ಮುಂಬೈ, ಮೇ 17- ಅಕ್ರಮವಾಗಿ ದ್ಯತ್ಯಫಲಕ ಹಾಕಿ ಅದು ಗಾಳಿಗೆ ಉರುಳಿ 16 ಜನರ ಸಾವಿಗೆ ಕಾರಣರಾದ ಜಾಹೀರಾತು ಸಂಸ್ಥೆಯ ನಿರ್ದೇಶಕ ಭವೇಶ್ ಭಿಂಡೆಯನ್ನು ಬಂಧಿಸಿದ ಪೊಲೀಸರು ಇಂದು ಮುಂಜಾನೆ ಮುಂಬೈ ನಗರಕ್ಕೆ ಕರೆತಂದಿದ್ದಾರೆ.
ಇಗೋ ಮೀಡಿಯಾ ಕಂಪನಿ ಜಾಹೀರಾತು ಸಂಸ್ಥೆ ನಿರ್ದೇಶಕ ಭಿಂಡೆ ಅವರನ್ನು ರಾಜಸ್ಥಾನದ ಉದಯಪುರದಿಂದ ಕಳೆದ ರಾತ್ರಿ ಬಂಧಿಸಲಾಗಿದೆ. ನಂತರ ಅವರನ್ನು ಅಹಮದಾಬಾದ್‌ಗೆ ಕರೆದೊಯ್ದು ಕಾನೂನು ಪ್ರಕ್ರಿಯೆ ಮುಗಿಸಿ ಅಲ್ಲಿಂದ ವಿಮಾನದ ಮೂಲಕ ಮುಂಬೈಗೆ ಮುಂಜಾನೆ ಕರೆತರಲಾಯಿತು ಎಂದು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ತಂಡವು ಮುಂಜಾನೆ 5 ಗಂಟೆಗೆ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿತು ಮತ್ತು ಅವರನ್ನು ಅಪರಾಧ ವಿಭಾಗದ ಕಚೇರಿಗೆ ಕರೆದೊಯ್ಯಲಾಯಿತು, ವಿಚಾರಣೆ ಬಳಿಕ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಹೇಳಿದರು.
ಕಳೆದ ಮೂರು ದಿನಗಳ ಕಾಲ ಆರೋಪಿಗಾಗಿ ಹುಡುಕಾಟ ನಡೆಸಲಾಗಿತ್ತು, ಕೊನಗೂ ಸಿಕ್ಕಿಬಿದ್ದಿದ್ದಾರೆ ಆಕ್ರಮದ ಬಗ್ಗೆ ತನಿಖೆ ನಡೆಯಲಿದೆ ಎಂದರು. ಘಾಟ್‌ಕೋಪರ್‌ನ ಛೇದನಗರ ಪ್ರದೇಶದಲ್ಲಿ 120 ಅಡಿ ಎತ್ತರ ಹಾಗು 120 ಉದ್ದದ ಅಡಿ ಹೋರ್ಡಿಂಗ್ ಅನ್ನು ಪೆಟ್ರೋಲ್ ಪಂಪ್‌ನ ಮೇಲೆ ಹಾಕಲಾಗಿತ್ತು ಸೋಮವಾರ ಸಂಜೆ ಜೋರಾದ ಗಾಳಿ ಮತ್ತು ಭಾರೀ ಅಕಾಲಿಕ ಮಳೆಯ ಸಮಯದಲ್ಲಿ ಅದು ಕುಸಿದು ಅದರ ಕೆಳಗೆ ಸಿಲುಕಿ 16 ಜನರು ಸಾವನ್ನಪ್ಪಿದರು ಮತ್ತು 75 ಜನರು ಗಾಯಗೊಂಡರು.
ದುರಂತದ ನಂತರ, ಜಾಹೀರಾತು ಸಂಸ್ಥೆ ಇಗೋ ಮೀಡಿಯಾದ ಎಲ್ಲಾ ನಿರ್ದೇಶಕರು, ಅದರ ಅಧಿಕಾರಿಗಳು ಮತ್ತು ಉದ್ಯೋಗಿಗಳ ವಿರುದ್ಧ ಪಂತ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.