Thursday, December 12, 2024
Homeರಾಷ್ಟ್ರೀಯ | Nationalಕುಟುಂಬದ 8 ಸದಸ್ಯರನ್ನು ಕೊಚ್ಚಿ ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕುಟುಂಬದ 8 ಸದಸ್ಯರನ್ನು ಕೊಚ್ಚಿ ಕೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಛಿಂದಾ ,ಮೇ 29 -ವ್ಯಕ್ತಿಯೊಬ್ಬ ತನ್ನ ಅವಿಭಕ್ತ ಕುಟುಂಬದ ಎಂಟು ಮಂದಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬೀಕರ ಘಟನೆ ಮಧ್ಯಪ್ರದೇಶದ ಚಿಂದ್ವಾರಾ ಜಿಲ್ಲೆಯಲ್ಲಿ ಬೋದಲ್‌ ಕಚರ್‌ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.

ಜಿಲ್ಲಾ ಕೇಂದ್ರದಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಗ್ರಾಮಕ್ಕೆ ಚಿಂದ್ವಾರ ಜಿಲ್ಲಾಧಿಕಾರಿ, ಪೊಲೀಸ್‌‍ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ದೌಡಾಯಿಸಿದ್ದಾರೆ.

ಮನೆಯಲ್ಲಿ ರಕ್ತದ ಚೆಲ್ಲಾಡಿದ್ದು ಭೀಕರ ದೃಶ್ಯ ಕಂಡವರು ದಿಗ್ರಮೆ ವ್ಯಕ್ತಪಡಿಸಿದ್ದಾರೆ. ನರಮೇಧ ಮಾಡಿದ ದುಷ್ಠನ ಶವ ಕೂಡ ಸ್ಥಳದಲ್ಲೇ ನೇತಾಡುತ್ತಿದೆ. ಘಟನೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಎಂದು ಮಹುಲ್ಜಿರಿ ಪೊಲೀಸ್‌‍ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಅವಿಭಕ್ತ ಕುಟುಂಬದಲ್ಲಿ ಯಾವುದೇ ಬಿನ್ನಾಭಿಪ್ರಾಯ ಇರಲಿಲ್ಲ ಆದರೆ ಈ ಘಟನೆ ನಮನ್ನು ಬೆಚ್ಚಿಬೀಳಿಸಿದೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ. ಭಯಾನಕ ಘಟನೆ ಮುಂಜಾನೆ 2 ರಿಂದ 3 ಗಂಟೆ ನಡುವೆ ನಡೆದಿದೆ ಪೊಲೀಸರ ಪ್ರಕಾರ ಆರೋಪಿ ಮಾನಸಿಕ ಅಸ್ವಸ್ಥ ಎಂದು ವರದಿಯಾಗಿದೆ.

ಆತ ಯಾವುದಾದರೂ ಮಾದಕ ವ್ಯಸನಿಯಾಗಿದ್ದನೇ ಎಂಬ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ಆರೋಪಿಯು ತನ್ನ ಪತ್ನಿಯೊಂದಿಗೆ ಜಗಳವಾಡಿದ್ದು, ಈ ಜಗಳದ ವಿಕೋಪಕ್ಕೆ ಹೋಗಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಕುಟುಂಬದ ಒಂದು ಮಗು ದಾಳಿಯಿಂದ ಪಾರಾಗಿ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಬದುಕುಳಿಯುವಲ್ಲಿ ಯಶಸ್ವಿಯಾಗಿದೆ. ಮೃತರ ಶವಗಳು ಮನೆಯೊಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

RELATED ARTICLES

Latest News