ಭೋಪಾಲ್, ಫೆ.18– ಗ್ಯಾಸ್‌ಸ್ಟವ್‌ನಿಂದ ಬೀಡಿಗೆ ಬೆಂಕಿ ಹಚ್ಚಲು ಹೋಗಿದ್ದ ವ್ಯಕ್ತಿ ಬೆಂಕಿಯಲ್ಲಿ ಜೀವಂತ ದಹಿಸಿ ಹೋಗಿರುವ ಘಟನೆ ಭೋಪಾಲ್‌ನಲ್ಲಿ ನಡೆದಿದೆ. ರಾತ್ರಿ ವೇಳೆ ಬೀಡಿ ಸೇದುವ ಉದ್ದೇಶದಿಂದ ಬೀಡಿಗೆ ಬೆಂಕಿ ಹಚ್ಚಲು ವೃದ್ಧರೊಬ್ಬರು ಗ್ಯಾಸ್ ಸ್ಟವ್ ಆನ್ ಮಾಡಿ ಬೀಡಿಗೆ ಬೆಂಕಿ ಹಚ್ಚಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಗ್ಯಾಸ್ ಆನ್ ಮಾಡಿ ಲೈಟರ್‌ಗಾಗಿ ಹುಡುಕಾಡುತ್ತಿದ್ದಾಗ ಸ್ಟವ್‌ನಿಂದ ಗ್ಯಾಸ್ ಸೋರಿಕೆಯಾಗುತ್ತಲೇ ಇತ್ತು. ಸ್ವಲ್ಪ ಸಮಯದ ನಂತರ ಲೈಟರ್ ಸಿಕ್ಕಿತ್ತು. ಆದರೆ ಆ ಹೊತ್ತಿಗೆ ಅಡುಗೆ ಮನೆಯಾದ್ಯಂತ ಗ್ಯಾಸ್ ಸಂಗ್ರಹವಾಗಿತ್ತು. ಲೈಟರ್ ಹಚ್ಚಿದ ಕ್ಷಣ ಬೆಂಕಿ ಇಡೀ ಮನೆಯನ್ನೇ ಆವರಿಸಿತು.
ಬೆಂಕಿಯ ಕೆನ್ನಾಲಿಗೆಯಿಂದ ವೃದ್ಧ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಜೀವಂತವಾಗಿ ದಹಿಸಿ ಹೋದರು. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ಅವರ ಇಬ್ಬರು ಗಂಡು ಮಕ್ಕಳು ಸ್ಪೋಟದ ಶಬ್ದ ಕೇಳಿ ಓಡಿ ಬಂದರು, ಅವರು ಕುಟುಂಬದ ಉಳಿದವರನ್ನು ಕರೆದು ಬೆಂಕಿ ನಂದಿಸಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಸುಟ್ಟಗಾಯಗಳ ಪ್ರಮಾಣ ಹೆಚ್ಚಾದ ಕಾರಣ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.