Wednesday, March 12, 2025
Homeರಾಷ್ಟ್ರೀಯ | Nationalಅರ್ಥಿಕ ಅಭಿವೃದ್ಧಿಗೆ ಸಾಕ್ಷಿಯಾದ ಮಹಾ ಕುಂಭಮೇಳ : ಹಲವು ಉದ್ಯೋಗಗಳ ಸೃಷ್ಟಿ

ಅರ್ಥಿಕ ಅಭಿವೃದ್ಧಿಗೆ ಸಾಕ್ಷಿಯಾದ ಮಹಾ ಕುಂಭಮೇಳ : ಹಲವು ಉದ್ಯೋಗಗಳ ಸೃಷ್ಟಿ

Mahakumbh 2025: A Spiritual Gathering Set to Boost India’s Economy by $23 Billion

ಪ್ರಯಾಗರಾಜ್ ಉತ್ತರಪ್ರದೇಶ), ಫೆ.13- ಜಗತ್ತಿನ ಅತಿ ದೊಡ್ಡ ಉತ್ಸವ ಹಾಗೂ 144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾಕುಂಭ ಮೇಳ ಅನೇಕ ದೇಶಗಳ ಜನಸಂಖ್ಯಾ ಗಾತ್ರವನ್ನು ಮೀರಿಸಿದೆ. ಇದು ಆರ್ಥಿಕವಾಗಿ ಉತ್ತರಪ್ರದೇಶದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ.

ಮಹಾಕುಂಭ ನಡೆಯುತ್ತಿರುವ ಪ್ರಯಾಗರಾಜ್ ನಗರದೆಲ್ಲೆಡೆ ಈಗ ಉದ್ಯಮಗಳ ಹೆಚ್ಚಳವಾಗಿರುವುದನ್ನು ಕಾಣಬಹುದು. ಇದು ಸಾಮಾನ್ಯರು ಮತ್ತು ರಾಜ್ಯಕ್ಕೆ ಹೆಚ್ಚಿನ ಆದಾಯ ತಂದು ಕೊಟ್ಟಿದೆ. ಹೊಸ ರಸ್ತೆ, ಸೇತುವೆ, ಹೆಚ್ಚುವರಿ ವಿಮಾನ, ರೈಲು ಸೇವೆ, ಹೊಸ ಹೋಟೆಲ್ಗಳು, ರೆಸ್ಟೋರೆಂಟ್ ಮತ್ತು ಕೆಲಸಗಾರರಿಗೆ ಬೇಡಿಕೆ ಹೆಚ್ಚುತ್ತಿರುವುದು ಕಂಡು ಬಂದಿದೆ.

ಕುಂಭಮೇಳದಲ್ಲಿ ಅತಿದೊಡ್ಡ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿವೆ. ಲಕ್ಷಾಂತರ ಜನರು ಕುಂಭಮೇಳಕ್ಕೆ ಆಗಮಿಸುತ್ತಿದ್ದು, ಅವರಿಗೆ ವಸತಿ, ಸಾರಿಗೆ ಊಟದ ವ್ಯವಸ್ಥೆಯ ಭಾಗವಾಗಿ ಅನೇಕರು ಉದ್ಯೋಗ ಕಂಡುಕೊಂಡಿದ್ದಾರೆ.

ಎಂಟು ಪಟ್ಟು ಆದಾಯ: ಟಾಕ್ಸಿ ಚಾಲಕನಾಗಿ ನಾನು ಪ್ರತಿನಿತ್ಯ 250 ಡಾಲರ್ ಸಂಪಾದಿಸುತ್ತಿದ್ದು, ಇದು ನನ್ನ ಸಾಮಾನ್ಯ ಆದಾಯಕ್ಕಿಂತ ಎಂಟು ಪಟ್ಟು ಹೆಚ್ಚಿಸಿದೆ. ನನ್ನ ಜೀವನದಲ್ಲೇ ಅತ್ಯಂತ ಬಿಡುವಿಲ್ಲದ ಕೆಲಸವನ್ನು ನಾನು ಈಗ ಮಾಡುತ್ತಿದ್ದೇನೆ. 18ರಿಂದ 20 ಗಂಟೆ ಕೈಗೆ ಕೆಲಸ ಸಿಗುತ್ತಿದೆ. ಇದರಿಂದ ನಾನು ಮಾತ್ರವಲ್ಲ ಅನೇಕರು ಲಾಭ ಪಡೆಯುತ್ತಿದ್ದು, ಇದೊಂದು ಜೀವನ ಬದಲಾವಣೆ ಕಾರ್ಯಕ್ರಮವಾಗಿದೆ ಎಂದು ಚಾಲಕ ಕುಮಾರ್ ಹೇಳುತ್ತಾರೆ.

ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿನ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ದೇವೇಂದ್ರ ಪ್ರತಾಪ್ ಸಿಂಗ್ ಪ್ರಕಾರ, ಇದು 30 ಬಿಲಿಯನ್ ಡಾಲರ್‌ಗೂ ಮೀರಿದ್ದು, ಈ ಮಹಾ ಕಾರ್ಯಕ್ರಮದಿಂದ ನಮ್ಮ ಆರ್ಥಿಕತೆ ನಿಶ್ಚಿತವಾಗಿ ಬೆಳವಣಿಗೆ ಕಾಣುತ್ತಿದೆ. ಸಾರಿಗೆ, ಹೋಟೆಲ್, ಆಹಾರ ಸೇರಿದಂತೆ ಇತರ ವಲಯಗಳ ಮೇಲೆ ಲಾಭದಾಯಕ ಪರಿಣಾಮ ಬೀರುತ್ತಿದೆ. ಇದರೊಂದಿಗಿನ ಧಾರ್ಮಿಕ ಪ್ರವಾಸವೂ ವಿಶಾಲ ವ್ಯಾಪ್ತಿಯಲ್ಲಿದ್ದು, ರಾಜ್ಯ ತೆರಿಗೆ ಮತ್ತು ಶುಲ್ಕ ಸೇರಿದಂತೆ ಇತರ ಮೂಲಗಳಿಂದ 3 ಬಿಲಿಯನ್ ಡಾಲರ್ ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಭಾರತದ ಆರ್ಥಿಕತೆಯಲ್ಲಿ ಕುಂಭಮೇಳ ಅತಿ ದೊಡ್ಡ ಚಾಲಕನಾಗಿದ್ದು, ಮನೆಮಾತಾಗಿದ್ದ ಅನೇಕ ಬ್ರಾಂಡ್‌ಗಳು ಇಲ್ಲಿ ಅವಕಾಶ ಪಡೆದು, ತಮ್ಮ ಅಂಗಡಿಗಳನ್ನು ತೆರೆಯುತ್ತಿವೆ. ನದಿ ಪಕ್ಕದಲ್ಲೇ ಟೆಂಟ್ ಹಾಕಲಾಗಿದ್ದು, ಆಹಾರ, ಬಟ್ಟೆಯಿಂದ ಹಿಡಿದು ಪ್ರಾರ್ಥನಾ ಸಾಮಗ್ರಿ, ಹೂವು ಸೇರಿದಂತೆ ಹಬ್ಬದ ಸ್ಮರಣಿಕೆವರೆಗೆ ವಸ್ತುಗಳು ಮಾರಾಟವಾಗುತ್ತಿವೆ.

ಇದೊಂದು ಅದ್ಭುತ 7 ಮಿಲಿಯನ್ ಜನರು ಭಾಗಿಯಾಗುವ ಬ್ರೆಜಿಲ್‌ನ ರಿಯೋ ಹಬ್ಬ, ಎರಡು ಮಿಲಿಯನ್ ಜನರು ಭಾಗಿಯಾಗುವ ಸೌದಿ ಅರೇಬಿಯಾದ ಮುಸ್ಲಿಂ ಹಚ್ ನಂತಹ ಜಾಗತಿಕ ಹಬ್ಬಗಳನ್ನು ಕುಂಭ ಮೇಳಗಳನ್ನೂ ಸಣ್ಣದಾಗಿ ಮಾಡಿದೆ ಎಂದು ಆದಿತ್ಯನಾಥ್ ಕಚೇರಿಯ ಸಂಜೀವ್ ಸಿಂಗ್ ತಿಳಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಹೋಟೆಲ್ ಮಾಲೀಕ ದೀಪಕ್ ಕುಮಾರ್ ಮೆಹೋತ್ರಾ ಅವರು, ನನ್ನ ಎರಡು ಹೋಟೆಲ್‌ಗಳು ಸಂಪೂರ್ಣವಾಗಿ ಬುಕ್ ಆಗಿದ್ದು, ಭಾರಿ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. ನಗರದಲ್ಲಿ ಎಲ್ಲರೂ ಉತ್ತಮ ವ್ಯಾಪಾರ ಮಾಡುತ್ತಿದ್ದಾರೆ.

ರೂಂಗಳು ಲಭ್ಯವಿದ್ದರೆ, ಅದರ ದರಗಳು 10ರಷ್ಟು ಏರಿಕೆ ಕಂಡಿದ್ದು, ಟಾಪ್ ಹೋಟೆಲ್‌ಗಳ ಒಂದು ರಾತ್ರಿಗೆ 900 ರಿಂದ 1200 ಡಾಲರ್ ದರ ನಿಗದಿ ಮಾಡುತ್ತಿವೆ. ಯಾತ್ರಿಕರ ಬೇಡಿಕೆ ಪೂರೈಸುವುದೇ ಸವಾಲಾಗಿದೆ. ಬಾಣಸಿಗರು, ಚಾಲಕರು, ಎಲೆಕ್ನಿಷಿಯನ್ಗಳು ಅತಿ ಹೆಚ್ಚು ಬೇಡಿಕೆ ಪಡೆದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಯಾಗರಾಜ್‌ನಿಂದ 50 ಮೈಲಿ ದೂರದಲ್ಲಿನ ಸಣ್ಣ ಪ್ರದೇಶಗಳು ಇದೀಗ ಬ್ಯುಸಿಯಾಗಿವೆ. ಜನರು ಅಲ್ಲಿಯು ಕೂಡ ವಾಸ್ತವ್ಯ ಹೂಡುತ್ತಿದ್ದಾರೆ. ಇದು ಪ್ರಯಾಗ್ತಿರಾಜ್ ಮಾತ್ರವಲ್ಲದೇ ಹಿಂದೂ ಧಾರ್ಮಿಕ ಕ್ಷೇತ್ರಗಳಾದ ಆಯೋಧ್ಯಾ ಮತ್ತು ವಾರಾಣಸಿ ಮೇಲೂ ಭಾರಿ ಪರಿಣಾಮ ಬೀರುತ್ತಿದೆ. ಈ ರೀತಿಯ ಬೃಹತ್ ? ಕಾರ್ಯಕ್ರಮವೂ ಹೊಸ ಬೆಳವಣಿಗೆ ಮತ್ತು ಹೊಸ ಅವಕಾಶಗಳ ಸೃಷ್ಟಿಗೆ ಕಾರಣವಾಗುತ್ತಿದೆ ಎಂದುಟ್ರಾವೆಲ್ ಏಜೆಂಟ್ ಶಹಿದ್ ಬೇಗ್ ( 62 )ರೊಮಿ ಹೇಳುತ್ತಾರೆ.

RELATED ARTICLES

Latest News