Friday, September 20, 2024
Homeಬೆಂಗಳೂರುಟೆಕ್ಕಿ ಮನೆ ಒಡವೆ ಕದ್ದು 2ನೇ ಹೆಂಡತಿಗೆ ಕೊಟ್ಟಿದ್ದ ಭೂಪನ ಬಂಧನ

ಟೆಕ್ಕಿ ಮನೆ ಒಡವೆ ಕದ್ದು 2ನೇ ಹೆಂಡತಿಗೆ ಕೊಟ್ಟಿದ್ದ ಭೂಪನ ಬಂಧನ

ಬೆಂಗಳೂರು,ಆ.9– ಸಾಫ್ಟ್ ವೇರ್‌ ಎಂಜಿನಿಯರ್‌ ಮನೆಯಲ್ಲಿಯೇ ಕಳುವು ಮಾಡಿದ್ದ ಆಭರಣವನ್ನು ಕಳ್ಳತನ ಮಾಡಿ ಚೆನ್ನೈನಲ್ಲಿದ್ದ ತನ್ನ 2ನೇ ಪತ್ನಿಗೆ ಕೊಟ್ಟಿದ್ದ ಆರೋಪಿ ಸೇರಿ ಇಬ್ಬರನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ 20 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಐಟಿ ಕಂಪನಿಯ ಸಾಫ್‌್ಟವೇರ್‌ ಎಂಜಿನಿಯರ್‌ ಮನೆಯಲ್ಲಿ ನಾರಾಯಣಸ್ವಾಮಿ ಹಾಗೂ ಈತನ 2ನೇ ಪತ್ನಿ ನವೀನಾಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 20 ವರ್ಷಗಳಿಂದ ಆರೋಪಿಯ ತಾಯಿ ಟೆಕ್ಕಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಮಗ ನಾರಾಯಣಸ್ವಾಮಿ ಆಗಾಗ್ಗೆ ಮನೆಗೆ ಬಂದು ಹೋಗುತ್ತಾ ಅವರ ವಿಶ್ವಾಸ ಗಳಿಸಿದ್ದನು.

ಕೆಲಸದ ನಿಮಿತ್ತ ಕುಟುಂಬ ಸಮೇತ ಸಾಫ್ಟ್ ವೇರ್‌ ಎಂಜಿನಿಯರ್‌ ದುಬೈಗೆ ಹೋಗಿದ್ದಾಗ ನಾರಾಯಣಸ್ವಾಮಿಗೆ ಮನೆ ಸ್ವಚ್ಛ ಮಾಡಲು ತಿಳಿಸಿ, ಮನೆಯ ಬೀಗವನ್ನು ನೆಲಮಹಡಿಯಲ್ಲಿರುವ ಅವರ ಸಂಬಂಧಿಕರ ಮನೆಯಲ್ಲಿಕೊಟ್ಟು ಹೋಗಿದ್ದರು.

ನಾರಾಯಣಸ್ವಾಮಿ ಮನೆಗೆ ಬಂದು ಸ್ವಚ್ಛ ಮಾಡುತ್ತಿದ್ದಾಗ ಕೊಠಡಿಯ ಬೀಗ ಮುಗಿದು 20 ಲಕ್ಷ ಬೆಲೆಬಾಳುವ 250 ರಿಂದ 350 ಗ್ರಾಂ ತೂಕದ ಚಿನ್ನಾಭರಣಗಳನ್ನು ಕದ್ದು ಬೀಗ ಹಾಕಿಕೊಂಡು ಹೋಗಿದ್ದನು. ದುಬೈಗೆ ಹೋಗಿದ್ದ ಟೆಕ್ಕಿ ಕುಟುಂಬ ವಾಪಸ್‌‍ ಬಂದಾಗ ಕೊಠಡಿಯಲ್ಲಿದ್ದ ಚಿನ್ನಾಭರಣ ಕಳವುವಾಗಿರುವುದು ಗಮನಕ್ಕೆ ಬಂದಿದೆ.

ಮನೆ ಸ್ವಚ್ಛ ಮಾಡಲು ಬರುತ್ತಿದ್ದವನೇ ಕಳುವು ಮಾಡಿರಬಹುದೆಂದು ಅನುಮಾನ ವ್ಯಕ್ತಪಡಿಸಿ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಮನೆ ಕೆಲಸದವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ.

ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ತನ್ನ ಎರಡನೇ ಪತ್ನಿಗೆ ನೀಡಿರುವುದಾಗಿ ತಿಳಿಸಿದ್ದು, ನಂತರ ತನಿಖೆಯನ್ನು ಮುಂದುವರೆಸಿ, ಚೆನೈನ ರಾಜೇಶ್ವರಿನಗರದಲ್ಲಿರುವ ಆತನ 2ನೇ ಪತ್ನಿಯನ್ನು ವಶಕ್ಕೆ ಪಡೆದು ಚಿನ್ನಾಭರಣದ ಬಗ್ಗೆ ವಿಚಾರಿಸಿದಾಗ ಆಕೆ ಗಿರವಿ ಇಟ್ಟಿರುವುದಾಗಿ ತಿಳಿಸಿದ್ದಾಳೆ.

ಆಕೆ ಕೆಲಸ ಮಾಡುವ ಪಾರ್ಲರ್‌ ಮಾಲೀಕರ ಬಳಿ ಗಿರಿವಿ ಇಟ್ಟಿದ್ದ ಸುಮಾರು 135 ಗ್ರಾಂ ಚಿನ್ನದ ನೆಕ್ಲೇಸ್‌‍ನ್ನು ವಶಪಡಿಸಿಕೊಂಡಿರುತ್ತದೆ.
ಉಳಿದ ಆಭರಣಗಳನ್ನು ವಿವಿಧ ಫೈನಾನ್ಸ್ ಕಂಪನಿಗಳಲ್ಲಿ ಗಿರವಿ ಇಟ್ಟಿದ್ದ 198 ಗ್ರಾಂತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಒಟ್ಟು 20,74,400 ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಇನ್‌್ಸಪೆಕ್ಟರ್‌ ರವಿಕುಮಾರ್‌.ಸಿ ಮತ್ತು ಸಿಬ್ಬಂದಿ ತಂಡ ಯಶಸ್ವಿಯಾಗಿದೆ.

RELATED ARTICLES

Latest News