Sunday, September 8, 2024
Homeರಾಷ್ಟ್ರೀಯ | Nationalಕೇಜ್ರಿವಾಲ್‌ ನಿವಾಸದ ಬಳಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ಕೇಜ್ರಿವಾಲ್‌ ನಿವಾಸದ ಬಳಿ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

ನವದೆಹಲಿ,ಮೇ 17- ಆಪ್‌ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಹಾಗು ಸಹಾಯಕ ಬಿಭವ್‌ ಕುಮಾರ್‌ ಅವರ ಮೇಲೆ ಹಲ್ಲೆ ಖಂಡಿಸಿ ದೆಹಲಿ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯರು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ನಿವಾಸದ ಬಳಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಸಿದರು.

ಮಹಿಳಾ ಮೋರ್ಚಾ ಅಧ್ಯಕ್ಷೆ ರಿಚಾ ಪಾಂಡೆ ಮಿಶ್ರಾ ನೇತೃತ್ವದಲ್ಲಿ ಬಳೆಗಳನ್ನು ಹಿಡಿದಿದ್ದ ಪ್ರತಿಭಟನಾಕಾರರು ಕೇಜ್ರಿವಾಲ್‌ ರಾಜೀನಾಮೆಗೆ ಒತ್ತಾಯಿಸಿದ್ದರೆ. ಕೇಜ್ರಿವಾಲ್‌ ಅವರ ಅಧಿಕೃತ ನಿವಾಸದಲ್ಲಿ ಸಂಭವಿಸಿದ ಇಂತಹ ಘಟನೆ ನಡೆದಿದ್ದರು ಇನ್ನು ಮೌನವಾಗಿದ್ದರೆ ಎಂದು ಟೀಕಿಸಿ ಮಹಿಳಾ ಮೋರ್ಚಾ ಅವರಿಗೆ ಬಳೆಗಳನ್ನು ನೀಡಲು ಬಯಸಿದೆ ಎಂದು ಮಿಶ್ರಾ ಹೇಳಿದ್ದಾರೆ.

ಹಲ್ಲೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈಗಾಗಲೆ ಎಫ್‌ಐಆರ್‌ ದಾಖಲಿಸಿದ್ದು, ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಕುಮಾರ್‌ ಅವರನ್ನು ಆರೋಪಿ ಎಂದು ಹೆಸರಿಸಿದ್ದಾರೆ.

ಹೆಚ್ಚುವರಿ ಪೊಲೀಸ್‌‍ ಕಮಿಷನರ್‌ ಪಿ ಎಸ್‌‍ ಕುಶ್ವಾಹಾ ನೇತತ್ವದ ಇಬ್ಬರು ಸದಸ್ಯರ ತಂಡವು ಮಲಿವಾಲ್‌ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಎಫ್‌ಐಆರ್‌ ದಾಖಲಿಸಲಾಗಿದೆ. ಈ ವಿಷಯದ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ಕುಮಾರ್‌ಗೆ ಸಮನ್‌್ಸ ನೀಡಿದೆ.

RELATED ARTICLES

Latest News