Saturday, January 11, 2025
Homeರಾಷ್ಟ್ರೀಯ | Nationalಹೆಂಡತಿಯನ್ನು ಕತ್ತರಿಸಿ ಸುಟ್ಟುಹಾಕಿದವನ ಬಂಧನ

ಹೆಂಡತಿಯನ್ನು ಕತ್ತರಿಸಿ ಸುಟ್ಟುಹಾಕಿದವನ ಬಂಧನ

ಶ್ರೀನಗರ(ಜಮ್ಮು)ಜ.11- ಹೆಂಡತಿಯನ್ನು ಅಮಾನುಷವಾಗಿ ಕೊಂದ ವ್ಯಕ್ತಿಯೊಬ್ಬ ತನ್ನ ತಾಯಿಯ ಸಹಾಯದಿಂದ ಆಕೆ ದೇಹವನ್ನು ತುಂಡುತುಂಡುಗಳಾಗಿ ಮಾಡಿ ಕೊಟ್ಟಿಗೆಯಲ್ಲಿ ಸುಟ್ಟು ಹಾಕಿದ ಘಟನೆ ದಕ್ಷಿಣ ಕಾಶೀರದ ಅನಂತನಾಗ್‌ನ ಐಶ್‌ಮುಕಂನ ಪಹಾಲ್‌ಗ್ರಾಮ್‌ನಲ್ಲಿ ನಡೆದಿದೆ. ಈ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ಇಮ್ರಾನ್‌ ಅಹಮದ್‌ಖಾನ್‌ ಮತ್ತು ಆತನ ತಾಯಿ ಬಂಧಿತ ಆರೋಪಿಗಳು.
ಕಳೆದ ಅಕ್ಟೋಬರ್‌ನಲ್ಲಿ ಈ ಭೀಕರ ಕೊಲೆ ಗಂಡನಿಂದಲೇ ನಡೆದಿದೆ ಎಂಬುದನ್ನು ಪತ್ತೆಹಚ್ಚಿದ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ತನಿಖೆಯಲ್ಲಿ ಕೊಲೆಯ ವಿಷಯ ಬಾಯ್ಬಿಟ್ಟ ಈತ ಅಕ್ಟೋಬರ್‌ 4 ರಂದು ತನ್ನ ಹೆಂಡತಿಯನ್ನು ಕೊಂದು ಬಳಿಕ ಆಕೆಯನ್ನು ತುಂಡುತುಂಡಾಗಿ ಕತ್ತರಿಸಿ ಕೊಟ್ಟಿಗೆಯಲ್ಲಿ ಸುಟ್ಟುಹಾಕಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ದುಷ್ಕೃತ್ಯವೆಸಗಿದ ಬಳಿಕ ಇಮ್ರಾನ್‌ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್‌‍ ಠಾಣೆಗೆ ದೂರು ನೀಡಿದ್ದ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಹತ್ತು ದಿನಗಳ ಬಳಿಕ ಮನೆಯ ಕೊಟ್ಟಿಗೆಯಲ್ಲಿ ಮೃತದೇಹದ ಮೂಳೆ ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿದ್ದವು. ಮೃತಪಟ್ಟ ಮಹಿಳೆ ಈತನಿಗೆ ಎರಡನೇ ಹೆಂಡತಿಯಾಗಿದ್ದು, ಈಕೆಯನ್ನು ಕೊಲೆ ಮಾಡಿದ ಬಳಿಕ ತನ್ನ ಮೊದಲ ಹೆಂಡತಿ ಜೊತೆ ಜೀವನ ಮಾಡಲು ಶುರು ಮಾಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಸ್ಥಳಕ್ಕೆ ಆಗಮಿಸಿದ್ದ ಎಫ್‌ಎಸ್‌‍ಎಲ್‌ ತಂಡ ಸ್ಥಳದಲ್ಲಿದ್ದ ಕೊಲೆಯಾದ ಮಹಿಳೆಯ ಮೂಳೆ, ಕೂದಲು ಹಾಗೂ ಮೊಬೈಲ್‌ ಅನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಹೀನಕೃತ್ಯಕ್ಕೆ ಸಹಾಯ ಮಾಡಿದ ಇಮ್ರಾನ್‌ ತಾಯಿಯನ್ನೂ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News