ಹೊಸಪೇಟೆ : ಆಪರೇಷನ್ ಸಿಂಧೂರ ಬಗ್ಗೆ ಮತ್ತೆ ವ್ಯಂಗ್ಯ ಭರಿತ ಮಾತುಗಳನ್ನಾಡಿ ಕಾಂಗ್ರೆಸ್ ಹೊಸ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದೆ. ಹೊಸಪೇಟೆಯಲ್ಲಿ ಇಂದು ರಾಜ್ಯ ಸರ್ಕಾರದ ಎರಡು ವರ್ಷದ ಸಾಧನೆ ಕುರಿತಂತೆ ನಡೆದ ಸಂಕಲ್ಪ ಸಮರ್ಪಣೆಯ ಸಮಾವೇಶದಲ್ಲಿ ಮಾತನಾಡಿದ ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತಿನ ಬರದಲ್ಲಿ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯನ್ನು ಲಘುವಾಗಿ ಟೀಕಿಸಿದ್ದಾರೆ. ಪಾಕಿಸ್ತಾನದ ಮೇಲೆ ಚುಟ್ ಪುಟ್ ಕಾರ್ಯಾಚರಣೆ ಮಾಡಿದೆ ಎಂದು ಟೀಕಿಸುವ ಮೂಲಕ ಸೇನೆಯನ್ನು ಅಪಮಾನಿಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರ ಈ ಮಾತುಗಳು ಸಾಮಾಜಿಕ ತಾಲತಾಣದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ. ಹಿರಿವೈಸ್ ನಲ್ಲಿ ಅವರ ಅರಳು ಮರಳು ಎಂಬಂತೆ ಮಾತನಾಡುತ್ತಿದ್ದಾರೆ ಎಂದು ನೆಟ್ಟಿಗರು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಹಿರಿಯ ನಾಯಕ ವಿಧಾನ ಪರಿಷತ್ ಸದಸ್ಯ ಪಿ ರವಿಕುಮಾರ್ ಮಾತನಾಡಿ ಖರ್ಗೆ ಅವರು ಈ ರೀತಿ ಮಾತುಗಳು ತೀವ್ರ ಆಕ್ಷೇಪಾರ್ಹ. ಈಗಾಗಲೇ ಪಾಕಿಸ್ತಾನದವರೇ ಕರ್ಚರಣೆಯನ್ನು ಒಪ್ಪಿಕೊಂಡಿರುವಾಗ ಪ್ರತಿಪಕ್ಷವಾಗಿ ಕಾಂಗ್ರೆಸ್ ನವರು ಈ ರೀತಿ ಮಾತುಗಳ ನಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇಶದ ರಕ್ಷಣೆ ವಿಚಾರ ಬಂದಾಗ ಪಕ್ಷಬೇಧ ಮರೆದೆ ಸೇನೆ ಮತ್ತು ಕೇದ್ರ ಸರಕಾರದ ಜೊತೆ ನಿಲ್ಲಬೇಕಾಗಿದ್ದ ಕಾಂಗ್ರೆಸ್ ಸೇನೆಯನ್ನೇ ಬಳಸಿಕೊಂಡು ರಾಜಕೀಯ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.