Thursday, November 21, 2024
Homeರಾಷ್ಟ್ರೀಯ | Nationalಮುಂದಿನ ವಾರ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ..?

ಮುಂದಿನ ವಾರ ಮಹಾರಾಷ್ಟ್ರ ಮತ್ತು ಜಾರ್ಖಂಡ್ ಚುನಾವಣೆ ದಿನಾಂಕ ಘೋಷಣೆ ಸಾಧ್ಯತೆ..?

Maharashtra, Jharkhand election dates likely to be announced next week

ನವದೆಹಲಿ,ಅ.14- ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯದಿನಾಂಕವನ್ನು ಮುಂದಿನ ವಾರ ಪ್ರಕಟಿಸುವ ಸಾಧ್ಯತೆಯಿದ್ದು, ನವೆಂಬರ್ 2ನೇ ಅಥವಾ ಮೂರನೇ ವಾರದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ಮುಂದಾಗಿದೆ. ಇವುಗಳ ಜೊತೆಗೆ ವಿವಿಧ ರಾಜ್ಯಗಳ 45 ವಿಧಾನಸಭೆ ಮತ್ತು ಎರಡು ಸಂಸತ್ ಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿದೆ.

ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ರಾಜೀನಾಮೆ ನೀಡಿದ ಕೇರಳದ ವಯನಾಡು ಕ್ಷೇತ್ರವೂ ಇದರಲ್ಲಿ ಸೇರಿದೆ.ಉತ್ತರ ಪ್ರದೇಶದ ಅಮೇಠಿಯಲ್ಲಿ ಗೆಲುವು ಸಾಧಿಸಿದ್ದ ರಾಹುಲ್ ವಯನಾಡ್ ಕ್ಷೇತ್ರವನ್ನು ಬಿಟ್ಟುಕೊಟ್ಟ ನಂತರ ಆ ಸ್ಥಾನ ತೆರವಾಗಿತ್ತು. ಇತ್ತೀಚೆಗಷ್ಟೇ ಹರಿಯಾಣ ಮತ್ತು ಜಮ್ಮುಕಾಶ್ಮೀರ ವಿಧಾನಸಭೆ ಚುನಾವಣೆ ಮುಗಿದಿದೆ.

370ನೇ ವಿಧಿ ರದ್ದುಗೊಳಿಸಿದ ನಂತರದ ಮೊದಲ ಚುನಾವಣೆ ಇದಾಗಿತ್ತು. ಭಾರತ ಚುನಾವಣಾ ಆಯೋಗ ಜಮ್ಮುಕಾಶ್ಮೀರದಲ್ಲಿ ಶಾಂತಿಯುತ ಚುನಾವಣೆ ಮುಗಿಸಿದೆ. ಇದೀಗ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಆಯೋಗ ಸಜ್ಜಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ಈ ಎರಡು ರಾಜ್ಯಗಳ ಚುನಾವಣಾ ಅಧಿ ಸೂಚನೆಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡುವ ಸಾಧ್ಯತೆ ಇದೆ. ನವೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ಮತದಾನ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅಕ್ಟೋಬರ್ 29 ಮತ್ತು ನವೆಂಬರ್ 3ರ ನಡುವೆ ದೀಪಾವಳಿ ಮತ್ತು ಛಾತ್ ಹಬ್ಬಗಳ ಕಾರಣ ನವೆಂಬರ್ 2ನೇ ಅಥವಾ 3ನೇ ವಾರದಲ್ಲಿ ಚುನಾವಣೆ ನಡೆಸಲು ಯೋಜಿಸುತ್ತಿದೆ.

ಮಹಾರಾಷ್ಟ್ರದಲ್ಲಿ ನೆಲೆಸಿರುವ ಬಿಹಾರಿ ಮತದಾರರು ಈ ಹಬ್ಬಗಳ ಸಂದರ್ಭದಲ್ಲಿ ತಮ್ಮ ಊರುಗಳಿಗೆ ತೆರಳುವುದರಿಂದ ನವೆಂಬರ್ ಮೊದಲ ವಾರದ ನಂತರ ಚುನಾವಣೆ ನಡೆಸಲು ನಿರ್ಧರಿಸಿದೆ.

RELATED ARTICLES

Latest News