ಬೆಂಗಳೂರು,ಜ.11- ನಗರದ ಮಲೆನಾಡು ಮಿತ್ರವೃಂದದ ವತಿಯಿಂದ ನಾಳೆ ಬೆಳಗ್ಗೆ 10ರಂದ ಸಂಜೆ 5 ಗಂಟೆವರೆಗೆ ಎಚ್‌ಎಂಟಿ ಆಟದ ಮೈದಾನ, ಜಾಲಹಳ್ಳಿ, ಬೆಂಗಳೂರು-560013 ಇಲ್ಲಿ ಮಲೆನಾಡಿಗರ ಕ್ರೀಡಾಕೂಟ-2025 ಅನ್ನು ಆಯೋಜಿಸಲಾಗಿದೆ. 5 ವರ್ಷದ ಒಳಗಿನ ಮಕ್ಕಳಿಗೆ, 5ರಿಂದ 8 ವರ್ಷ ಒಳಗಿನ ಮಕ್ಕಳಿಗೆ, 9ರಿಂದ 12 ವರ್ಷ, 13ರಿಂದ 17 ವರ್ಷ, 18ರಿಂದ 23 ವರ್ಷ, 24ರಿಂದ 34 ವರ್ಷದ ಮತ್ತು ಅದಕ್ಕೂ ಮೇಲ್ಪಟ್ಟದವರ ವಿವಿಧ ವಿಭಾಗಗಳಲ್ಲಿ ಓಟದ ಸ್ಪರ್ಧೆ, ಪಿಕ್ ದ ಬಾಲ್, ಬ್ಯಾಂಗಲ್ ರೇಸ್ ಸ್ಕೂಪ್‌ದ ಬಾಲ್, ಕಪ್ಪೆ ಜಿಗಿತ, ಲಗೋರಿ ಆಟ, ಸ್ಕಿಪ್ಪಿಂಗ್, ಏಮಿಂಗ್ ವಿಕೆಟ್, ಗೋಣಿಚೀಲ ಓಟ, ಥ್ರೋಬಾಲ್ ಎಸೆತ, ಗುಂಡು ಎಸೆತ, ಸ್ಕಿಪ್ಪಿಂಗ್ ರೇಸ್, ಲೆಮನ್ ಇನ್ ಸ್ಪೂನ್, ಮಡಕೆ ಒಡೆಯುವ ಸ್ಪರ್ಧೆ, ಒಂಟಿ ಕಾಲಿನ ಓಟ, ಸ್ಜ್ರಾ ಆ್ಯಂಡ್ ಕಪ್ ಗೇಮ್, ಮ್ಯೂಸಿಕಲ್ ಛೇರ್ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆ, ಹಗ್ಗಜಗ್ಗಾಟ, ವಾಲಿಬಾಲ್, ಥ್ರೋಬಾಲ್ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಪುರುಷರು ಮತ್ತು ಮಹಿಳೆಯರಿಗೆ ಕಡುಬು ತಿನ್ನುವ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ ಮತ್ತು ಅದೃಷ್ಟ ದಂಪತಿಗಳು-2025 ಸ್ಪರ್ಧೆಯನ್ನು ನೆಡಸಲಾಗುತ್ತದೆ. ಈ ಎಲ್ಲಾ ಸ್ಪರ್ಧೆಗಳಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ.
ಮಲೆನಾಡಿಗರು ಕುಟುಂಬ ಸಮೇತರಾಗಿ ಆಗಮಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕೆಂದು ಮಲೆನಾಡು ಮಿತ್ರವೃಂದದ ಅಧ್ಯಕ್ಷ ಪ್ರದೀಪ್ ಹೆಗ್ಗೋಡು ಅವರು ವಿನಂತಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಪ್ರದೀಪ್ ಹೆಗ್ಗೋಡು(ಮೊ: 9945599588), ಸಂದೇಶ್ ಹಂದಿಗೋಡು(ಮೊ: 9945211401) ಮತ್ತು ಅನಿಲ್ ಹೊಸಕೊಪ್ಪ(ಮೊ: 9448241148) ಅವರನ್ನು ಸಂಪರ್ಕಿಸಲು ಕೋರಲಾಗಿದೆ.