Thursday, November 14, 2024
Homeಜಿಲ್ಲಾ ಸುದ್ದಿಗಳು | District Newsಹಾಸನ / Hassanಎಟಿಎಂನಲ್ಲಿ ಹಣ ಹಾಕಲು ಹೋಗಿ 39,500 ರೂ. ಕಳೆದುಕೊಂಡ ವ್ಯಕ್ತಿ

ಎಟಿಎಂನಲ್ಲಿ ಹಣ ಹಾಕಲು ಹೋಗಿ 39,500 ರೂ. ಕಳೆದುಕೊಂಡ ವ್ಯಕ್ತಿ

Man lost Rs. 39,500 money while depositing in an ATM

ಹಾಸನ,ನ.13- ಎಟಿಎಂ ಮಷೀನ್‌ನಲ್ಲಿ ಹಣ ಡೆಪಾಸಿಟ್‌ ಮಾಡಲು ಬಂದಿದ್ದ ವೇಳೆ ಬೇಜವಾಬ್ದಾರಿಯಿಂದಾಗಿ ವ್ಯಕಿಯೊಬ್ಬ 39,500 ರೂ. ಹಣವನ್ನು ಕಳೆದುಕೊಂಡ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಜಿಲ್ಲೆಯ ಚನ್ನರಾಯಪಟ್ಟಣದ ಆಕ್ಸಿಸ್‌‍ ಬ್ಯಾಂಕ್‌ನ ಲಾಬಿ ಮಿಷನ್‌ನಲ್ಲಿ ಸೋಹನ್‌ ಲಾಲ್‌ ಎಂಬುವರು ಹಣ ಹಾಕಲು ಬಂದಿದ್ದಾರೆ.

40,000 ಹಣವನ್ನು ಲಾಬಿ ಮಿಷನ್‌ಗೆ ಹಾಕಿದ ವೇಳೆ ತಾಂತ್ರಿಕ ಕಾರಣದಿಂದ 500 ರೂ. ವಾಪಸ್‌‍ ಬಂದಿದೆ. ಉಳಿದ 39,500 ಹಣ ಲಾಬಿ ಮಿಷನ್‌ ಮೂಲಕ ಡೆಪಾಸಿಟ್‌ ಆಗಿದೆ ಎಂದು ತಪ್ಪು ತಿಳಿದು ನೋಟ್‌ ಬದಲಿಸಿಕೊಳ್ಳಲು ಬ್ಯಾಂಕಿನ ಒಳಗೆ ಹೋಗಿದ್ದಾರೆ.

ಇದೆ ವೇಳೆ ಹಣ ಪಡೆಯಲು ಎಟಿಎಂ ಕೇಂದ್ರಕ್ಕೆ ಬಂದ ಇಬ್ಬರು ಅಪರಿಚಿತರು ಲಾಬಿ ಮಿಷನ್‌ನಿಂದ ಹೊರಗೆ ಬಂದ 39,500 ಹಣವನ್ನು ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.

ಅಪರಿಚಿತರು ಎಟಿಎಂನಿಂದ ಹಣ ಪಡೆಯುತ್ತಿರುವ ವಿಡಿಯೋ ಸಿಸಿ ಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು, ಚನ್ನರಾಯಪಟ್ಟಣ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Latest News