Tuesday, July 2, 2024
Homeರಾಷ್ಟ್ರೀಯಪ್ರಧಾನಿಯೇ ನೀಟ್‌ ಪರೀಕ್ಷೆ ಹಗರಣದ ಉತ್ತರದಾಯಿಯಾಗಬೇಕಿದೆ : ಖರ್ಗೆ

ಪ್ರಧಾನಿಯೇ ನೀಟ್‌ ಪರೀಕ್ಷೆ ಹಗರಣದ ಉತ್ತರದಾಯಿಯಾಗಬೇಕಿದೆ : ಖರ್ಗೆ

ನವದೆಹಲಿ, ಜೂ.23- ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ನಡೆದ ನೀಟ್‌ ಪರೀಕ್ಷೆಯಲ್ಲಿನ ಹಗರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರದಾಯಿಯಾಗಬೇಕಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನೀಟ್‌ ಹಗರಣದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅವರು, ಕಳೆದ ಹತ್ತು ದಿನಗಳಲ್ಲಿ ನಾಲ್ಕು ಪರೀಕ್ಷೆಗಳು ಮುಂದೂಡಲ್ಪಟ್ಟಿವೆ ಅಥವಾ ರದ್ದುಗೊಂಡಿವೆ ಎಂದು ತಿಳಿಸಿದ್ದಾರೆ.

ಯಾರೋ ಮಾಡುವ ನಿರ್ಣಯಗಳ ಪರಿಣಾಮ ತಪ್ಪಾದಾಗ ಮತ್ತೊಬ್ಬರ ಮೇಲೆ ಜವಾಬ್ದಾರಿ ವಹಿಸುವಂತಹ ಪ್ರಕ್ರಿಯೆ ನಡೆಯುತ್ತಿದೆ. ನೀಟ್‌ ಹಗರಣದ ಹೊಣೆಗಾರಿಕೆ ಮೋದಿ ಸರ್ಕಾರದ ಉನ್ನತ ಶ್ರೇಣಿಯ ವ್ಯಕ್ತಿ ಮನೆಬಾಗಿಲಿನಲ್ಲಿ ನಿಂತಿದೆ. ಆದರೆ ಈ ಹಗರಣದಲ್ಲಿ ಅಧಿಕಾರಿಶಾಹಿಯ ಮೇಲೆ ಹೊಣೆ ಹೊರಿಸಿ ಅಥವಾ ದಂಡಿಸಿ ಸಮಸ್ಯೆಯನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಶೈಕ್ಷಣಿಕ ವ್ಯವಸ್ಥೆಯ ಸಮಸ್ಯೆಗಳ ಬೇರು ಬಿಜೆಪಿಯಾಗಿದೆ. ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರಚಿಸಲಾಗಿತ್ತು. ಆದರೆ ವಾಸ್ತವವಾಗಿ ಅದನ್ನು ಬಿಜೆಪಿ ಮತ್ತು ಆರ್‌ಎಸ್‌‍ಎಸ್‌‍ನ ವಿಭಜಕ ಹಿತಾಸಕ್ತಿಗಳ ರಕ್ಷಣೆಗಾಗಿ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳಿಗೆ ನ್ಯಾಯ ದೊರಕಬೇಕು. ಪ್ರಧಾನಿ ನರೇಂದ್ರ ಮೋದಿ ಉತ್ತರದಾಯಿಯಾಗಬೇಕು. ಈಗ ಸ್ನಾತಕೋತ್ತರ ಪದವಿಯ ನೀಟ್‌ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ನಾಲ್ಕು ಪರೀಕ್ಷೆಗಳೂ ಇದೇ ರೀತಿ ತೊಂದರೆಗಳಗಾಗಿವೆ ಎಂದು ಆರೋಪಿಸಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆ, ಭ್ರಷ್ಟಾಚಾರ, ಅಕ್ರಮ, ಶಿಕ್ಷಣದ ಮಾಫಿಯಾಗಳು ನಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ನುಸುಳಿವೆ.ಕೇಂದ್ರ ಸರ್ಕಾರ ತಡವಾಗಿ ಎಚ್ಚೆತ್ತುಕೊಂಡಿದ್ದು, ಕಣ್ಣೊರೆಸುವ ಕಸರತ್ತು ನಡೆಸುತ್ತಿದೆ. ಅಪರಿಮಿತವಾದಷ್ಟು ಯುವಕರ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ ಎಂದು ಕಿಡಿಕಾರಿದ್ದಾರೆ.

RELATED ARTICLES

Latest News