Tuesday, August 19, 2025
Homeಬೆಂಗಳೂರುನಮ್ಮ ಮೆಟ್ರೋ ರೈಲಿನಲ್ಲಿ ಲಗೇಜ್‌ಗೂ ಶುಲ್ಕ

ನಮ್ಮ ಮೆಟ್ರೋ ರೈಲಿನಲ್ಲಿ ಲಗೇಜ್‌ಗೂ ಶುಲ್ಕ

Luggage charges on our metro trains

ಬೆಂಗಳೂರು, ಆ.19- ಜನ ಬೇಡ ಬೇಡ ಎಂದರೂ ಜಗ್ಗದೆ ಪ್ರಯಾಣ ದರ ಹೆಚ್ಚಳ ಮಾಡಿದ್ದ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಇದೀಗ ಲಗೇಜ್‌ಗೂ ಶುಲ್ಕ ವಿಧಿಸಲು ಮುಂದಾಗಿದ್ದಾರೆ.
ಹೌದು ಮೆಟ್ರೋ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರು ಇನ್ನು ಮುಂದೆ ತಾವು ಕೊಂಡೊಯ್ಯುವ ಲಗೇಜ್‌ಗಳಿಗೂ ಟಿಕೆಟ್‌ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ.

ದೇಶದಲ್ಲೇ ಬೆಂಗಳೂರು ಮೆಟ್ರೋ ಅತ್ಯಂತ ದುಬಾರಿ ಎನ್ನುವ ಮಾತುಗಳು ಕೇಳಿ ಬರುತ್ತಿರುವ ಸಮಯದಲ್ಲೇ ಲಗೇಜ್‌ಗೂ ಶುಲ್ಕ ವಿಧಿಸಿರುವ ಈ ಕ್ರಮ ಜನಾಕ್ರೋಶಕ್ಕೆ ಕಾರಣವಾಗಿದೆ.

ತಾವು ಮೆಟ್ರೋದಲ್ಲಿ ಸಂಚರಿಸುತ್ತಿದ್ದಾಗ ತಮ ಬಳಿ ಇದ್ದ ಒಂದು ಬ್ಯಾಗ್‌ಗೆ 30 ರೂ. ಶುಲ್ಕ ವಿಧಿಸಿರುವುದನ್ನು ಪೋಟೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಅಪ್‌ಲೋಡ್‌ ಮಾಡಿ ತಮ ಆಕ್ರೋಶ ಹೊರ ಹಾಕಿದ್ದಾರೆ.

RELATED ARTICLES

Latest News