Monday, June 9, 2025
Homeಅಂತಾರಾಷ್ಟ್ರೀಯ | Internationalಹೊತ್ತಿ ಉರಿದ ಲಾಸ್‌‍ ಏಂಜಲೀಸ್‌‍, ಹಿಂಸಾ ರೂಪಕ್ಕೆ ತಿರುಗಿದ ಪ್ರತಿಭಟನೆ

ಹೊತ್ತಿ ಉರಿದ ಲಾಸ್‌‍ ಏಂಜಲೀಸ್‌‍, ಹಿಂಸಾ ರೂಪಕ್ಕೆ ತಿರುಗಿದ ಪ್ರತಿಭಟನೆ

Los Angeles Immigration Protests

ಲಾಸ್‌‍ ಏಂಜಲೀಸ್‌‍, ಜೂನ್‌ 9– ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಟ್ರಂಪ್‌ ಅವರ ವಲಸೆ ದಮನ ಕ್ರಮ ವಿರೋಧಿಸಿ ಅಮೆರಿಕದಲ್ಲಿ ನಡೆದಿದ್ದ ಪ್ರತಿಭಟನೆಗಳು ಹಿಂಸಾರೋಪ ತಳೆದಿದೆ. ಲಾಸ್‌‍ ಏಂಜಲೀಸ್‌‍ನಲ್ಲಿ ಪ್ರತಿಭಟನೆಗಳು ತೀವ್ರಗೊಂಡಿದ್ದು ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದು, ಪ್ರಮುಖ ಹೆದ್ದಾರಿಯನ್ನು ತಡೆದು ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ.

ಪ್ರತಿಭಟನಾಕಾರರನ್ನು ನಿಯಂತ್ರಿಸಲು ಅರೆ ಸೇನಾ ಪಡೆಗಳು ಅಶ್ರುವಾಯು, ರಬ್ಬರ್‌ ಗುಂಡುಗಳನ್ನು ಹಾರಿಸಿದ್ದಾರೆ. ಪ್ರತಿಭಟನಾಕಾರರು ಸಾರ್ವಜನಿಕ ಉದ್ಯಾನವನದಿಂದ ಕುರ್ಚಿಗಳನ್ನು ಹಿಡಿದು ತಾತ್ಕಾಲಿಕ ತಡೆಗೋಡೆಯನ್ನು ರೂಪಿಸಿದರು, ಇನ್ನೊಂದು ಬದಿಯಲ್ಲಿರುವ ಪೊಲೀಸರ ಮೇಲೆ ವಸ್ತುಗಳನ್ನು ಎಸೆದಿದ್ದಾರೆ,ಸ್ವಯಂ ಚಾಲಿತ ವೇಮೊ ಕಾರುಗಳಿಗೆ ಬೆಂಕಿ ಹಚ್ಚಲಾಗಿದ್ದು ಆಕಾಶಕ್ಕೆ ದೊಡ್ಡ ಕಪ್ಪು ಹೊಗೆ ಆವರಿಸಿದೆ.

ಪೊಲೀಸ್‌‍ ವಾಹನಗಳ ಮೇಲೆ ಕಾಂಕ್ರೀಟ್‌, ಕಲ್ಲುಗಳು, ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಮತ್ತು ಪಟಾಕಿಗಳ ಎಸೆದಿದ್ದು . ರಕ್ಷಣೆ ಪಡೆಯಲು ಪೊಲೀಸ್‌‍ಅಧಿಕಾರಿಗಳು ಮೇಲ್ಸೇತುವೆಯ ಕೆಳಗೆ ಓಡಿದ್ದಾರೆ. ರಾಷ್ಟ್ರೀಯ ಗಾರ್ಡ್‌ ಪಡೆಗಳು ಬಂದೂಕುಗಳು,ಗಲಭೆ ನಿಯಂತ್ರಣ ಗುರಾಣಿಗಳನ್ನು ಹಿಡಿದು ಪ್ರತಿಭಟನೆ ಹತ್ತಿಕ್ಕಲು ಹೆಣಗಾಡಿದ್ದರೆ.

ಪೊಲೀಸ್‌‍ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಗುಂಡುಹಾರಿಸಿ ದ್ದಾರೆ. ಈ ನಡುವೆ ಪ್ರದೇಶದಲ್ಲಿ ವಾರಪೂರ್ತಿ ವಲಸೆ ಬಂದವರ ಬಂಧನಗಳ ಸಂಖ್ಯೆ 100 ಕ್ಕಿಂತ ಹೆಚ್ಚಾಗಿದೆ ಎಂದು ಫೆಡರಲ್‌ ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನು ಜಾರಿಯನ್ನು ಅಡ್ಡಿಪಡಿಸಿದ ಆರೋಪ ಹೊತ್ತಿರುವ ಪ್ರಮುಖ ಯೂನಿಯನ್‌ ನಾಯಕ ಸೇರಿದಂತೆ ಇನ್ನೂ ಅನೇಕರನ್ನು ಬಂಧಿಸಲಾಗಿದೆ.

RELATED ARTICLES

Latest News