Friday, July 4, 2025
Homeರಾಷ್ಟ್ರೀಯ | Nationalಮುಂಬೈನಲ್ಲಿ ಕಬೂತ‌ರ್ ಖಾನಗಳನ್ನು ತಕ್ಷಣವೇ ಮುಚ್ಚುವಂತೆ ಆದೇಶ

ಮುಂಬೈನಲ್ಲಿ ಕಬೂತ‌ರ್ ಖಾನಗಳನ್ನು ತಕ್ಷಣವೇ ಮುಚ್ಚುವಂತೆ ಆದೇಶ

Maharashtra govt orders Mumbai's civic body to immediately shut down 'Kabootar Khanas'

ಮುಂಬೈ,ಜು.4- ನಗರದಲ್ಲರುವ ಕಬೂತರ್ ಖಾನ(ಪಾರಿವಾಳಗಳಿಗೆ ಆಹಾರ ನೀಡುವ ಸ್ಥಳಗಳನ್ನು ತಕ್ಷಣವೇ ಮುಚ್ಚುವಂತೆ ಮಹಾರಾಷ್ಟ್ರ ಸರ್ಕಾರವು ಬೃಹದ್ಭುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ ಆದೇಶಿಸಿದೆ.

ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಶಿವಸೇನಾ ನಾಯಕಿ ಮತ್ತು ನಾಮನಿರ್ದೇಶಿತ ಎಂಎಲ್‌ಸಿ ಮನೀಷಾ ಕಾಯಂಡೆ, ಈ ಕಬೂತರ್ ಖಾನಗಳು ಸುತ್ತಮುತ್ತಲಿನ ಜನರಿಗೆ ಅಪಾಯವನ್ನುಂಟುಮಾಡುತ್ತವೆ, ಅವುಗಳ ತ್ಯಾಜ್ಯ ಮತ್ತು ಗರಿಗಳಿಂದ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತವೆ ಎಂದು ಹೇಳಿದರು.

ಪರಿಷತ್ತಿನ ಮತ್ತೊಬ್ಬ ನಾಮನಿರ್ದೇಶಿತ ಸದಸ್ಯೆ ಬಿಜೆಪಿ ನಾಯಕಿ ಚಿತ್ರಾ ವಾಫ್, ಪಾರಿವಾಳ ಮಲದಿಂದ ಉಂಟಾಗುವ ಉಸಿರಾಟದ ಕಾಯಿಲೆಗಳಿಂದಾಗಿ ತನ್ನ ಚಿಕ್ಕಮ್ಮನನ್ನು ಕಳೆದುಕೊಂಡಿದ್ದೇನೆ. ಎಂದು ಹೇಳಿದರು.

ಮೌಖಿಕ ಪ್ರತಿಕ್ರಿಯೆಯಲ್ಲಿ ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಉತ್ತರಿಸುತ್ತಾ, ನಗರದಲ್ಲಿ 51 ಕಡೆ ಕಬೂತರ್ ಖಾನಗಳು ಇವೆ ಎಂದು ಹೇಳಿದರು.
ಒಂದು ತಿಂಗಳೊಳಗೆ ಇದರ ಬಗ್ಗೆ ಕ್ರಮ ಕೈಗೊಳ್ಳಲು ಅವಕಾಶ ನೀಡಿ ಮತ್ತು ಕಬೂತರ್ ಖಾನಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸಲು ಬಿಎಂಸಿಗೆ ನಿರ್ದೇಶನಗಳನ್ನು
ನೀಡಲಾಗುವುದು ಎಂದು ಅವರು ಹೇಳಿದರು.

ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ಸಮಂತ್ ಹೇಳಿದರು.ಗಿರ್ಗಾಮ್ ಚೌಪಟ್ಟಿಯಲ್ಲಿ ಕೆಲವು ಪಾರಿವಾಳಗಳು ಪಿಜ್ಜಾ ಮತ್ತು ಬರ್ಗಗ್ರಗಳನ್ನು ಸಹ ತಿನ್ನುತ್ತವೆ ಎಂದು ಬಿಎಂಸಿ ಕಂಡುಹಿಡಿದಿದೆ ಎಂದು ಅವರು ಹೇಳಿದರು.

ದಾದರ್‌ನ ಪ್ರಸಿದ್ಧ ಕಬೂತರ್‌ ಖಾನನನ್ನು ಎರಡು ದಿನಗಳ ಕಾಲ ಮುಚ್ಚಲಾಗಿತ್ತು. ಆದರೆ ಜನರು ಪಕ್ಷಿಗಳಿಗೆ ಆಹಾರವನ್ನು ನೀಡುತ್ತಲೇ ಇದ್ದ ಹಿನ್ನಲೆಯಲ್ಲಿ ಅದು ಮತ್ತೆ ಪ್ರಾರಂಭವಾಯಿತು.ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರವಾಗಿ, ಶಿಂಧೆ, ಸಾಂತಕ್ರೂಜ್ ಪೂರ್ವ ಮತ್ತು ದೌಲತ್ ನಗರ ಮತ್ತು ಸಾಂತಕ್ರೂಜ್ ಪಶ್ಚಿಮದಲ್ಲಿ ಆನಧಿಕೃತ ಕಬೂತರ್ ಕಾನಗಳನ್ನು ಮುಚ್ಚಲಾಗಿದೆ ಎಂದು ಹೇಳಿದರು.ಬಿಎಂಸಿ ಈ ಸ್ಥಳಗಳಲ್ಲಿ ಸಂಚಾರ ದ್ವೀಪ ಮತ್ತು ಮಿಯಾವಾಕಿ ಉದ್ಯಾನಗಳನ್ನು ರಚಿಸಿದೆ ಎಂದು ಅವರು ಹೇಳಿದರು.

RELATED ARTICLES

Latest News