Friday, November 22, 2024
Homeರಾಷ್ಟ್ರೀಯ | Nationalವಿಷ ಸೇವಿಸಿ ಬಿಜೆಪಿ ಶಾಸಕರ ಮೊಮ್ಮಗ ಆತ್ಮಹತ್ಯೆ

ವಿಷ ಸೇವಿಸಿ ಬಿಜೆಪಿ ಶಾಸಕರ ಮೊಮ್ಮಗ ಆತ್ಮಹತ್ಯೆ

ಇಂದೋರ್‌ ಮೇ 21- ಬಿಜೆಪಿ ಶಾಸಕರೊಬ್ಬರ ಮೊಮ್ಮಗ ವಿಷಕಾರಕ ಕ್ರಿಮಿನಾಶಕ ಸೇವಿಸಿ ಆತಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಖಿಲ್ಚಿಪುರ (ರಾಜ್‌ಗಢ) ಶಾಸಕ ಹಜಾರಿ ಲಾಲ್‌ ಡಾಂಗಿ ಅವರ ಮೊಮಗ ವಿಕಾಸ್‌‍ ದಂಗಿ(21) ನಿನ್ನೆ ರಾತ್ರಿ ಇಲ್ಲಿನ ಗಾಂಧಿನಗರ ಪ್ರದೇಶದ ಬಾಡಿಗೆ ವಸತಿಗೃಹದಲ್ಲಿ ಕ್ರಿಮಿನನಾಶ ಸಲ್ಫಾ ಸೇವಿಸಿ ಆತಹತ್ಯೆಗೆ ಶರಣಾಗಿದ್ದಾನೆ.

ವಿಕಾಸ್‌‍ ಡಾಂಗಿ ಇಂದೋರ್‌ನಲ್ಲಿ ಬಾಡಿಗೆ ವಸತಿಗೃಹದಲ್ಲಿ ತಂಗಿದ್ದಾಗ ಸ್ಥಳೀಯ ಕಾಲೇಜಿನಲ್ಲಿ ಎಲ್‌ಎಲ್‌ಬಿ ಕೋರ್ಸ್‌ ಓದುತ್ತಿದ್ದರು.ವಿಕಾಸ್‌‍ನ ಸ್ನೇಹಿತ ಸೋಮವಾರ ರಾತ್ರಿ ಅವನಿಗೆ ಕರೆ ಮಾಡಿದಾಗ ಪ್ರತಿಕ್ರಿಯಿಸಲಿಲ್ಲ. ನಂತರ ಸ್ಥಳಕ್ಕೆ ಹೋದಾಗ, ವಿಕಾಸ್‌‍ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

ವಿಕಾಸ್‌‍ ಆತಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‌ನೋಟ್‌ ಬರೆದಿದ್ದು, ಅದರಲ್ಲಿ ತನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿದ್ದಾನೆ. ಸ್ಥಳದಲ್ಲಿ ದೊರೆತ ಕೆಲವು ಸುಳಿವುಗಳನ್ನು ಆಧರಿಸಿ, ಪ್ರೇಮ ಪ್ರಕರಣದಿಂದ ಈ ಆತ್ಮಹತ್ಯೆ ಮಾಡಿಕೊಂಡಿರಬಹುದು. ಆದರೂ ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ.ಎಂದು ಹೆಚ್ಚುವರಿ ಪೊಲೀಸ್‌‍ ಉಪಆಯುಕ್ತ ಅಲೋಕ್‌ ಕುಮಾರ್‌ ಶರ್ಮಾ ತಿಳಿಸಿದ್ದಾರೆ.

ಈತ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ, ಆದರೆ ಪ್ರಕರಣವನ್ನು ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವಿವರವಾದ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

RELATED ARTICLES

Latest News