ಬೆಂಗಳೂರು,ಸೆ.20- ಶಾಸಕ ಮುನಿರತ್ನ ಪ್ರಕರಣ ಕುರಿತಂತೆ ಸಿಎಂ ಸಿದ್ದರಾಮಯ್ಯನವರು ಸುತ್ತಿ ಬಳಸಿ ಮಾತನಾಡುವ ಬದಲು ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸಿ ಅದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಪ್ರಕರಣದಲ್ಲಿ ಬಿಜೆಪಿಗೆ ಯಾವುದೇ ಮುಜುಗರ ಇಲ್ಲ. ನಮಗೆ ಸತ್ಯಸತ್ಯತೆ ಹೊರಬರಬೇಕು ಎಂಬುದು ಒತ್ತಾಯವಾಗಿದೆ. ಸಿಎಂ ಅವರು ಇದನ್ನು ಸುತ್ತಿಬಳಸಿ ಯಾರ್ಯಾರಿಗೊ ತಲೆ ಕಟ್ಟಲು ಮುಂದಾಗಿದ್ದಾರೆ. ಅವರಿಗೆ ನನ್ನ ಮನವಿ ಏನೆಂದರೆ ಎಸ್ಐಟಿಗೆ ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯ ಎಂದು ಕುಹುಕವಾಡಿದರು.
ಎಲುಬಿಲ್ಲದ ನಾಲಿಗೆ ಏನೇನೊ ಹೇಳಬಹುದು. ಇದು 2020ರಲ್ಲಿ ಘಟನೆ ನಡೆದಿದೆ ಎನ್ನುತ್ತಾರೆ. 2024ರಲ್ಲಿ ಏಕೆ ಹೊರಬಂದಿತು? ಲೋಕಸಭೆ ಚುನಾವಣೆ ಸೋಲು ಕೆಲವರಿಗೆ ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸೇಡಿನ ರಾಜಕಾರಣ ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಸಾಲು ಸಾಲು ಕೋಮುಗಲಭೆಗಳನ್ನು ಅವಲೋಕಿಸಿದರೆ ಇಲ್ಲೊಂದು ಚುನಾಯಿತ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆ ಇದೆಯೇ ಎಂಬ ಅನುಮಾನ ಜನತೆಗೆ ಮೂಡಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.ನಾಗಮಂಗಲದಲ್ಲಿ ಹಿಂದೂ ಯುವಕರು ಗಣೇಶ ವಿಸರ್ಜನೆ ಸಮಯದಲ್ಲಿ ಏಕಾಏಕಿ ದಾಳಿ ಮಾಡಿದ ಕೋಮಿನ ಜನರು ದೇಶದ್ರೋಹಿಗಳು , ಕತ್ತಿ, ತಲ್ವಾರ್ ತೆಗೆದುಕೊಂಡು ಪೆಟ್ರೊಲ್ ಬಾಂಬ್ ಎಸೆದಿದ್ದಾರೆ.ಹಿಂದು ಅಂಗಡಿಗಳ ಮೇಲೆ ಹಾರೆ ಹಾಕಿ ದಾಳಿ ಮಾಡಿ ಬೆಂಕಿ ಹಾಕಿದ್ದಾರೆ ಎಂದು ಉಲ್ಲೇಖಿಸಿದರು.
ಪೊಲೀಸರ ಕಣುಂದೆ ನಡೆದಿರುವ ದುರ್ಘಟನೆ ಇದು. ಘಟನೆ ನಡೆದ ಮಾರನೆಯ ದಿನ ನಾಗಮಂಗಲಕ್ಕೆ ಭೇಟಿ ನೀಡಿದ್ದೇವೆ. ಲ್ಲಿರುವವರನ್ನ ಭೇಟಿ ಮಾಡಿದ್ದೇವೆ. ಶಾಸಕ ಡಾ ಅಶ್ವತ್ ನಾರಾಯಣ್ ನೇತೃತ್ವದಲ್ಲಿ ಸತ್ಯ ಶೋಧನ ಸಮಿತಿಯನ್ನು ಕಳಹಿಸಲಾಗಿದೆ. ಅಲ್ಲಿ ಎಲ್ಲರನ್ನು ಭೇಟಿ ಮಾಡಿ ಸತ್ಯಾಸತ್ಯತೆ ಅರ್ಥ ಮಾಡಿಕೊಂಡು ವ್ಯವಸ್ಥಿತ ಪಿತೂರಿಯ ಬಗ್ಗೆ ವರದಿ ಕೊಟ್ಟಿದ್ದಾರೆ ಎಂದರು.
ಕಳೆದ ತಿಂಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳು ನಡೆಯುತ್ತಿದೆ. ಸಂಘದ ಕಾರ್ಯಾಲಯಕ್ಕೆ ನುಗ್ಗುತ್ತಾರೆ, ದಾವಣಗೆರೆಯಲ್ಲಿ ಶಾಂತಿಯುತವಾಗಿ ಗಣೇಶ ವಿಸರ್ಜನೆ ವೇಳೆ ಹಿಂದೂಗಳ ಮೇಲೆ ದಾಳಿಯಾಗಿದೆ, ಪೊಲೀಸ್ ಅಧಿಕಾರಿಗಳಿಗೂ ಕಲ್ಲು ಪೆಟ್ಟು ಬಿದ್ದಿದೆ. ಇದನ್ನ ಅವಲೋಕನ ಮಾಡಿದರೆ ರಾಜ್ಯದಲ್ಲಿ ಚುನಾಯಿತ ಸರ್ಕಾರ ,ಪೊಲೀಸ್ ವ್ಯವಸ್ಥೆ ಇದೆ ಎಂಬುದೇ ಅನುಮಾನವಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಇದೆ. ಗೃಹ ಸಚಿವ ಪರಮೇಶ್ವರ್ ಇದ್ದಾರೆ. ಏನೆ ಗಲಭೆ ಆದರೂ ಸರ್ಕಾರ ಕೈಕಟ್ಟಿ ಇರುತ್ತದೆ ಎಂಬುದು ದೇಶದ್ರೋಹಿಗಳಿಗೆ ಭಾವನೆ ಬಂದಿದೆ. ಕಾಂಗ್ರೆಸ್ ಸರ್ಕಾರ ಮೃದು ಧೋರಣೆ ಅನುಸರಿಸುತ್ತದೆ. ಇದರ ಪರಿಣಾಮ ಶಾಂತಿ ವ್ಯವಸ್ಥೆ ಕದಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹಿಂದುಗಳ ಮೇಲೆ ದಾಳಿ ಆಗುತ್ತಿದೆ. ಪೊಲೀಸರು ಕಣಚ್ಚಿ ಕುಳಿತ್ತಿದ್ದಾರೆ. ಅವರಿಗೆ ಅಧಿಕಾರ ಇಲ್ಲವೇ? ಅಲ್ಪಸಂಖ್ಯಾತರಿಂದಲೆ ಕಾಂಗ್ರೆಸ್ ಸರ್ಕಾರ ಬಂದಿದೆ ಎಂದು ಭಾವನೆಯಲ್ಲಿದ್ದಾರೆ. ಬಿಜೆಪಿ ಇದನ್ನ ಗಂಭೀರವಾಗಿ ತೆಗೆದುಕೊಂಡಿದೆ ಎಂದು ಹೇಳಿದರು.