Sunday, January 12, 2025
Homeಅಂತಾರಾಷ್ಟ್ರೀಯ | Internationalನಿಲ್ಲದ ಲಾಸ್ಏಂಜಲೀಸ್ ಕಾಡ್ಗಿಚ್ಚು, 16 ಸಾವು, 1.66ಲಕ್ಷ ಮಂದಿ ಸ್ಥಳಾಂತರ

ನಿಲ್ಲದ ಲಾಸ್ಏಂಜಲೀಸ್ ಕಾಡ್ಗಿಚ್ಚು, 16 ಸಾವು, 1.66ಲಕ್ಷ ಮಂದಿ ಸ್ಥಳಾಂತರ

Los Angeles wildfire live updates: Death toll rises to 16 as firefighters race to contain wildfires

ವಾಷಿಂಗ್ಟನ್, ಜ. 12- ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಹಬ್ಬಿರುವ ಕಾಡ್ಗಿಚ್ಚು ದಿನೇ ದಿನೇ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಈವರೆಗೆ 16 ಜೀವಗಳು ಬಲಿ ಯಾಗಿದ್ದು, 12,000 ಕಟ್ಟಡಗಳು ಸುಟ್ಟು ಕರಕಲಾಗಿವೆ. ಅಗ್ನಿ ನರ್ತನ ಮುಂದುವರಿದಿರುವ ಕಾರಣ ಇನ್ನೂ 57,000 ಕಟ್ಟಡಗಳು ಸುಟ್ಟು ಭಸವಾಗುವ, 1.66 ಲಕ್ಷ ಮಂದಿ ಸ್ಥಳಾಂತರವಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿ ಸಲು ಸತತ ಪ್ರಯತ್ನದಲ್ಲಿ ತೊಡಗಿದೆ. ಆದ್ರೆ ಮತ್ತೊಂದೆಡೆ 100 ಕಿಮೀ ವೇಗದಲ್ಲಿ ಬೀಸುತ್ತಿರುವ ಸಾಂಟಾ ಅನಾ ಚಂಡಮಾರುತ ಗಾಳಿಯು ಬೆಂಕಿ ಕೆನ್ನಾಲಿಗೆಯನ್ನು ಮತ್ತಷ್ಟು ಚಾಚಿಸುತ್ತಲೇ ಇದೆ. ಹೀಗಾಗಿ ಇನ್ನೂ ಸಾವಿರಾರು ಮನೆಗಳು ಹಾನಿಗೀಡಾಗುವ ಸಾಧ್ಯತೆಗಳಿವೆ.

ಜೊತೆಗೆ ಇನ್ನೂ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಕ್ಯಾಲಿಫೋರ್ನಿಯಾದ ಪಾಲಿಸೇಡ್ಸ್ ಪ್ರದೇಶವೊಂದರಲ್ಲೇ 22,000ಕ್ಕೂ ಅಧಿಕ ಎಕರೆ ಭೂಪ್ರದೇಶ ಸುಟ್ಟು ಭಸವಾಗಿದೆ. 426 ಮನೆಗಳೂ ಸೇರಿದಂತೆ 5,000ಕ್ಕೂ ಹೆಚ್ಚು ಕಟ್ಟಡಗಳು ನಾಶವಾಗಿದೆ. ಸಾವಿನ ಸಂಖ್ಯೆ 16ಕ್ಕೆ ಏರಿಕೆಯಾಗಿದ್ದು, ಶ್ವಾನದಳದ ಮೂಲಕ ಶವಗಳ ಹುಟುಕಾಟ ಕಾರ್ಯನಡೆದಿದೆ.

ಜ.7ರಂದು ಹೊತ್ತಿಕೊಂಡ ಕಾಡ್ಗಿಚ್ಚಿನಿಂದ ಈವರೆಗೆ 39,000 ಎಕರೆ ಭೂಪ್ರದೇಶ ಹಾನಿಯಾಗಿದೆ. ಅಂದಾಜು 150 ಶತಕೋಟಿ ಡಾಲರ್ನಷ್ಟು ಆರ್ಥಿಕ ನಷ್ಟ ಉಂಡಾಗಿದೆ.
ಬಿಸಿ ಗಾಳಿ, ಫೈರ್ನಾಡೋ (ಅಗ್ನಿ ಜ್ವಾಲೆ)ಗಳು ಮುಗಿಲೆತ್ತರಕ್ಕೆ ಚಿಮುತ್ತಿದ್ದು, ವ್ಯಾಪ್ತಿಯನ್ನು ವಿಸ್ತರಿಸುತ್ತಲೇ ಇದೆ. ಅಮೆರಿಕದ ಇತಿಹಾಸದಲ್ಲೇ ಇದು ಕಂಡೂ ಕೇಳರಿಯದ ಕಾಡ್ಗಿಚ್ಚು ಎಂದು ಅಧಿಕಾರಿಗಳು ಬಣ್ಣಿಸಿದ್ದಾರೆ.

ಈಗಾಗಲೇ 1.53 ಲಕ್ಷ ಮಂದಿಯನ್ನು ಸ್ಥಳಾಂತರಿಸಲು ಆದೇಶ ನೀಡಲಾಗಿದೆ. ಅಲ್ಲದೇ ಇನ್ನೂ 57,000 ಕಟ್ಟಡಗಳು ಅಪಾಯದಲ್ಲಿವೆ. 1.66 ಲಕ್ಷ ಮಂದಿ ಸ್ಥಳಾಂತರಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ತಿಳಿದುಬಂದಿದೆ. ಈ ಮಧ್ಯೆ ಕೆನಡಾ ಹಾಗೂ ಮೆಕ್ಸಿಕೋ ದೇಶಗಳು ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ನಂದಿಸಲು ನೆರವು ಚಾಚಿವೆ.

RELATED ARTICLES

Latest News