Sunday, August 31, 2025
Homeಜಿಲ್ಲಾ ಸುದ್ದಿಗಳು | District Newsಕೃಷಿ ಹೊಂಡದಲ್ಲಿ ಪುರುಷ ಹಾಗೂ ಮಹಿಳೆಯ ಶವ ಪತ್ತೆ

ಕೃಷಿ ಹೊಂಡದಲ್ಲಿ ಪುರುಷ ಹಾಗೂ ಮಹಿಳೆಯ ಶವ ಪತ್ತೆ

Man and woman found dead in agricultural pond

ಹನೂರು, ಆ.31– ತಾಲ್ಲೂಕಿನ ಗುಳ್ಳದ ಬಯಲು ಬಳಿಯ ಕೃಷಿ ಜಮೀನಿನ ನೀರಿನ ಹೊಂಡದಲ್ಲಿ ಪುರುಷ ಹಾಗೂ ಮಹಿಳೆಯ ಶವ ಪತ್ತೆಯಾಗಿದೆ. ಮೃತರನ್ನು ಮೀನಾಕ್ಷಿ (38) ಹಾಗೂ ರವಿ (40) ಎಂದು ಗುರುತಿಸಲಾಗಿದೆ.

ಇವರನ್ನು ಕೊಲೆ ಮಾಡಲಾಗಿದೆಯೇ ಅಥವಾ ಆತಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆ ಸದ್ಯಕ್ಕೆ ತಿಳಿದುಬಂದಿಲ್ಲ ಎಂದು ಹನೂರು ಠಾಣೆ ಪೊಲೀಸರು ತಿಳಿಸಿದ್ದಾರೆ.ಇಂದು ಬೆಳಗ್ಗೆ ರೈತರೊಬ್ಬರು ತಮ ಜಮೀನಿಗೆ ಬಂದು ನೋಡಿದಾಗ ಇಬ್ಬರ ಶವಗಳು ತೇಲುತ್ತಿದ್ದವು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಬಂದ ಅವರು ಶವಗಳನ್ನು ಮೇಲೆತ್ತಿದ್ದಾಗ ಇವರಿಬ್ಬರು ಇದೇ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.

ಶವದ ಮೇಲೆ ಗಾಯದ ಗುರುತುಗಳಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಇವರಿಬ್ಬರಿಗೂ ವಿವಾಹವಾಗಿದ್ದು, ಇಲ್ಲಿಗೆ ಹೇಗೆ ಬಂದರು ಎಂಬುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಾರೆ.

RELATED ARTICLES

Latest News