ಮಹಾರಾಷ್ಟ್ರ :
ಒಟ್ಟು ಕ್ಷೇತ್ರಗಳು : 288
ಎನ್‌ಡಿಎ : 210
ಮಹಾ ವಿಕಾಸ್ ಅಘಾಡಿ : 64
ಇತರೆ : 13
ಜಾರ್ಖಂಡ್ :
ಒಟ್ಟು ಕ್ಷೇತ್ರಗಳು : 81
ಎನ್‌ಡಿಎ : 46
ಇಂಡಿ ಒಕ್ಕೂಟ : 32
ಇತರೆ : 3
ನವದೆಹಲಿ,ನ.23 : ಎನ್ಡಿಎ ಹಾಗೂ ಇಂಡಿ ಮೈತ್ರಿಕೂಟಗಳ ನಡುವಿನ ಜಿದ್ದಾಜಿದ್ದಿ ಹೋರಾಟಕ್ಕೆ ಸಾಕ್ಷಿಯಾಗಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಇಂದು ನಡೆಯಲಿದೆ. ಮಹಾರಾಷ್ಟ್ರದ 288, ಜಾರ್ಖಂಡ್ನ 80 ಜೊತೆಗೆ ಉತ್ತರಪ್ರದೇಶ 8, ಉತ್ತರಖಂಡ 1, ಪಂಜಾಬ್ 4, ರಾಜಸ್ಥಾನ 7, ಅಸ್ಸಾಂ 5, ಸಿಕ್ಕಿಂ 2, ಮಧ್ಯಪ್ರದೇಶ 2, ಗುಜರಾತ್ 1, ಕರ್ನಾಟಕ 3 ಹಾಗೂ ಕೇರಳದ ವಯನಾಡು ಮತ್ತು ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶವೂ ಕೂಡ ಇಂದೇ ಪ್ರಕಟವಾಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಏಕಕಾಲಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಬಹುತೇಕ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.
ಯೋಗಿಗೆ ಸವಾಲು :
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸವಾಲಾಗಿರುವ 8 ವಿಧಾನಸಭಾ ಕ್ಷೇತ್ರಗಳ ಫಲಿತಾಂಶವು ಇಂದು ಪ್ರಕಟವಾಗಲಿದೆ.
ಪ್ರಿಯಾಂಕ ವಾದ್ರ ಭವಿಷ್ಯ ನಿರ್ಧಾರ :
ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವಯನಾಡು ಮತ್ತು ಮಹಾರಾಷ್ಟ್ರದ ನಾಂದೇಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಬಹಿರಂಗವಾಗಲಿದೆ. ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬ ಮೂರನೇ ಕುಡಿ ಪ್ರಿಯಾಂಕ ವಾದ್ರ ವಯನಾಡಿನಿಂದ ಸ್ಪರ್ಧಿಸಿದ್ದು, ಅವರ ರಾಜಕೀಯ ಭವಿಷ್ಯ ಏನಾಗಲಿದೆ ಎಂಬುದು ಫಲಿತಾಂಶದಿಂದ ಗೊತ್ತಾಗಲಿದೆ.