ಬೆಂಗಳೂರು, ಸೆ.24- ಹೋರಾಟಗಾರ ಮಹೇಶ್‌ಶೆಟ್ಟಿ ತಿಮರೋಡಿ ಅವರಿಗೆ ಬಂಧನ ಭೀತಿ ಎದುರಾಗಿದೆ. ಬೆಳ್ತಂಗಡಿ ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದ ಬೆನ್ನಲ್ಲೇ ತಿಮರೋಡಿ ಅವರು ನಾಪತ್ತೆಯಾಗಿದ್ದಾರೆ.ಹಾಗಾಗಿ ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಗೆ ಎಸ್‌ಐಟಿ ನೀಡಿರುವ ದೂರಿನನ್ವಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಎರಡು ಭಾರಿ ತಿಮರೋಡಿ ಅವರಿಗೆ ನೋಟೀಸ್ ನೀಡಿದ್ದರೂ ಇದುವರೆಗೂ ಹಾಜರಾಗಿಲ್ಲ.ಈ ನಡುವೆ ಪುತ್ತೂರು ಉಪವಿಭಾಗಾಧಿಕಾರಿ ಅವರು ತಿಮರೋಡಿ ಅವರ ಗಡೀಪಾರಿಗೆ ಆದೇಶಿಸಿದ್ದಾರೆ.
ಎಸ್‌ಐಟಿ ಪೊಲೀಸರು ಬುರುಡೆ ಚಿನ್ನಯ್ಯನನ್ನು ಬಂಧಿಸಿ ಆತನನ್ನು ವಿಚಾರಣೆ ನಡೆಸಿದಾಗ ತಿಮರೋಡಿ ಅವರ ಮನೆಯಲ್ಲಿ ಆಶ್ರಯ ನೀಡಿದ್ದಾಗಿ ಹೇಳಿದ್ದನು.ಹಾಗಾಗಿ ತಿಮರೋಡಿ ಮನೆ ಮೇಲೆ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಮಾರಾಕಾಸ್ತ್ರಗಳು, ಬಂದೂಕು ಪತ್ತೆಯಾಗಿತ್ತು. ಈ ಬಗ್ಗೆ ಎಸ್‌ಐಟಿ ಎಸ್‌ಪಿ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಸೌಜನ್ಯಪರ ಹೋರಾಟಗಾರ ತಿಮರೋಡಿ ಅವರ ಮೇಲೆ ಕಾನೂನುಗಳ ಉಲ್ಲಂಘನೆ, ಅಶಾಂತಿ ಸೃಷ್ಟಿ, ಸಮಾಜದಲ್ಲಿ ಅಸ್ಥಿರತೆ ಉಂಟು ಮಾಡುವ ಚಟುವಟಿಕೆಗಳು, ಅಕ್ರಮ ಶಸಾ್ತ್ರಸ್ತ್ರ ಹೊಂದಿರುವುದು ಸೇರಿದಂತೆ ಒಟ್ಟು 32 ಪ್ರಕರಣಗಳು ದಾಖಲಾಗಿವೆ. ಬುರುಡೆ ಗ್ಯಾಂಗ್‌ನಲ್ಲಿ ತಿಮರೋಡಿ ಗುರುತಿಸಿಕೊಂಡಿದ್ದಾರೆಂಬ ಆರೋಪ ಸಹ ಕೇಳಿಬಂದಿದೆ.