ಭೂಪಾಲ್,ಜು.16- ಮಧ್ಯ ಪ್ರದೇಶದ ಗುನಾ ಜಿಲ್ಲೆಯಲ್ಲಿ ವಿಷಪೂರಿತ ನಾಗರಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಬೈಕ್ ಸವಾರಿ ಮಾಡುತ್ತಿದ್ದ ವ್ಯಕ್ತಿ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ.ದೀಪಕ್ ಮಹಾವರ್ ಮೃತಪಟ್ಟ ವ್ಯಕ್ತಿ. ಅತಿಯಾದ ಹುಚ್ಚಾಟ ಪ್ರಾಣಕ್ಕೆ ಕುತ್ತು ತರಬಹುದು ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ.
ಘಟನೆ ನಡೆಯುವ ಮೊದಲು ಪಕ್ಕದಲ್ಲಿದ್ದ ವ್ಯಕ್ತಿ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡು ಓಡಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಜೆಪಿ ಕಾಲೇಜಿನಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ದೀಪಕ್, ಹಾವುಗಳನ್ನು ರಕ್ಷಿಸುವಲ್ಲಿ ಹೆಸರುವಾಸಿಯಾಗಿದ್ದರು. ಸಾವಿರಾರು ಹಾವುಗಳನ್ನು ರಕ್ಷಿಸಿದ್ದರು. ಮುಂಬರುವ ಶ್ರಾವಣ ಮಾಸದ ಮೆರವಣಿಗೆಯಲ್ಲಿ ಪ್ರದರ್ಶಿಸುವ ಉದ್ದೇಶದಿಂದ ಅವರು ಇತ್ತೀಚೆಗೆ ಒಂದು ನಾಗರಹಾವನ್ನು ಹಿಡಿದು ಗಾಜಿನ ಪಾತ್ರೆಯಲ್ಲಿ ಇಟ್ಟಿದ್ದರು.
ಘಟನೆ ನಡೆದ ದಿನ, ದೀಪಕ್ ತನ್ನ ಮಕ್ಕಳನ್ನು ಶಾಲೆಗೆ ಬಿಡುವಾಗ ಹಾರದಂತೆ ಕುತ್ತಿಗೆಗೆ ನಾಗರಹಾವು ಸುತ್ತಿಕೊಂಡಿದ್ದ. ನಂತರ, ನಾಗರಹಾವು ಇದ್ದಕ್ಕಿದ್ದಂತೆ ಆತನನ್ನು ಕಚ್ಚಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾರೆ.
ದೀಪಕ್‌ಗೆ ವಿಷ ನಿರೋಧಕ ನೀಡಲಾಯಿತಾದರೂ ವೈದ್ಯಕೀಯ ಸಹಾಯ ಪಡೆಯುವಲ್ಲಿ ವಿಳಂಬವಾದ ಕಾರಣ ಅದು ನಿಷ್ಟಪ್ರಯೋಜಕವಾಗಿದೆ.ಈ ಘಟನೆಯಿಂದಾಗಿ ದೀಪಕ್ ಅವರ ಇಬ್ಬರು ಗಂಡು ಮಕ್ಕಳಾದ ರೌನಕ್ ಮತ್ತು ಚಿರಾಗ್ ಈಗ ತಂದೆಯನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ಅವರ ಪತ್ನಿ ಮೊದಲೇ ನಿಧನರಾಗಿದ್ದರು.
- ಶೀಘ್ರದಲ್ಲೇ ಶುಭಸುದ್ದಿ : ಬಿಜೆಪಿಗೆ ಮರಳುವರೇ ಯತ್ನಾಳ್..?
- ಬಾಂಗ್ಲಾದಲ್ಲಿ ಧ್ವಂಸಗೊಳಿಸಲಾಗಿರುವ ಸತ್ಯಜಿತ್ ರೇ ಪೂರ್ವಿಕರ ಮನೆ ಪುನರ್ನಿರ್ಮಾಣ ಭಾರತ ಮನವಿ
- ಪಹಲ್ಗಾಮ್ ದಾಳಿ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸೋದ್ಯಮ ಭಾರಿ ಕುಸಿತ
- ತುಮುಲ್ನಿಂದ ತಿರುಪತಿಗೆ ತುಪ್ಪ ರವಾನೆ
- ಪಾರ್ಟಿ ಮುಗಿಸಿ ಮನೆಗೆ ಬರುತ್ತಿದ್ದಂತೆ ಕುಸಿದು ಬಿದ್ದು ಪ್ರಾಣಬಿಟ್ಟ ಯುವಕ