ ತಮ್ಮ ಮೇಲಿನ ಆರೋಪದ ಕುರಿತು ಮಾತನಾಡಿ, ಕಾಂಗ್ರೆಸ್ ಶೂನ್ಯ ಎಂದು ನಾನು ಹೇಳಿಲ್ಲ. ಕಾಂಗ್ರೆಸ್‍ಗೆ ಮಹಾರಾಷ್ಟ್ರದಲ್ಲಿ ಒಬ್ಬನೇ ಒಬ್ಬ ಸಂಸದ ಇಲ್ಲ. ನಮ್ಮಲ್ಲಿ 18 ಸಂಸದರಿದ್ದು, ಅದರಲ್ಲಿ ಕೆಲವರು ಹೋಗಿದ್ದಾರೆ. ಈಗ ನಮ್ಮಲ್ಲಿ 6 ಸಂಸದರಿದ್ದಾರೆ ಎಂದರು.

ಹೊಸ ವರ್ಷದಲ್ಲೂ ಮುಂದುವರೆಯಲಿದೆಯಂತೆ ಇಸ್ರೇಲ್-ಹಮಾಸ್ ಯುದ್ಧ

ನಮ್ಮ ಮೈತ್ರಿ ಕಾಂಗ್ರೆಸ್‍ನೊಂದಿಗೆ ಇದೆ ಮತ್ತು ಮಹಾ ವಿಕಾಸ್ ಅಘಾಡಿ ಸುಮಾರು 40 ಸ್ಥಾನಗಳನ್ನು ಗೆಲ್ಲುತ್ತದೆ. ಇನ್ನು ಬಿಜೆಪಿಗೆ ಗೆಲ್ಲಲು ಇವಿಎಂ ಬೇಕು, ಅವರಿಗೆ ಒಂಟಿಯಾಗಿ ಗೆಲ್ಲಲು ಸಾಧ್ಯವಿಲ್ಲ. ಹೀಗಾಗಿ ಇವಿಎಂ ಜೊತೆ ಅವರ ಮೈತ್ರಿ ಇದೆ ಎಂದು ಸಂಜಯ್ ರಾವತ್ ಟಾಂಗ್ ಕೊಟ್ಟಿದ್ದಾರೆ.

RELATED ARTICLES

Latest News