ಮಳ್ಳಾಪುರ, ಸೆ.17-ಇಲ್ಲಿನ ಮನೆಯೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಪತ್ತೆಮಾಡಿದ್ದಾರೆ.ಮನೆಯ ಮಾಲೀಕ ಉನ್ನಿಕಮದ್(65)ನನ್ನುಬಂಧಿಸಲಾಗಿದ್ದು ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಡವಣ್ಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗೌಪ್ಯ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದ ಪೊಲೀಸರು ಆರೋಪಿಯ ನಿವಾಸದಿಂದ 20 ಏರ್ ಗನ್‌ಗಳು, ಮೂರು ರೈಫಲ್‌ಗಳು, ಸುಮಾರು 200 ಗುಂಡುಗಳು ಮತ್ತು 40 ಪೆಲೆಟ್ ಬಾಕ್‌್ಸಗಳನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಲಾಗಿದ್ದು, ಆ ಶಸ್ತ್ರಾಸ್ತ್ರಗಳು ಮಾರಾಟಕ್ಕೆ ಅಥವಾ ವೈಯಕ್ತಿಕ ಬಳಕೆಗೆ ಉದ್ದೇಶಿಸಲಾಗಿದೆಯೇ ಮತ್ತು ಆರೋಪಿ ಬಂದೂಕುಗಳು ಮತ್ತು ಮದ್ದುಗುಂಡುಗಳನ್ನು ಎಲ್ಲಿಂದ ಖರೀದಿಸಿದ್ದಾನೆ ಎಂಬುದನ್ನು ಕಂಡುಹಿಡಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.