ಮುಂಬೈ, ನ.19 – ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯ ನಂತರ ಮುಂಬೈನಲ್ಲಿ ಮತದಾರರ ಸಂಖ್ಯೆ 98.95 ಲಕ್ಷದಿಂದ ಒಂದು ಕೋಟಿ ಗಡಿ ದಾಟಿದೆ ಎಂದು ಚುನಾವಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಮುಖ್ಯಸ್ಥ ಭೂಷಣ್ ಗಾಗ್ರಾನಿ, ವಿಧಾನಸಭಾ ಚುನಾವಣೆಗೆ ಮುಂಬೈನಲ್ಲಿ 1,02,29,708 ಮತದಾರರಿದ್ದು, ದ್ವೀಪ ನಗರದಲ್ಲಿ 25,43,610 ಮತ್ತು ಉಪನಗರ ಜಿಲ್ಲೆಯಲ್ಲಿ 76,86,098 ಇದ್ದಾರೆ.ಇದರಲ್ಲಿ 54,67,361 ಪುರುಷರು, 47,61,265 ಮಹಿಳೆಯರು ಮತ್ತು 1,082 ತೃತೀಯ ಲಿಂಗಿಗಳು ಎಂದು ತಿಳಿಸಿದರು ನಾಳೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಇವರು ಮತದಾನದ ಹಕ್ಕು ಹೊಂದಿದ್ದಾರೆ.
ವಿಶೇಷವೆಂದರೆ ಇವರಲ್ಲಿ ಒಟ್ಟು 1,46,859 ಮತದಾರರು 85 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 23,928 ವಿಕಲಚೇತನರು ಹಾಗು 2,288 ಸಾಗರೋತ್ತರ ಮತದಾರರು ಮತ್ತು 1,475 ಸೇವಾ ಮತದಾರರು ಇದ್ದಾರೆ ಎಂದು ಮುಂಬೈ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಗಗ್ರಾನಿ ಹೇಳಿದರು.
ಚುನಾವಣಾ ಅಧಿಕಾರಿಗಳ ಪ್ರಕಾರ ಹೊಸದಾಗಿ ಒಟ್ಟು 2.91 ಲಕ್ಷ ಮತದಾರು ಸೇರ್ಪಡೆಯಾಗಿದ್ದಾರೆ.ಮುಂಬೈ ನಗರ ವ್ಯಾಪ್ತಿಯಲ್ಲಿ 36 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ ಇದರಲ್ಲಿ 10 ದ್ವೀಪ ನಗರದಲ್ಲಿ ಮತ್ತು 26 ಉಪನಗರ ಜಿಲ್ಲೆಯಲಿದೆ. ಒಟ್ಟು 410 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ನಾಳಿನ ಚುನಾವಣೆಗೆ ಒಟ್ಟು 10,117 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಭದ್ರತೆಗಾಗಿ ಮುಂಬೈನಲ್ಲಿ 25,696 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಒಟ್ಟು 10,117 ಮತಗಟ್ಟೆಗಳ ಪೈಕಿ 76 ಅತಿ ಸೂಕ್ಷ್ಮ ಮತಗಟ್ಟೆಗಳಿವೆ.ಚುನಾವಣಾ ಅಧಿಕಾರಿಗಳ ಪ್ರಕಾರ, ಈ ಬೂತ್‌ಗಳು ಹಿಂದಿನ ಚುನಾವಣೆಗಳಲ್ಲಿ ಸರಾಸರಿ ಮತದಾನದ ಶೇಕಡಾ 10 ಕ್ಕಿಂತ ಕಡಿಮೆ ಮತದಾನವನ್ನು ದಾಖಲಿಸಿವೆ.
ಮುಂಬೈನಲ್ಲಿ, 84 ಮಾದರಿ ಮತಗಟ್ಟೆಗಳಿದ್ದು, ಅದರಲ್ಲಿ ತಲಾ 38 ಮಹಿಳಾ ಮತ್ತು ಯುವ ಚುನಾವಣಾ ಸಿಬ್ಬಂದಿ ನಿರ್ವಹಿಸುತ್ತಾರೆ. ಎಂಟು ದಿವಿಯಾಂಗ ಸಿಬ್ಬಂದಿ ನಿರ್ವಹಿಸುತ್ತಾರೆ ಎಂದು ತಿಳಿಸಿದರು.ಮುಂಬೈ ನಗರದಲ್ಲಿ ಸಿ-ವಿಜಿಲ್ ಆ್ಯಪ್ ಮೂಲಕ ಸಲ್ಲಿಸಲಾದ 615 ದೂರುಗಳಲ್ಲಿ 564 ದೂರುಗಳ ಮೇಲೆ ಇಸಿ ಕ್ರಮ ಕೈಗೊಂಡಿದೆ ಮುಂಬೈ ನಗರ ಮತ್ತು ಉಪನಗರ ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಾಗಿ ತಲಾ ಎಂಟು ಪ್ರಕರಣಗಳು ದಾಖಲಾಗಿವೆ.
ನಾವು ದ್ವೀಪ ನಗರದಲ್ಲಿ 33 ಕೋಟಿ ರೂಪಾಯಿ ಮತ್ತು ಉಪನಗರಗಳಲ್ಲಿ 12.60 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದೇವೆ. ನಗರ ಮತ್ತು ಉಪನಗರ ಜಿಲ್ಲೆಯಲ್ಲಿ ವಶಪಡಿಸಿಕೊಂಡ ಅಮೂಲ್ಯವಾದ ಲೋಹಗಳ ಮೌಲ್ಯ ಕ್ರಮವಾಗಿ 6.97 ಕೋಟಿ ಮತ್ತು 238.67 ಕೋಟಿ ರೂಪಾಯಿಗಳಷ್ಟಿದೆ. ಇದರ ಜೊತೆಗೆ ಉಡುಗೊರೆ ನಗರ ಮತ್ತು ಉಪನಗರಗಳಿಂದ ಕ್ರಮವಾಗಿ 2.62 ಕೋಟಿ ಮತ್ತು 3.21 ಕೋಟಿ, ಎಂದು ಚುನಾವಣಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಗರದಲ್ಲಿ 12.89 ಲಕ್ಷ ಮೌಲ್ಯದ 2,800 ಲೀಟರ್ ಮದ್ಯ ಹಾಗೂ ಉಪನಗರ ಜಿಲ್ಲೆಯಲ್ಲಿ 1.10 ಕೋಟಿ ಮೌಲ್ಯದ 39,385 ಲೀಟರ್ ಮದ್ಯವನ್ನು ಚುನಾವಣಾ ದಳ ವಶಪಡಿಸಿಕೊಂಡಿದೆ. ಅಲ್ಲದೆ, ನಗರದಲ್ಲಿ 4.17 ಕೋಟಿ ರೂಪಾಯಿ ಮತ್ತು ಉಪನಗರ ಜಿಲ್ಲೆಯಿಂದ 44.79 ಕೋಟಿ ರೂಪಾಯಿಗಳ ಡ್ರಗ್‌್ಸವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.