ಪ್ರಯಾಗ್ರಾಜ್,ಜ.29- ಕುಂಭಾಮೇಳಾ ಆಡಳಿತವು ಸಂಗಮದ ತುದಿಯಲ್ಲಿ ಅಖಾಡಾಗಳ ಸ್ನಾನಕ್ಕಾಗಿ ನಿಗದಿಪಡಿಸಿದ ಪ್ರದೇಶವನ್ನು ಸ್ವಚ್ಛಗೊಳಿಸುತ್ತಿದೆ. ಪ್ರದೇಶವನ್ನು ಸ್ವಚ್ಛಗೊಳಿಸಿದ ನಂತರ ಸ್ನಾದ ಅಖಾಡಗಳಲ್ಲಿ ಅಮೃತಸ್ನಾನ ಮಾಡಲು ಅವಕಾಶ ನೀಡಲಾಗುವುದು. ರೈಲ್ವೆ ಸಚಿವಾಲಯ ಯಾವುದೇ ವಿಶೇಷ ರೈಲುಗಳನ್ನು ರದ್ದುಗೊಳಿಸುವ ಯೋಜನೆ ಇಲ್ಲ ಎಂದು ತಿಳಿಸಿದೆ.
ಪ್ರಯಾಗ್ರಾಜ್ನ ವಿವಿಧ ನಿಲ್ದಾಣಗಳಿಂದ 360ಕ್ಕೂ ಹೆಚ್ಚು ರೈಲುಗಳನ್ನು ನಿಯೋಜಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಾಕುಂಭದ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಮುಖ್ಯ ಕಾರ್ಯದರ್ಶಿ, ಡಿಜಿಪಿ, ಪ್ರಧಾನ ಕಾರ್ಯದರ್ಶಿ-ಗೃಹ, ಸಿಎಂಒ ಅಧಿಕಾರಿಗಳು ಮತ್ತು ಎಡಿಜಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮಹಾ ಕುಂಭ 2025 ಗಾಗಿ ಸ್ಥಾಪಿಸಲಾದ ವಾರ್ ರೂಮ್ಗಳ ವ್ಯವಸ್ಥೆ ಮಾಡಲಾಗಿದೆ.
ಗಣ್ಯರ ಸಂತಾಪ :
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಹಾ ಕುಂಭದ ಸಮಯದಲ್ಲಿ, ತೀರ್ಥರಾಜ ಸಂಗಮದ ದಡದಲ್ಲಿ ಸಂಭವಿಸಿದ ಕಾಲ್ತುಳಿತದ ಸುದ್ದಿ ತುಂಬಾ ಹೃದಯವಿದ್ರಾವಕವಾಗಿದೆ. ಈ ಘಟನೆಯಲ್ಲಿ ಹಲವಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇತರರು ಗಾಯಗೊಂಡಿದ್ದಾರೆ. ಮೃತ ಭಕ್ತರ ಕುಟುಂಬಗಳಿಗೆ ನಮ್ಮ ಸಂತಾಪಗಳು.
ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ನಮ ಕಾಂಗ್ರೆಸ್ ಕಾರ್ಯಕರ್ತರು ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಬೇಕು ಎಂದು ಎಂದು ಹೇಳಿದ್ದಾರೆ.
ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮಾತನಾಡಿ, ಮಹಾಕುಂಭದಲ್ಲಿ ನಡೆದ ಕಾಲ್ತುಳಿತ ಘಟನೆ ತುಂಬಾ ದುಃಖಕರ.
ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಭಕ್ತರ ಆತಕ್ಕೆ ಶಾಂತಿ ಸಿಗಲಿ. ದುಃಖವನ್ನು ಭರಿಸಲು ದೇವರು ಅವರ ಕುಟುಂಬಗಳಿಗೆ ಶಕ್ತಿ ನೀಡಲಿ. ಎಲ್ಲಾ ಭಕ್ತರು ತಾಳೆ ಮತ್ತು ಎಚ್ಚರಿಕೆಯಿಂದ ಇರಬೇಕು ಎಂದು ನಾನು ವಿನಮ್ರವಾಗಿ ಮನವಿ ಮಾಡುತ್ತೇನೆ. ಆಡಳಿತದ ಸೂಚನೆಗಳನ್ನು ಪಾಲಿಸಿ ಮತ್ತು ಪರಸ್ಪರರ ಸುರಕ್ಷತೆಯನ್ನು ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಕ್ತರಿಗೆ ಮನವಿ ಮಾಡಿದು, ್ದಗಂಗೆಯ ಯಾವುದೇ ಘಾಟ್ ಬಳಿ ಇರುವ ಭಕ್ತರು ಅಲ್ಲಿ ಸ್ನಾನ ಮಾಡಿ ಸಂಗಮದ ತುದಿಗೆ ತಲುಪಲು ಪ್ರಯತ್ನಿಸಬಾರದು. ಪುಣ್ಯ ಸ್ನಾನಕ್ಕಾಗಿ ಹಲವಾರು ನಿಗದಿತ ಸ್ನಾನ ಘಾಟ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಆಡಳಿತದ ಸೂಚನೆಗಳನ್ನು ಪಾಲಿಸಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸಹಕರಿಸಿ. ಯಾವುದೇ ವದಂತಿಗಳಿಗೆ ಗಮನ ಕೊಡಬೇಡಿ ಎಂದಿದ್ದಾರೆ.