Sunday, September 21, 2025
Homeರಾಷ್ಟ್ರೀಯ | Nationalಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಎಕ್ಸ್ ಖಾತೆ ಹ್ಯಾಕ್

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಎಕ್ಸ್ ಖಾತೆ ಹ್ಯಾಕ್

Maharashtra Dy CM Eknath Shinde's 'X' account hacked

ಮುಂಬೈ, ಸೆ.21-ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಎಕ್ಸ್ ಖಾತೆಯನ್ನು ಹ್ಯಾಕ್ ಮಾಡಿರುವುದು ಕಂಡುಬಂದಿದೆ.

ಹ್ಯಾಕರ್‌ಗಳು ಪಾಕಿಸ್ತಾನ ಮತ್ತು ಟರ್ಕಿಯ ಧ್ವಜಗಳ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಭಾರತ ಮತ್ತು ಪಾಕಿಸ್ತಾನ ಟಿ-20 ಏಷ್ಯಾ ಕಪ್‌ನಲ್ಲಿ ಎರಡನೇ ಭಾರಿಗೆ ಮುಕಾಮುಖಿಯಾಗುತ್ತಿರುವ ಹಿನ್ನಲೆಯಲ್ಲಿ ಇಂದು ಹ್ಯಾಕರ್‌ಗಳು ಎರಡು ಇಸ್ಲಾಮಿಕ್ ದೇಶಗಳ ಛಾಯಾಚಿತ್ರಗಳೊಂದಿಗೆ ಚಿತ್ರಗಳನ್ನು ಶಿಂಧೆ ಅವರ ಖಾತೆಯಿಂದ ನೇರ ಪ್ರಸಾರ ಮಾಡಿದರು.

- Advertisement -

ನಾವು ತಕ್ಷಣ ಸೈಬ‌ರ್ ಅಪರಾಧ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಇನ್ನು ಉಪಮುಖ್ಯಮಂತ್ರಿಗಳ ಖಾತೆಯ ಉಸ್ತುವಾರಿ ಹೊಂದಿರುವ ನಮ್ಮ ತಂಡವು ನಂತರ ಖಾತೆಯನ್ನು ಮರುಪಡೆಯಲಾಗಿದೆ ಎಂದು ಅಧಿಕಾರಿ ಹೇಳಿದರು.ಹ್ಯಾಕರ್‌ಗಳ ಹಿಡಿತ ತಪ್ಪಿಸಿ ಡಿಸಿಎಂ ಎಕ್ಸ್ ಖಾತೆ ಮರು ಬಳಕೆಗೆ ಸುಮಾರು 30 ರಿಂದ 45 ನಿಮಿಷಗಳನ್ನು ತೆಗೆದುಕೊಂಡಿತು ಎಂದು ಅಧಿಕಾರಿ ಹೇಳಿದರು.

RELATED ARTICLES

Latest News