ಭಂಡಾರ,ಫೆ.5- ಡ್ರೈ ಕ್ಲೀನಿಂಗ್ ಶಾಪ್‌ನಲ್ಲಿ ಬಚ್ಚಿಟ್ಟಿದ ಐದು ಕೋಟಿ ರೂ.ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಖಾಸಗಿ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿರುವ ಆಕ್ಸಿಸ್ ಬ್ಯಾಂಕ್‌ಗೆ ಬಂದ ಕೆಲ ವ್ಯಕ್ತಿಗಳು ಬ್ಯಾಂಕ್‌ನ ಮ್ಯಾನೇಜರ್‌ಗೆ ಐದು ಕೋಟಿ ನಗದು ನೀಡಿದರೆ ನಂತರ ಆರು ಕೋಟಿ ರೂ. ಹಿಂತಿರುಗಿಸುವುದಾಗಿ ನಂಬಿಸಿ ಐದು ಕೋಟಿ ಹಣ ಪಡೆದು ಪರಾರಿಯಾಗಿದ್ದರು ಎಂದು ಎಸ್‌ಪಿ ನೂರುಲ್ಲಾ ಹಸನ್ ತಿಳಿಸಿದ್ದಾರೆ.
ಈ ಕುರಿತಂತೆ ಬಂದ ಮಾಹಿತಿ ಮೇರೆಗೆ ಕಾರ್ಯಚರಣೆ ನಡೆಸಿದ ಸ್ಥಳೀಯ ಪೊಲೀಸರು ಹಾಗೂ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ತುಮ್ಸಾರ್ ಪ್ರದೇಶದ ಇಂದಿರಾನಗರದಲ್ಲಿರುವ ಡ್ರೈ ಕ್ಲಿನರ್ ಶಾಪ್‌ನಲ್ಲಿ ಬಚ್ಚಿಟ್ಟಿದ ಐದು ಕೋಟಿ ರೂ.ನಗದು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಶಾಪ್‌ನಲ್ಲಿ ಐದು ಕೋಟಿ ರೂ.ಗಳನ್ನು ಪೆಟ್ಟಿಗೆಯೊಂದರಲ್ಲಿ ಹಾಕಿ ಬಚ್ಚಿಡಲಾಗಿತ್ತು. ಹಣವನ್ನು ವಶಪಡಿಸಿಕೊಂಡಿರುವ ಪೊಲೀಸರು ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.