Thursday, December 12, 2024
Homeರಾಷ್ಟ್ರೀಯ | Nationalಹಿಂದೂ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಮುಸ್ಲಿಂ ಯುವಕ ಅರೆಸ್ಟ್, ಮನೆ ನೆಲಸಮ

ಹಿಂದೂ ಮಹಿಳೆ ಮೇಲೆ ಅತ್ಯಾಚಾರವೆಸಗಿದ ಮುಸ್ಲಿಂ ಯುವಕ ಅರೆಸ್ಟ್, ಮನೆ ನೆಲಸಮ

ಗುಣಾ, ಎ. 22 ತನ್ನ ಸ್ನೇಹಿತೆಯ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು ನಂತರ ಆತನ ಮನೆಯ ಅಕ್ರಮ ಭಾಗವನ್ನು ಕೆಡವಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.

ಅಯಾನ್ ಖಾನ್ (20)ಬಂಧಿತ ಆರೋಪಿಯಾಗಿದ್ದು ಈತ 23 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡುವ ಮುನ್ನ ಕಣ್ಣಿಗೆ ಅಂಟನ ರಸಾಯನಿಕ ಹಾಕಿದ್ದ ಹಿನ್ನಲೆಯಲ್ಲಿ ಆಕೆಯ ಒಂದು ಕಣ್ಣಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಳೆದ 10 ದಿನಗಳಿಂದ ಆರೋಪಿಯೊಂದಿಗೆ ಇದ್ದೆ, ತನ್ನನ್ನು ಮದುವೆಯಾಗುವಂತೆ ಕೇಳಿದಾಗ ದೌರ್ಜನ್ಯ ಎಸಗಿದ್ದಾನೆ, ಬೆಲ್ಟ್‍ನಿಂದ ಥಳಿಸಿದ್ದಾನೆ ಮತ್ತು ಆಕೆಯ ಕಣ್ಣಿಗೆ ಬಲವಾದ ಅಂಟು ಹಾಕಿದ್ದಾನೆ ಎಂದು ಸಂತ್ರಸ್ಥೆ ದೂರನ್ನು ಉಲ್ಲೇಖಿಸಿದ್ದಾಳೆ
ಏಪ್ರಿಲ್ 18 ರಂದು ತನ್ನ ಬೈಕ್‍ನಲ್ಲಿ 60 ಲೀಟರ್ ಮದ್ಯವನ್ನು ಸಾಗಿಸುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಯಿತು.ಅಬಕಾರಿ ಕಾಯ್ದೆ.

ಅತ್ಯಾಚಾರ, ಹಲ್ಲೆ ಸೇರಿ ವಿವಿಧ ಕಾಯ್ಧೆಯಡಿ ಪ್ರಕರಣ ದಾಖಲಿಸಲಾಗಿದೆ ಮತ್ತು ಇದೇ ವೇಳೆ ಆತನ ಮನೆಯ ಅಕ್ರಮ ಭಾಗವನ್ನು ಕೆಡವಿದ್ದಾರೆ. ಮಹಿಳೆಗೆ ಚಿಕಿತ್ಸೆ ನೀಡಿದ ಗುಣಾ ಮೂಲದ ಖಾಸಗಿ ಆಸ್ಪತ್ರೆಯ ನೇತ್ರಶಾಸ್ತ್ರಜ್ಞರು ಆಕೆಯ ಒಂದು ಕಣ್ಣಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಿದರು. ಆಕೆಯನ್ನು ಸುಧಾರಿತ ಆರೈಕೆಗಾಗಿ ಗ್ವಾಲಿಯರ್‍ಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News