Wednesday, February 26, 2025
Homeರಾಷ್ಟ್ರೀಯ | Nationalಟ್ರಕ್‌ಗೆ ಕಾರು ಡಿಕ್ಕಿ : ಜೆಎಂಎಂ ಸಂಸದೆ ಮಹುವಾ ಮಜಿಗೆ ಗಾಯ

ಟ್ರಕ್‌ಗೆ ಕಾರು ಡಿಕ್ಕಿ : ಜೆಎಂಎಂ ಸಂಸದೆ ಮಹುವಾ ಮಜಿಗೆ ಗಾಯ

Mahua Maji accident: JMM MP injured while returning from Maha Kumbh after her car hit truck

ಲತೇಹರ್, ಫೆ.26- ಮಹಾಕುಂಭದಿಂದ ಹಿಂದಿರುಗುತ್ತಿದ್ದಾಗ ಇಂದು ಮುಂಜಾನೆ ಜಾರ್ಖಂಡ್‌ನ ಲತೇಹಾರ್‌ ಜಿಲ್ಲೆಯಲ್ಲಿ ರಸ್ತೆಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಜೆಎಂಎಂ ಸಂಸದೆ ಮಹುವಾ ಮಜಿ ಅವರು ಗಾಯಗೊಂಡಿದ್ದಾರೆ.

ರಾಜ್ಯ ಸಭಾ ಸದಸ್ಯೆಯಾಗಿರುವ ಮಜಿ ಅವರ ಎಡ ಮಣಿಕಟ್ಟಿನ ಮೂಳೆ ಮುರಿದಿದ್ದು, ರಾಂಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿನಲ್ಲಿದ್ದ ಅವರ ಕುಟುಂಬ ಸದಸ್ಯರಿಗೂ ಸಣ್ಣಪುಟ್ಟ ಗಾಯಗಳಾಗಿವೆ.ಬೆಳಗಿನ ಜಾವ 2.30ರ ಸುಮಾರಿಗೆ ಹೊಟ್ವಾಗ್ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಈ ಘಟನೆ ನಡೆದಿದೆ.

ಮಜಿಯನ್ನು ತಕ್ಷಣವೇ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆಗೆ ಪ್ರಥಮ ಚಿಕಿತ್ಸೆ ನೀಡಲಾಯಿತು ಮತ್ತು ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಗೆ ಕಳುಹಿಸಲಾಯಿತು ಎಂದು ಸದ‌ರ್ ಪೊಲೀಸ್ ಠಾಣೆಯ ಉಸ್ತುವಾರಿ ದುಲಾರ್ ಚೌಡೆ ಹೇಳಿದರು.
ಮಜಿ ಅವರು ತಮ್ಮ ಮಗ ಮತ್ತು ಸೊಸೆಯೊಂದಿಗೆ ಪ್ರಯಾಗ್‌ರಾಜ್‌ನಿಂದ ರಾಂಚಿಗೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದರು.

RELATED ARTICLES

Latest News