ಮುಂಬೈ, ಆ.1 – ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಶೂಟರ್ ಸ್ವಪ್ನಿಲ್ ಕುಸಾಲೆ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ 1 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ.
ಕುಸಾಲೆ ಅವರು 50 ಮೀಟರ್ ರೈಫಲ್ ಪೈನಲ್‌ನಲ್ಲಿ 3 ಸ್ಥಾನ ಪಡೆದು ಕಂಚಿನ ಪದಕ ಗೆದ್ದರು ಇದ್ದು ಈ ವಿಭಾಗದಲ್ಲಿ ಮೊಟ್ಟಮೊದಲ ಒಲಿಂಪಿಕ್ ಪದಕವಾಗಿದೆ ಎಂದು ಅಭಿನಂಧಿಸಿದ್ದಾರೆ.
ಕುಸಾಲೆ ಅವರ ತಂದೆ ಮತ್ತು ತರಬೇತುದಾರರೊಂದಿಗೆ ವೀಡಿಯೊ ಕರೆ ಮೂಲಕ ಶುಭ ಹಾರೈಸಿದ್ದಾರೆ.ಈ ಸಾಧನೆಗಾಗಿ ಕುಸಲೆಗೆ ಮಹಾರಾಷ್ಟ್ರ ಸರ್ಕಾರ 1 ಕೋಟಿ ರೂಪಾಯಿ ಬಹುಮಾನ ಘೋಷಿಸುತ್ತಿದ್ದು, ಅವರು ಒಲಿಂಪಿಕ್ಸ್ ನಿಂದ ಆಗಮಿಸಿದ ನಂತರ ಅವರನ್ನು ಸನ್ಮಾನಿಸಲಾಗುವುದು ಎಂದು ಸಿಎಂ ಹೇಳಿದರು.
ಮಹಾರಾಷ್ಟ್ರದ ಕೊಲ್ಹಾಪುರದ ಕುಸಲೆ ಅವರು ಕ್ರೀಡಾ ಲೋಕದಲ್ಲಿ ಸಾಧನೆ ಮಾಡುವ ಮೂಲಕ ದೇಶಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ ಎಂದು ಸಿಎಂ ಹೇಳಿದ್ದರು.
ಸ್ವಪ್ನಿಲ್ ಕುಸಾಲೆ ಅವರು 2015 ರಲ್ಲಿ ಸೆಂಟ್ರಲ್ ರೈಲ್ವೆಯ ಪುಣೆ ವಿಭಾಗದಲ್ಲಿ ವಾಣಿಜ್ಯ /ಟಿಕೆಟ್ ಕ್ಲರ್ಕ್ ಆಗಿ ಭಾರತೀಯ ರೈಲ್ವೆಗೆ ಸೇರಿ ಸೇವೆ ಸಲ್ಲಿಸುತ್ತಿದ್ದಾರೆ. ಓಲಂಪಿಕ್‌ನಲ್ಲಿ ಅವರ ಸಾಧನೆಯ ಬಗ್ಗೆ ಅಪಾರವಾಗಿ ಹೆಮ್ಮೆಪಡುತ್ತೇವೆ ಮತ್ತು ಐತಿಹಾಸಿಕ ಮೈಲಿಗಲ್ಲಿಗೆ ಅವರನ್ನು ಅಭಿನಂದಿಸುತ್ತದೆ. ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವು ಭಾರತೀಯ ರೈಲ್ವೆ ಮತ್ತು ರಾಷ್ಟ್ರಕ್ಕೆ ದೊಡ್ಡ ಗೌರವವನ್ನು ತಂದಿದೆ ಎಂದು ಪ್ರಕಟಣೆ ತಿಳಿಸಲಾಗಿದೆ.
ಕಳೆದ 2023ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸೌನಲ್ಲಿ, 2022ರಲ್ಲಿ ಬಾಕುದಲ್ಲಿ ನಡೆದ ವಿಶ್ವಕಪ್‌ನಲ್ಲಿ ಮತ್ತು 2021ರಲ್ಲಿ ನವದೆಹಲಿಯಲ್ಲಿ ನಡೆದ ವಿಶ್ವಕಪ್‌ನಲ್ಲಿ ಕುಸಾಲೆ ಚಿನ್ನದ ಪದಕಗಳನ್ನು ಗೆದ್ದಿದ್ದರು.