Sunday, September 8, 2024
Homeರಾಷ್ಟ್ರೀಯ | Nationalಮತಗಟ್ಟೆಯೊಳಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಶಿಕ್ಷಕ ಸಸ್ಪೆಂಡ್

ಮತಗಟ್ಟೆಯೊಳಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಶಿಕ್ಷಕ ಸಸ್ಪೆಂಡ್

ಲಕ್ನೋ, ಮೇ 22 – ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಹಮೀರ್‌ಪುರದಲ್ಲಿ ಪೋಲಿಂಗ್‌ ಆಫೀಸರ್‌ ಆಗಿ ನಿಯೋಜಿಸಲಾದ ಸಹಾಯಕ ಶಿಕ್ಷಕ ಮತಗಟ್ಟೆಯೊಳಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಕ್ಕಾಗಿ ಚುನಾವಣಾಧಿಕಾರಿಗಳು ಅಮಾನತುಗೊಳಿಸಿದ್ದಾರೆ.

ಹಮೀರ್‌ಪುರ ಜಿಲ್ಲೆಯ ಮುಸ್ಕಾರಾ ಡೆವಲಪ್‌ಮೆಂಟ್‌ ಬ್ಲಾಕ್‌ನ ಉಮ್ರಿಯ ಬಾಲಕಿಯರ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕ ಆಶಿಶ್‌ ಕುಮಾರ್‌ ಆರ್ಯ ಅವರು ಹಮೀರ್‌ಪುರದ ಶ್ರೀವಿದ್ಯಾ ಮಂದಿರ ಇಂಟರ್‌ ಕಾಲೇಜಿನ ಮತದಾನ ಕೇಂದ್ರ 112 ರಲ್ಲಿ ಪೋಲಿಂಗ್‌ ಆಫೀಸರ್‌ (ಪ್ರಥಮ) ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟರು.

ಮತದಾನದ ದಿನದಂದು ಆರ್ಯ ತಮ್ಮ ಮೊಬೈಲ್‌ ಫೋನ್‌ನಲ್ಲಿ ಸೆಲ್ಫಿ ಜೊತೆಗೆ ಮತದಾರರ ಫೋಟೋಗಳನ್ನು ತೆಗೆದರು ಎಂದು ಆರೋಪಿಸಲಾಗಿದೆ, ಇದು ಚುನಾವಣಾ ಆಯೋಗದ ಸೂಚನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹಮೀರ್‌ಪುರದ ಜಿಲ್ಲಾ ಶಿಕ್ಷಣಾಧಿಕಾರಿ ರಿನ್ವಾ ಹೇಳಿದ್ದಾರೆ. ಚುನಾವಣಾ ಆಯೋಗದ ಸೂಚನೆ ಮೇರೆಗೆ ಆರ್ಯ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು.

ಈ ವಿಷಯದ ಬಗ್ಗೆ ತನಿಖೆ ನಡೆಸಲು ಬ್ಲಾಕ್‌ ಶಿಕ್ಷಣಾಧಿಕಾರಿಯನ್ನು ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಆಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಯಾವುದೇ ರೀತಿಯ ಅನುಚಿತ ಚಟುವಟಿಕೆ ನಡೆಸದಂತೆ ಮುಖ್ಯ ಚುನಾವಣಾಧಿಕಾರಿಗಳು ಚುನಾವಣಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ

RELATED ARTICLES

Latest News