Friday, October 18, 2024
Homeರಾಷ್ಟ್ರೀಯ | Nationalಉತ್ತರಾಖಂಡದಲ್ಲಿ ರೈಲನ್ನು ಹಳಿ ತಪ್ಪಿಸಲೆತ್ನಿಸಿದ ದುಷ್ಕರ್ಮಿಗಳು

ಉತ್ತರಾಖಂಡದಲ್ಲಿ ರೈಲನ್ನು ಹಳಿ ತಪ್ಪಿಸಲೆತ್ನಿಸಿದ ದುಷ್ಕರ್ಮಿಗಳು

LPG cylinder found on railway track in Roorkee in another train derailment bid

ರೂರ್ಕಿ,ಅ.13- ದೇಶದಲ್ಲಿ ರೈಲು ಹಳಿ ತಪ್ಪಿಸುವ ದುಷ್ಕರ್ಮಿಗಳ ಕೃತ್ಯ ಮುಂದುವರೆದಿದೆ. ಉತ್ತರಾಖಂಡದಲ್ಲಿ ದುಷ್ಕರ್ಮಿಗಳು ರೈಲು ಹಳಿ ತಪ್ಪಿಸುವ ಯತ್ನ ಮಾಡಿದ್ದಾರೆ. ರೂರ್ಕಿಯ ಧನೇರಾ ರೈಲು ನಿಲ್ದಾಣದ ಬಳಿಯ ರೈಲ್ವೆ ಹಳಿಯಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ. ಗ್ಯಾಸ್ ಸಿಲಿಂಡರ್ ಪತ್ತೆಯಾದ ಸ್ಥಳವು ಬಂಗಾಳ ಇಂಜಿನಿಯರಿಂಗ್ ಗ್ರೂಪ್ ಮತ್ತು ಸೆಂಟರ್‌ನ ಪ್ರಧಾನ ಕಚೇರಿಗೆ ಸಮೀಪದಲ್ಲಿರುವ ಕಾರಣ ಅದನ್ನು ಸೂಕ್ಮ ಪ್ರದೇಶವೆಂದು ಗುರುತಿಸಲಾಗಿದೆ.

ಸೇನಾ ವಾಹನಗಳು ಮತ್ತು ಸಿಬ್ಬಂದಿಯನ್ನು ಸರಕು ರೈಲುಗಳ ಮೂಲಕ ವಿವಿಧ ಪೋಸ್ಟ್ ಗಳಿಗೆ ಸಾಗಿಸುವುದು ಸೇರಿದಂತೆ ಈ ಪ್ರದೇಶವನ್ನು ಮಿಲಿಟರಿಯವರು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಹಳಿಗಳ ಮೇಲೆ ಸಿಲಿಂಡರ್ ಪತ್ತೆಯಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ.

ಸಿಲಿಂಡರ್ ಕಂಡ ಕೂಡಲೇ ಲೋಕೊ ಪೈಲಟ್ ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದಾರೆ. ಘಟನೆಯನ್ನು ರೈಲ್ವೆ ಅಧಿಕಾರಿಗಳಿಗೆ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಅವರು ಸಿಲಿಂಡರ್ ತೆಗೆದಿದ್ದಾರೆ. ಈ ಸಮಯದಲ್ಲಿ, ರೈಲ್ವೆ ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್ ಅನ್ನು ಯಾರು ಇರಿಸಿದರು ಎಂಬುದು ಸ್ಪಷ್ಟವಾಗಿಲ್ಲ.

ಈ ಹಿಂದೆ ಕೂಡ ಹಲವಾರು ಪ್ರದೇಶಗಳಲ್ಲಿ ರೈಲು ಹಳಿ ತಪ್ಪಿಸುವ ದುಷ್ಕರ್ಮಿಗಳ ದುಷ್ಕೃತ್ಯಗಳು ವಿಫಲವಾಗಿದ್ದಂತೆ ಇಲ್ಲೂ ಕೂಡು ರೈಲು ಹಳಿ ತಪ್ಪದೆ ಯಾವುದೆ ಅನಾಹುತ ಸಂಭವಿಸಿಲ್ಲ ಎನ್ನುವುದು ಸಮಾಧನಕರ ವಿಷಯವಾಗಿದೆ.

RELATED ARTICLES

Latest News