ಬೆಂಗಳೂರು,ಸೆ.9– ಶಾಂತಿ, ಸೌಹಾರ್ದತೆ ಹಾಗೂ ಸಹಬಾಳ್ವೆಗೆ ಹೆಸರುವಾಸಿಯಾಗಿ ಎಲ್ಲಾ ಧರ್ಮೀಯರು ಸಹೋದರರಂತೆ ನೆಮದಿಯಿಂದ ಬದುಕುತ್ತಿದ್ದ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಏಕಾಏಕಿ ಶಾಂತಿ ಕದಡಿದ್ದರ ಹಿಂದೆ ರಾಮನಗರ ಜಿಲ್ಲೆ ಚನ್ನಪಟ್ಟಣದ ಇರ್ಫಾನ್ ಎಂಬಾತನೇ ರೂವಾರಿ ಎಂಬುದು ಬಹಿರಂಗಗೊಂಡಿದೆ.
ಜೊತೆಗೆ ಪ್ರಕರಣದ ಮಾಸ್ಟರ್ ಮೈಂಡ್ ಎಂದೇ ಹೇಳಲಾಗುತ್ತಿರುವ ಕೃತ್ಯಕ್ಕೆ ಪ್ರಚೋದನೆ ನೀಡಿದ್ದ ಜಾಫರ್ ಪರಾರಿಯಾಗಿದ್ದಾನೆ. ಈ ಇಬ್ಬರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಗಲಭೆಯ ಕಿಂಗ್‌ಪಿನ್ ರಾಮನಗರ ಜಿಲ್ಲೆ ಚನ್ನಪಟ್ಟಣದ ಇರ್ಫಾನ್ ಹಲವು ವರ್ಷಗಳಿಂದ ಮದ್ದೂರಿನಲ್ಲಿ ವಾಸವಾಗಿದ್ದಾನೆ. ಮಸೀದಿ ಮುಂದೆ ಗಣೇಶಮೂರ್ತಿ ಮೆರವಣಿಗೆ ಸಹಿಸಲಾಗದೇ ತನ್ನ ಸ್ನೇಹಿತ ಜಾಫರ್‌ನನ್ನು ಕಲ್ಲು ತೂರಲು ಪ್ರಚೋದಿಸಿದ್ದ ಎಂಬುದನ್ನು ರಾಷ್ಟ್ರೀಯ ಸುದ್ದಿ ವಾಹಿನಿಯೊಂದು ಬಹಿರಂಗಪಡಿಸಿದೆ.
ಮದ್ದೂರು ಪಟ್ಟಣದಲ್ಲಿ ಭಾನುವಾರ ಗಣೇಶ ವಿಸರ್ಜನೆ ಕುರಿತು ಮಾಹಿತಿ ಪಡೆದಿದ್ದ ಈ ಇಬ್ಬರು ಕೋಮುಗಲಭೆ ಸೃಷ್ಟಿಸಬೇಕೆಂದು ವ್ಯವಸ್ಥಿತ ಷಡ್ಯಂತ್ರ ರೂಪಿಸಿದ್ದರು. ಹೀಗಾಗಿ ವಿನಾಯಕನ ಮೆರವಣಿಗೆ ಹಾದುಹೋಗುವ ವೇಳೆ ಕಲ್ಲು ಎಸೆಯಲೆಂದೇ ಮುಂಚಿತವಾಗಿ ಧಾರ್ಮಿಕ ಕೇಂದ್ರವೊಂದರ ಬಳಿ ದೊಡ್ಡ ದೊಡ್ಡ ಗಾತ್ರದ ಕಲ್ಲುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು.
ಮೇಲ್ನೋಟಕ್ಕೆ ಇದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಗಣೇಶ ಮೆರವಣಿಗೆಯನ್ನು ಸಹಿಸದ ಐದಾರು ಮುಸ್ಲಿಂ ಯುವಕರ ಗುಂಪು ಈ ಕೃತ್ಯವೆಸಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 22 ಮಂದಿಯನ್ನು ಬಂಧಿಸಲಾಗಿದೆ.
ಪ್ರತಿದಿನ ಗಣೇಶ ಮೆರವಣಿಗೆ ನಡೆಯುತ್ತಿದ್ದನ್ನು ಸಹಿಸಿಕೊಳ್ಳದ ಈ ಗುಂಪು ಮೆರವಣಿಗೆ ಸಂದರ್ಭದಲ್ಲಿ ಏನಾದರೂ ಮಾಡಲೇಬೇಕೆಂದು ಯೋಚಿಸಿ, ಗಣೇಶನ ಮೂರ್ತಿ ಮಸೀದಿ ಮುಂದೆ ಹಾದು ಹೋಗುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬಳಿಕ ಮೆರವಣಿಗೆಯ ಮೆಲೆ ಕಲ್ಲು ತೂರಿದ್ದಾರೆ.
ಗಣೇಶನ ಮೆರವಣಿಗೆಯು ಮಸೀದಿ ದಾಟಿ 50 ಮೀಟರ್ ಮುಂದೆ ಹೋದ ಮೇಲೆ ಕಲ್ಲು ತೂರಿದ್ದಾರೆ. ಮಸೀದಿ ಪಕ್ಕ ಹಾಗೂ ಹಿಂಭಾಗದಿಂದ ಬಂದ ಕಲ್ಲುಗಳು ಮೊದಲಿಗೆ ಡಿಜೆಗೆ ಹಾಗೂ ಹಿಂದೂ ಯುವಕರು ಡ್ಯಾನ್ಸ್ ಮಾಡುತ್ತಿದ್ದ ಕಡೆಬಿದ್ದಿದೆ.
ಮುಸ್ಲಿಂ ಯುವಕರು ಎಸೆದ ಕಲ್ಲುಗಳು ಗಣೇಶಮೂರ್ತಿಯನ್ನು ಕೂರಿಸಿದ್ದ ಟ್ರಾಕ್ಟರ್‌ಗೆ ಬಡಿಯುತ್ತಿದ್ದಂತೆ ಹಿಂದೂ ಯುವಕರು ರೊಚ್ಚಿಗೆದ್ದಿದ್ದಾರೆ. ಹಿಂದೂ ಯುವಕರಿಂದಲೂ ಪ್ರತಿಯಾಗಿ ಕಲ್ಲು ತೂರಾಟವಾಗಿದೆಯಂತೆ. ಮಸೀದಿಯಿಂದ ಮುಸ್ಲಿಮರು ನಮ ಮೇಲೆ ಕಲ್ಲು ತೂರಿದ್ದಾರೆಂದು ಭಾವಿಸಿ ಪ್ರತಿದಾಳಿ ಮಾಡಿದ್ದಾರೆ.
ಕೆಲಕಾಲ ಎರಡು ಕೋಮುಗಳ ಯುವಕರ ನಡುವೆ ಸಂಘರ್ಷ ಉಂಟಾಗಿದೆ. ಗಲಾಟೆ ಜೋರಾಗುತ್ತಿದ್ದಂತೆ ಇರ್ಫಾನ್ ಮತ್ತು ಗ್ಯಾಂಗ್ ಸದಸ್ಯರು ಪರಾರಿಯಾಗಿದ್ದರು. ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಇರ್ಫಾನ್‌ಮತ್ತು 22 ಜನರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಕಲ್ಲು ತೂರಾಟದ ಹಿಂದೆ ಸಂಘಟನೆಗಳ ಕೈವಾಡ ಇದೆಯೇ ಆರೋಪಿಗಳು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರಾ? ಬಂಧಿತರಿಗೆ ಕ್ರಿಮಿನಲ್ ಹಿನ್ನೆಲೆವುಳ್ಳವರಾ? ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ರಾಮ್ ರಹೀಮ್ ನಗರದ ಮಸೀದಿ ಅಕ್ಕಪಕ್ಕ ಸಿಸಿಟಿವಿ ದೃಶ್ಯಗಳ ಪರಿಶೀಲನೆಗೆ ಮುಂದಾಗಿದ್ದಾರೆ. ಸಾಕ್ಷ್ಯಗಳು ಸಿಕ್ಕಿದರೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳನ್ನು ತಮ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.