ಲಕ್ನೋ,ಜ.1- ಹೊಸ ವರ್ಷದ ದಿನವೇ ವ್ಯಕ್ತಿಯೊಬ್ಬ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಾಯಿ ಹಾಗೂ ನಾಲ್ವರು ಸಹೋದರಿಯರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಕೊಲೆ ಆರೋಪಿಯನು ್ನ ಆಗ್ರಾ ಮೂಲದ ಅರ್ಷದ್ (24) ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಕಾರಣದಿಂದ ಈ ಕ್ರಮ ಕೈಗೊಂಡಿರುವುದಾಗಿ ಆತ ಪ್ರಾಥಮಿಕ ವಿಚಾರಣೆಯ ವೇಳೆ ತಪ್ಪೋಪ್ಪಿಕೊಂಡಿದ್ದಾನೆ.ಮತರನ್ನು ಅರ್ಷದ್‌ನ ಸಹೋದರಿಯರಾದ ಅಲಿಯಾ (9), ಅಲ್ಶಿಯಾ (19), ಅಕ್ಸಾ (16) ಮತ್ತು ರಹಮೀನ್ (18) ಎಂದು ಗುರುತಿಸಲಾಗಿದೆ. ಐದನೆಯವಳು ಆರೋಪಿಯ ತಾಯಿ ಅಸಾ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ನೋದ ನಾಕಾ ಪ್ರದೇಶದ ಹೋಟೆಲ್ ಶರಣಜಿತ್‌ನಲ್ಲಿ ಈ ಘಟನೆ ನಡೆದಿದೆ ಎಂದು ಕೇಂದ್ರ ಲಕ್ನೋದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರವೀನಾ ತ್ಯಾಗಿ ಹೇಳಿದ್ದಾರೆ.ಆರೋಪಿ ತನ್ನ ಸ್ವಂತ ಕುಟುಂಬದ ಐವರನ್ನು ಕೊಂದಿದ್ದಾನೆ. ಭೀಕರ ಕತ್ಯದ ನಂತರ, ಸ್ಥಳೀಯ ಪೊಲೀಸರು ಅಪರಾಧದ ಸ್ಥಳದಿಂದ ಆರೋಪಿಯನ್ನು ತ್ವರಿತವಾಗಿ ಬಂಧಿಸಿದ್ದಾರೆ ಎಂದು ಡಿಸಿಪಿ ತ್ಯಾಗಿ ಹೇಳಿದರು.
ಈ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ಫೋರೆನ್ಸಿಕ್ ತಂಡಗಳನ್ನು ಅಪರಾಧ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಡಿಸಿಪಿ ತ್ಯಾಗಿ ಹೇಳಿದ್ದಾರೆ.