Friday, August 29, 2025
Homeರಾಜ್ಯವಿಚಾರಣೆಗೆ ಹಾಜರಾದ ಮಹೇಶ್‌ ಶೆಟ್ಟಿ ತಿಮರೋಡಿ

ವಿಚಾರಣೆಗೆ ಹಾಜರಾದ ಮಹೇಶ್‌ ಶೆಟ್ಟಿ ತಿಮರೋಡಿ

Mahesh Shetty Timarodi appeared for questioning

ಬೆಳ್ತಂಗಡಿ,ಆ.29– ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ಸಂಬಂಧ ಬೆಳ್ತಂಗಡಿ ಪೊಲೀಸ್‌‍ ಠಾಣೆಗೆ ಹಾಜರಾದ ಮಹೇಶ್‌ ಶೆಟ್ಟಿ ತಿಮರೋಡಿ ಅವರನ್ನು ವಿಚಾರಣೆ ಗೊಳಪಡಿಸಲಾಯಿತು.
ಬಿಜೆಪಿ ಮುಖಂಡರಾದ ಬಿ.ಎಲ್‌.ಸಂತೋಷ್‌ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಯೂಟ್ಯೂಬ್‌ನಲ್ಲಿ ಬಿತ್ತರವಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಬ್ರಹಾವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆ.21 ರಂದು ಉಜಿರೆಯ ಮಹೇಶ್‌ ಶೆಟ್ಟಿ ನಿವಾಸಕ್ಕೆ ಬ್ರಹಾವರ ಠಾಣೆ ಪೊಲೀಸರು ಅವರನ್ನು ಬಂಧಿಸಲು ಬಂದಿದ್ದಾಗ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಹಾಗಾಗಿ ಬೆಳ್ತಂಗಡಿ ಪೊಲೀಸ್‌‍ ಠಾಣೆಗೆ ಬ್ರಹಾವರ ಪೊಲೀಸರು ದೂರು ನೀಡಿದ್ದರು.ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಮಹೇಶ್‌ ಶೆಟ್ಟಿ 3ನೇ ಆರೋಪಿ. ಹಾಗಾಗಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌‍ ನೀಡಲಾಗಿತ್ತು.

ಇಂದು ಬೆಳಿಗ್ಗೆ ಮಹೇಶ್‌ ಶೆಟ್ಟಿ ಅವರು ಬೆಳ್ತಂಗಡಿ ಪೊಲೀಸ್‌‍ ಠಾಣೆಗೆ ಹಾಜರಾದಾಗ ಪೊಲೀಸರು ಅವರನ್ನು ವಿಚಾರಣೆಗೊಳಪಡಿಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.ಸಂತೋಷ್‌ ಅವರಿಗೆ ನಿಂದಿಸಿದ ಪ್ರಕರಣದಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ ಅವರನ್ನು ಬ್ರಹಾವರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ.

ಬುರುಡೆ ಪ್ರಕರಣದ ಚಿನ್ನಯ್ಯನಿಗೆ ಆಶ್ರಯ ನೀಡಿದ್ದ ತಿಮರೋಡಿ ಅವರ ಮನೆ ಮೇಲೆ ಇತ್ತೀಚೆಗೆ ಎಸ್‌‍ಐಟಿ ದಾಳಿ ಮಾಡಿ ಚಿನ್ನಯ್ಯ ತಂಗಿದ್ದ ಕೊಠಡಿಯನ್ನು ಇಂಚಿಂಚೂ ಪರಿಶೀಲನೆ ನಡೆಸಿ ಚಿನ್ನಯ್ಯನಿಗೆ ಸೇರಿದ ಬಟ್ಟೆಗಳು, ಆತ ಬಳಸುತ್ತಿದ್ದ ಮೊಬೈಲ್‌, ಅವರ ಮನೆಯಿಂದ ಹಾರ್ಡ್‌ಡಿಸ್ಕ್‌ ಹಾಗೂ ಇನ್ನಿತರ ವಸ್ತುಗಳನ್ನು ಎಸ್‌‍ಐಟಿ ವಶಪಡಿಸಿಕೊಂಡಿದೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಎಸ್‌‍ಐಟಿ ಮಹೇಶ್‌ ಶೆಟ್ಟಿ ತಿಮರೋಡಿ ಅವರಿಗೆ ನೋಟಿಸ್‌‍ ನೀಡಿತ್ತು. ಹಾಗಾಗಿ ಇಂದು ಬೆಳಿಗ್ಗೆ ಬೆಳ್ತಂಗಡಿ ಪೊಲೀಸ್‌‍ ಠಾಣೆಗೆ ತೆರಳಿ ವಿಚಾರಣೆ ಮುಗಿಸಿ ಮಧ್ಯಾಹ್ನ ಎಸ್‌‍ಐಟಿ ಮುಂದೆ ವಿಚಾರಣೆಗೆ ಅವರು ಹಾಜರಾಗಿದ್ದಾರೆ.

RELATED ARTICLES

Latest News